ಕೆಮ್ಮಿನ ಸಮಸ್ಯೆಗೆ ಸುಲಭ ಮದ್ದು..!

ಮನುಷ್ಯನಿಗೆ ಉಂಟಾಗುವ ಕೆಮ್ಮಿನ ಸಮಸ್ಯೆ ಕೇವಲ ಶೀತದ ವಾತಾವರಣದ ಪ್ರಭಾವ ಎಂದು ಭಾವಿಸಲು ಸಾಧ್ಯವಿಲ್ಲ. ಏಕೆಂದರೆ ನಾವು ಉಸಿರಾಡುವ ಗಾಳಿಯಲ್ಲಿ ನಮಗೆ ಕೆಮ್ಮು ಸಮಸ್ಯೆಯನ್ನು ಉಂಟು ಮಾಡುವ ಹಲವಾರು ಅಂಶಗಳು ಅಡಗಿರುತ್ತವೆ.ಒಂದು ವೇಳೆ ಇಂತಹ ವಾತಾವರಣದಲ್ಲಿ ನೀವು ಇದ್ದರೆ, ಮತ್ತು ಇಂತಹ ಸಮಸ್ಯೆಯನ್ನು ಅದಾಗಲೇ ಅನುಭವಿಸುತ್ತಿದ್ದರೆ, ಈ ಕೆಳಗೆ ನಾವು ಹೇಳಿರುವಂತೆ ಕೆಲವೊಂದು ಪರಿಹಾರಗಳನ್ನು ಪ್ರಯತ್ನಿಸಿ ನೋಡಿ.

#ಜೇನುತುಪ್ಪ ಮತ್ತು ದಾಲ್ಚಿನ್ನಿಯ ಕಷಾಯ:ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಕೆಲವು ನಿಮಿಷಗಳ ಕಾಲ ಬೇಯಿಸಿದ ಬಳಿಕ ಒಲೆಯಿಂದ ಇಳಿಸಿ ಒಂದು ಲೋಟಕ್ಕೆ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಸಾಧ್ಯವಾದಷ್ಟು ಬಿಸಿಯಾಗಿರುವಾಗಲೇ ಕುಡಿಯುವ ಮೂಲಕ ಕೆಮ್ಮಿಗೆ ಮತ್ತು ಶೀತಕ್ಕೆ ಶೀಘ್ರ ಉಪಶಮನ ದೊರಕುತ್ತದೆ.

#ಶುಂಠಿಯು ಸಹ ನಿಮ್ಮ ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. 2013ರಲ್ಲಿ ನಡೆದಂತಹ ಒಂದು ಅಧ್ಯಯನದ ಪ್ರಕಾರ ಬಿಸಿ ನೀರಿನಲ್ಲಿ ಮುಳುಗಿಸಿಟ್ಟ ಶುಂಠಿ ಸಾಮಾನ್ಯ ಶೀತವನ್ನು ಕಡಿಮೆ ಮಾಡುತ್ತದೆ.ಶುಂಠಿಯು ಪ್ರೋಕೈನೆಟಿಕ್ ಪರಿಣಾಮವನ್ನು ಹೊಂದಿದ್ದು, ಇದು ನೀವು ತಿಂದಂತಹ ಆಹಾರವನ್ನು ನಿಮ್ಮ ಹೊಟ್ಟೆ ಮತ್ತು ಸಣ್ಣ ಕರುಳಿನ ಮೂಲಕ ಆಹಾರವನ್ನು ಬೇಗನೆ ಸಾಗಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸಹ ವೇಗಗೊಳಿಸುತ್ತದೆ ಮತ್ತು ಇದರಿಂದ ನಿಮ್ಮ ಶೀತವನ್ನು ಸಹ ನಿವಾರಿಸುತ್ತದೆ ಒಂದು ಕಪ್ ಶುಂಠಿ ಚಹಾವನ್ನು ತಯಾರಿಸಿಕೊಂಡು ಕುಡಿಯಿರಿ. ಒಂದು ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಒಂದು ಕಪ್ ನೀರಿನಲ್ಲಿ ಹಲವಾರು ನಿಮಿಷಗಳ ಕಾಲದವರೆಗೆ ನೆನೆಸಿಡಿ ಮತ್ತು ನಂತರ ಅದನ್ನು ಬಳಸಿ.

#ತುಳಸಿ ಎಲೆ:ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ತುಳಸಿ ಎಲೆಗೆ ಜೇನುತುಪ್ಪವನ್ನು ಸಿಂಪಡಿಸಿ ತಿನ್ನುವುದರಿಂದಲೂ ಕೆಮ್ಮು ಕಡಿಮೆಯಾಗುತ್ತದೆ. ಸುಮಾರು 15 ದಿನಗಳವರೆಗೆ ಈ ಕ್ರಮವನ್ನು ಅನುಸರಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

#ಈರುಳ್ಳಿಯನ್ನು ಬೆಳಗ್ಗಿನ ಹೊತ್ತಿನಲ್ಲಿ ಈರುಳ್ಳಿಯನ್ನು ಒಂದು ಬಟ್ಟಲಿನಲ್ಲಿ ತುಂಡು ಮಾಡಿ ಅದನ್ನು ನೀವು ಕುಡಿಯುವ ನೀರಿಗೆ ಹಾಕಿ 10 ನಿಮಿಷಗಳ ಬಳಿಕ ಅದನ್ನು ಚಮಚದ ಸಹಾಯದಿಂದ 3 ರಿಂದ 4 ಬಾರಿ ಸೇವಿಸಬೇಕು. ಈ ಮಿಶ್ರಣ ಕಫ‌ವನ್ನು ಕರಗಿಸಿ ಕೆಮ್ಮು ಬರದಂತೆ ತಡೆಯುವುದಲ್ಲದೆ ಗಂಟಲು ಕೆರೆತವನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ತಾಜಾ ತಾಜಾ ಇರುವಂತೆ ಸೇವಿಸಬೇಕು ಯಾವುದೇ ಕಾರಣಕ್ಕೂ ಇದು ತುಂಬಾ ಸಮಯ ನೀರಿನಲ್ಲಿ ಇಡಬಾರದು.

#ಅಶ್ವಗಂಧ: ಆಯುರ್ವೇದ ಪದ್ಧತಿಯ ರಾಜ ಎಂದು ಇದನ್ನು ಕರೆಯಬಹುದು. ಏಕೆಂದರೆ ಬಹುತೇಕ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಪರಿಹಾರಗಳನ್ನು ಕಂಡುಹಿಡಿಯುವ ಸಂದರ್ಭದಲ್ಲಿ ತಯಾರಾಗುವ ಔಷಧಿಗಳಲ್ಲಿ ಅಶ್ವಗಂಧ ಇದ್ದೇ ಇರುತ್ತದೆ.ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಕೆಮ್ಮಿಗೆ ಕಾರಣವಾಗುವ ಅಲರ್ಜಿ ಅಂಶಗಳನ್ನು ದೂರಮಾಡುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ಅಶ್ವಗಂಧ ಬೇರು ಮತ್ತು ಪುಡಿ ಕೂಡ ಸೇವಿಸಲು ಸಿಗುತ್ತದೆ. ಆದರೆ ಇದನ್ನು ಸಹ ವೈದ್ಯರ ನಿರ್ದೇಶನದಂತೆ ಮಾತ್ರ ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group