ಅಂಜೂರ ಹಣ್ಣಿನ ಅರೋಗ್ಯ ಪ್ರಯೋಜನ!

ಈಗಿನ ಕಾಲದಲ್ಲಿ ಈ ಸಮಸ್ಯೆಗಳು ಕೇವಲ ವಯಸ್ಸಾದ ಜನರಲ್ಲಿ ಮಾತ್ರವಲ್ಲ, ಚಿಕ್ಕ ವಯಸ್ಸಿನವರಿಂದ ಹಿಡಿದು ಯುವಕರವರೆಗೂ ಎಲ್ಲರಲ್ಲೂ ಕಾಣಸಿಗುತ್ತದೆ. ಅದಕ್ಕೆ ಮುಖ್ಯ ಕಾರಣ ಅಂದ್ರೆ ನಾವು ಅನುಸರಿಸುತ್ತಿರುವ ಅನಾರೋಗ್ಯಕರ ಜೀವನಶೈಲಿ. ಈ ಮಲಬದ್ಧತೆ ಸಮಸ್ಯೆಯನ್ನು ಆಹಾರದ ಬದಲಾವಣೆ ಹಾಗೂ ವ್ಯಾಯಾಮದಿಂದ ಬದಲಾಯಿಸಬಹುದಾಗಿದೆ.

ಇದಕ್ಕಿಂತ ಹೆಚ್ಚಾಗಿ, ನೈಸರ್ಗಿಕವಾಗಿ ಕೆಲಸ ಮಾಡುವ ಮತ್ತು ಮಲಬದ್ಧತೆಯನ್ನು ನಿವಾರಿಸುವ ಹಲವಾರು ಆಹಾರಗಳಿವೆ. ಅದರಲ್ಲಿ ಅಂಜೂರ ಕೂಡ ಒಂದು. ಪ್ರಕೃತಿ ದತ್ತವಾಗಿ ಲಭ್ಯವಿರುವ ಅಂಜೂರದ ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳೋಣ.

#ಮಾಸಿಕ ಒತ್ತಡದಂತಹ ಸಮಸ್ಯೆಗೆ: ಈ ಹಣ್ಣು ಶರೀರದಲ್ಲಿ ಚೈತನ್ಯವನ್ನು ಉಂಟು ಮಾಡುತ್ತದೆ. ಒತ್ತಡ ಕಡಿಮೆ ಮಾಡಿ ನರನಾಡಿಗಳಲ್ಲಿ ಚೈತನ್ಯ ತುಂಬುತ್ತದೆ.

#ರಕ್ತವೃದ್ಧಿ: ರಕ್ತಹೀನತೆ ಇರುವವರು ಪ್ರತಿನಿತ್ಯ ೨-೨ ಹಣ್ಣುಗಳನ್ನು ಸೇವನೆ ಮಾಡುವುದರಿಂದ ರಕ್ತ ವೃದ್ಧಿಯಾಗುತ್ತದೆ.

#ಅಂಜೂರ ಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳು ಸ್ಪರ್ಮ್ ಎಬಿಲಿಟಿ ಮತ್ತು ಕೌಂಟ್ ಹೆಚ್ಚಿಸುವುದರಲ್ಲಿ ಉತ್ತಮ ಇಂದಿನ ಜನಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆ ಮಲಬದ್ಧತೆ ಅಂಜೂರ ಹಣ್ಣು ಸೇವನೆ ಮಾಡುವುದರಿಂದ ಮಲಬದ್ಧತೆ ದೂರ ಮಾಡಿಕೊಳ್ಳಬಹುದು ಇದರಲ್ಲಿ ನಾರಿನಾಂಶ ಸಮೃದ್ಧವಾಗಿದೆ ಆರೋಗ್ಯಕರ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ ಹಾಗಾಗಿ ಯಾರಿಗೆ ಮಲಬದ್ಧತೆಯ ಸಮಸ್ಯೆ ಇರುತ್ತದೆ ಅವರು ಹಣ್ಣನ್ನು ಸೇವನೆ ಮಾಡುವುದು ಉತ್ತಮ ಇನ್ನು ನೀವು ಈ ಹಣ್ಣನ್ನು ಹಾಗೆ ಕೂಡ ತಿನ್ನಬಹುದು ಅಥವಾ ಒಣಗಿಸಿ ಡ್ರೈ ಫ್ರೂಟ್ ರೀತಿಯಲ್ಲಿ ತಿನ್ನಬಹುದು ಇದನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಕೂಡ ದೂರವಾಗುತ್ತದೆ ಅಲ್ಲದೆ ಹಣ್ಣಿನಲ್ಲಿರುವ ರೋಗನಿರೋಧಕ ಶಕ್ತಿ ನಮಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗದಂತೆ ತಡೆಯುತ್ತದೆ ಹಾಗೂ ರೋಗ ಬರದಂತೆ ಕೂಡ ತಡೆಯುತ್ತದೆ.

#ಜೀರ್ಣಕ್ರಿಯೆ ಸುಧಾರಣೆ :ಅಂಜೂರದ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿದ್ದು, ಇದನ್ನು ಸೇವಿಸುವುದು ಹೊಟ್ಟೆಗೆ ತುಂಬಾ ಪ್ರಯೋಜನಕಾಯಾಗಿದ್ದು, ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಅಂಜೂರದ ಹಣ್ಣಿನಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಒಳ್ಳೆಯದಾಗಿದ್ದು, ಅಸಿಡಿಟಿ, ಅಜೀರ್ಣ, ಗ್ಯಾಸ್ ಇತ್ಯಾದಿಗಳನ್ನು ನಿವಾರಿಸುತ್ತದೆ

#ಇನ್ನು ಒಣ ಅಂಜೂರವನ್ನು ಹಾಲಿನಲ್ಲಿ ನೆನೆಸಿ ಕುಡಿಯುವ ಹಾಗೆಯೇ ಅದನ್ನು ಬೇಯಿಸಿ ಕುಡಿಯುವುದು ಸಹ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಇದು ಸಹ ನಿಮ್ಮ ತೂಕವನ್ನು ಇಳಿಸಲು ಸಹಕಾರಿ.

#ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ:ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಅಂದರೆ ಎಲ್ಡಿಎಲ್ ಅಂಶದ ಪ್ರಭಾವ ನಮ್ಮ ರಕ್ತ ಸಂಸಾರದಲ್ಲಿ ಉಂಟಾದರೆ ಅದರಿಂದ ಹೃದಯದ ತೊಂದರೆ ನಮಗೆ ಕಟ್ಟಿಟ್ಟ ಬುತ್ತಿ. ಆದರೆ ಅಂಜೂರ ಹಣ್ಣು ಸೇವನೆ ಮಾಡುವುದರಿಂದ ನಾವು ಇಂತಹ ಸಮಸ್ಯೆಯಿಂದ ಪಾರಾಗಬಹುದು.ಏಕೆಂದರೆ ಇದರಲ್ಲಿ ಅಪಾರ ಪ್ರಮಾಣದ ಪೆಕ್ಟಿನ್ ಅಂಶ ಇರುವುದು ಗೊತ್ತಾಗಿದೆ. ಇದು ಒಂದು ರೀತಿಯ ಕರಗುವ ನಾರಿನ ಅಂಶಕ್ಕೆ ಸೇರಿಕೊಂಡಿರುವುದರಿಂದ ಯಾವುದೇ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ತಡೆಯುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group