ಕಾಮಕಸ್ತೂರಿಯ ಔಷಧಿ ಗುಣಗಳು!

ಕಾಮಕಸ್ತೂರಿಯ ಔಷಧಿ ಗುಣಗಳು : ಕಾಮಕಸ್ತೂರಿ ಗಿಡವು ತುಳಸಿಯನ್ನು ಹೋಲುತ್ತದೆ. ಇದನ್ನು ಮನೆಯಂಗಳದಲ್ಲಿ ಮತ್ತು ತೋಟಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಕಾಮಕಸ್ತೂರಿ ತುಂಬಾ ಸುವಾಸನೆಯನ್ನು ಹೊಂದಿರುತ್ತದೆ. ಇದರ ಬೀಜಗಳನ್ನು ಹೆಚ್ಚಾಗಿ ಬಳಸುತ್ತಾರೆ…ಕಾಮಕಸ್ತೂರಿಯನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದರು. ಇದು ಕೂಡ ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿರುತ್ತದೆ. ಕಾಮಕಸ್ತೂರಿಯು ದೇಹಕ್ಕೆ ತಂಪನ್ನು ನೀಡುತ್ತದೆ. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಾಮಕಸ್ತೂರಿಯು ಅನೇಕ ರೋಗಗಳಿಗೆ ಮನೆಮದ್ದಾಗಿದೆ ಯಾವುದೆಲ್ಲ ಉಪಯೋಗ ಪಡೆಯಬಹುದು ತಿಳಿಯೋಣ ಬನ್ನಿ.

# ಕಾಮಕಸ್ತೂರಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.

#ಎಲೆಯನ್ನು ಕುದಿಸಿ ಕಷಾಯ ಮಾಡಿ, ಜೇನುತುಪ್ಪ ಬೆರೆಸಿ ಕುಡಿದರೆ ಶೀತಬಾಧೆ ಗುಣವಾಗುತ್ತದೆ.-

#ಕಾಮಕಸ್ತೂರಿ ಬೀಜವನ್ನು ಸಕ್ಕರೆಯ ಜೊತೆ ಸೇರಿಸಿ ಸೇವನೆ ಮಾಡುವುದು ನಿಮ್ಮ ದೇಹದಿಂದ ವಿಷದ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

#ಇನ್ನೂ ಮೂಗಿನಿಂದ ನೀರು ಸೋರುವುದು ಶೀತ ಮತ್ತು ಜ್ವರಕ್ಕೆ ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ ಕಾಲು ಚಮಚ ಒಳಗೆ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತಾ ದೂರವಾಗುತ್ತದೆ ಇನ್ನು ಬೇಸಿಗೆಯಲ್ಲಿ ತಂಪಾದ ಶರಬತ್ತನ್ನು ಮಾಡಿ ಕುಡಿಯುವುದರಿಂದ ಬಾಯಾರಿಕೆ ಯು ಕಡಿಮೆಯಾಗುತ್ತದೆ

#ಇನ್ನು ರಕ್ತಬೇದಿಗೆ 1 ಟೀ ಚಮಚ ಕಸ್ತೂರಿ ಬೀಜವನ್ನು ಒಂದು ಬಟ್ಟಲು ತಣ್ಣೀರಿಗೆ ಬೆರೆಸಿ ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ಕಡಿಮೆಯಾಗುತ್ತದೆ ಇನ್ನೂ ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ ಕಾಮಕಸ್ತೂರಿ ಗಿಡದ ಹೂಗಳನ್ನು ಸೇವಿಸುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಗೆ ಅನುವುಮಾಡಿಕೊಡುತ್ತದೆ.

#ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಲ್ಲಿ ನೆನೆಸಿ, ಬೆಳಗ್ಗೆ ಆ ನೀರನ್ನು ಸಕ್ಕರೆ ಜೊತೆ ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ.-

#ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ:ಈಗಾಗಲೇ ಬೇಸಿಗೆ ಕಾಲ ಶುರುವಾಗುತ್ತಿದೆ.ನೀವು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಈ ಕಾಮಕಸ್ತೂರಿ ಬೀಜಗಳನ್ನು ಸೇವನೆ ಮಾಡಬಹುದು.ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಬೀಜಗಳನ್ನು ಬೆರಸಿರುವ ಜ್ಯೂಸ್‌, ಮಿಲ್ಕ್‌ ಶೇಕ್‌, ಫಾಲುಡಾದಂತಹ ದ್ರವ ಪದಾರ್ಥಗಳ ರುಚಿಯನ್ನು ನೀವು ಸವಿದಿರಬಹುದು.ಈ ಬೀಜಗಳು ಅತ್ಯುತ್ತಮವಾದ ಶೀತಕಗಳಲ್ಲಿ ಒಂದಾಗಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.

#ಹೂವುಗಳನ್ನು ನೀರಿನಲ್ಲಿ ಅರೆದು, ಬೆಳಗ್ಗೆ ಮತ್ತು ರಾತ್ರಿ ಜೇನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಗುಣವಾಗುತ್ತದೆ.

#ತೂಕವನ್ನು ಕಳೆದುಕೊಳ್ಳಿ : ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುವವರಿಗೆ, ಕಾಮ ಕಸ್ತೂರಿ ಬೀಜ ರಾಮಬಾಣದಂತೆ. ಏಕೆಂದರೆ ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ. ಈ ಬೀಜಗಳನ್ನು ತಿನ್ನುವುದರಿಂದ, ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ. ಇದರಿಂದಾಗಿ ತೂಕವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group