ಮೊಡವೆ ನಿವಾರಣೆಗೆ ಮನೆಮದ್ದು!

ಮೊಡವೆ ಉಂಟಾಗಲು ಕಾರಣವೇನು?

ಮುಖದ ತುಂಬಾ ಮೊಡವೆಗಳು ಹರಡಿದರೆ, ಹೊರಗಿನ ಜಗತ್ತಿಗೆ ಮುಖ ತೋರಿಸುವುದು ಮತ್ತು ಜನರ ಮಧ್ಯೆ ನಗು ನಗುತ್ತಾ ಮಾತನಾಡುವುದು ಸ್ವಲ್ಪ ಕಷ್ಟದ ಕೆಲಸವಾಗುತ್ತದೆ. ನಮ್ಮ ಸ್ವಾಭಿಮಾನಕ್ಕೆ ದಕ್ಕೆ ತರುವ ಸಂದರ್ಭವೂ ಎದುರಾಗುತ್ತದೆ. ಆದ್ದರಿಂದ ಮುಖ ನೋಡಿ ಮಣೆ ಹಾಕು ಎಂಬಂತೆ ಇರುವ ಈ ಸಮಾಜದ ಮಧ್ಯೆ ನಾವು ತಲೆಯೆತ್ತಿ ಇತರರಂತೆ ಬದುಕಬೇಕಾದರೆ ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕೂ ಮೊದಲು ಮೊಡವೆಗಳು ಹೇಗೆ ಉಂಟಾಗುತ್ತವೆ? ಮೊಡವೆಗಳು ಮುಖದ ಮೇಲೆ ಕಾರಣಗಳೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು..

#ಅಲೋವೆರಾ:ಕಲೆರಹಿತ ನೈಸರ್ಗಿಕವಾಗಿ ಹೊಳೆಯುವ ಚರ್ಮಕ್ಕಾಗಿ, ಅಲೋವೆರಾ ಪರಿಪೂರ್ಣ ಪರಿಹಾರವಾಗಿದೆ. ಅದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಚರ್ಮದಲ್ಲಿನ, ಮೊಡವೆ ಗುರುತುಗಳು ಮತ್ತು ಸೋಂಕುಗಳಂತಹ ಚರ್ಮದ ತೊಂದರೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿನ ಮೊಡವೆ ಕಲೆಗಳು ಮಾತ್ರವಲ್ಲ ಗಾಯದ ಕಲೆಗಳನ್ನೂ ನಿವಾರಿಸುತ್ತದೆ.

#ಜೇನು ತುಪ್ಪ:ಮೊಡವೆಯಿಂದ ಹಾನಿಗೊಂಡ ಚರ್ಮಕ್ಕೆ ಜೇನು ತುಪ್ಪ ಲೇಪಿಸುವುದರಿಂದ ಬಹಳ ಪ್ರಯೋಜನ ಇದೆ. ಅದರಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳು ಉರಿಯೂತನ್ನು ತಗ್ಗಿಸಿ, ಬೇಗ ಗುಣಮುಖವಾಗಲು ಸಹಕರಿಸುತ್ತದೆ. ಹಾನಿಗೊಂಡ ಜಾಗಕ್ಕೆ ರಾತ್ರಿ ಒಂದು ಅಥವಾ ಎರಡು ಹನಿ ಜೇನು ತುಪ್ಪ ಲೇಪಿಸಿ ಮತ್ತು ಅದನ್ನು ಬೆಳಗ್ಗೆ ತೊಳೆದು ತೆಗೆಯಿರಿ.

#ಮಂಜುಗಡ್ಡೆ:ಮಂಜುಗಡ್ಡೆಯ ತುಂಡನ್ನು ಒಂದು ಒಳ್ಳೆಯ ಬಟ್ಟೆಯಲ್ಲಿ ಸುತ್ತಿ, ಮೊಡವೆ ಇರುವ ಜಾಗಕ್ಕೆ ಇಡಿ. ಮಂಜುಗಡ್ಡೆಯನ್ನು ನೇರವಾಗಿ ಚರ್ಮಕ್ಕೆ ಇಡಬೇಡಿ ಅಥವಾ ಒಂದೇ ಜಾಗದಲ್ಲಿ 20 ನಿಮಿಷಗಳ ಕಾಲ ಇಡಬೇಡಿ. ನೀವು ಎರಡು ದಿನಕ್ಕೊಮ್ಮೆ ಇದನ್ನು ಮಾಡಬಹುದು.

#ಟೊಮೇಟೊ:ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮೇಟೊ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ಚಿಕ್ಕಚಮಚ ಅಡುಗೆಸೋಡಾ ಬೆರೆಸಿ ಮಿಶ್ರಣ ಮಾಡಿ. ಇನ್ನು ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ಈ ಮಿಶ್ರಣವನ್ನು ತಣ್ಣಗಿನ ಹಾಲು ಉಪಯೋಗಿಸಿ ತೂಳೆದುಕೊಳ್ಳಿ. ದಿನಕ್ಕೆರಡು ಬಾರಿಯಂತೆ ಒಂದು ವಾರ ಈ ವಿಧಾನವನ್ನು ಅನುಸರಿಸಿದರೆ ಮೊಡವೆಗಳು ಪೂರ್ಣವಾಗಿ ಮಾಯವಾಗುತ್ತವೆ.

#ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್-ಒಂದು ದೊಡ್ಡ ಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ.ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

#ಮಜ್ಜಿಗೆ: ಮೊಸರು ಹಾಗೂ ಮಜ್ಜಿಗೆ ಎಲ್ಲೆಡೆಯು ಸಿಗುವಂತಹ ವಸ್ತು. ಇದರಲ್ಲಿ ಲ್ಯಾಕ್ಟಿಕ್ ಆಮ್ಲವಿರುವುದರಿಂದ ತ್ವಚೆಯಲ್ಲಿ ಹಾನಿಯಾದ ಕೋಶವನ್ನು ಸರಿಪಡಿಸುತ್ತದೆ. ಹಾಗೆಯೇ ಹೊಸ ಕೋಶ ಬೆಳವಣಿಗೆಗೂ ಸಹಾಯಕ. ಹೀಗಾಗಿ ಮೊಡವೆ ಹೊಂದಿರುವವರು ಪ್ರತಿದಿನ ಒಂದು ಅಥವಾ ಎರಡು ಬಾರಿ ಮಜ್ಜಿಗೆ ನೀರಿನಿಂದ ಮುಖ ತೊಳೆಯುವುದು ಉತ್ತಮ. ಇದರಿಂದ ಮೊಡವೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group