ನಿದ್ರೆ ಬಾರದ ಸಮಸ್ಯೆಗೆ ಸರಳ ಮದ್ದು..!

ನಿದ್ರಾಹೀನತೆ ಸ್ಥಿತಿ ಯಾರಿಗೂ ಬೇಡದ ಕಾಯಿಲೆ. ಇಂದಿನ ಹೈ ಸ್ಪೀಡ್ ಯುಗದಲ್ಲಿ ಕೆಲಸದ ಒತ್ತಡದಿಂದ ನಿದ್ರಾಹೀನತೆ ಉಂಟಾಗಿ ಬಳಲಿ ಬೆಂಡಾಗದೆ ಉಳಿದವರ ಸಂಖ್ಯೆ ವಿರಳ. ಇನ್ ಸೋಮ್ನಿಯಾದಿಂದ ಬಳಲುತ್ತಿರುವ ರೋಗಿಗಳು ಕೆಲವೊಮ್ಮೆ ದಿನಗಟ್ಟಲೆ, ವಾರಗಟ್ಟಲೆ ಕಣ್ಣು ಮುಚ್ಚದೇ ಬೇಡದ ಧ್ಯಾನಾವಸ್ಥೆಗೆ ದೂಡಿದ್ದಂತಾಗಿ ಸಂಕಟ ಪಡುವುದುಂಟು. ಇಂತಹ ಸಮಸ್ಯೆಗೆ ನೀವು ತುತ್ತಾಗಿದ್ದಾರೆ ಇಲ್ಲಿವೆ ಸರಳ ಮದ್ದುಗಳು.
#ಮಲಗುವ ಕೋಣೆ ಕತ್ತಲಾಗಿರಲಿ: ಮಲಗುವಾಗ ಕೋಣೆ ಕತ್ತಲಾಗಿರುವುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಕತ್ತಲೆಯಲ್ಲಿ, ನಿದ್ರೆಗೆ ಸಂಬಂಧಿಸಿದ ಹಾರ್ಮೋನ್ ಸಕ್ರಿಯಗೊಳ್ಳುತ್ತದೆ. ಈ ಹಾರ್ಮೋನ್ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಸಾಧ್ಯವಾದರೆ ಬಾಗಿಲು ಮುಚ್ಚಿ ಇದರಿಂದ ನಿಮಗೆ ಅಡಚಣೆಯಿಲ್ಲದ ಉತ್ತಮ ನಿದ್ರೆ ಸಿಗುತ್ತದೆ.
#ಮಲಗುವ ಕೋಣೆಯಲ್ಲಿ ಅಲಾರ್ಮ್ ಕ್ಲಾಕ್ ಅಥವಾ ವಾಲ್ ಕ್ಲಾಕ್ ಇರುವುದರಿಂದ ತೊಂದರೆ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆಗಾಗ್ಗೆ ಗಡಿಯಾರದ ಕಡೆ ನೋಡಬೇಕೆನಿಸುತ್ತದೆ. ಹಾಗೆ ನೋಡುವುದರಿಂದ ನಿದ್ರೆಗೆ ಭಂಗ ಬರುತ್ತದೆ. ಇಂತಹ ಸಂದೇಹಗಳು ಮನಸ್ಸಿನಲ್ಲಿ ಇದ್ದರೆ ಗಡಿಯಾರವನ್ನು ಎದುರಿಗೆ ಇಡುವ ಬದಲು ಶಬ್ದ ಕೇಳಿಸುವ ಹಾಗೆ ದೂರದಲ್ಲಿ ಇಡಬೇಕು.
#ದಿನದಲ್ಲಿ ೩-೪ ಕಿಲೋಮೀಟರ್ಗಳು ಓಡಬೇಕು ಇಲ್ಲದೆ ೫ ಕಿಲೋಮೀಟರ್ಗಳು ನಡೆಯಬೇಕು. ಹೀಗೆ ಮಾಡಿದರೆ ಶರೀರ tired ಆಗುತ್ತದೆ ನಿದ್ರೆ ಬೇಗ ಬರುತ್ತದೆ.
#ಸಾಧ್ಯವಿದ್ದರೆ ದಿನದಲ್ಲಿ ಒಂದು ಗಂಟೆ ಬ್ಯಾಡ್ಮಿಂಟನ್ ಆಡಬೇಕು . ಇತರ ಆಟಗಳಿಗಿಂತ ಬಡ್ಮಿಂಟನ್ ಯಾಕೆ ಆಗಬೇಕು ಅಂದರೆ ಬಡ್ಮಿಂಟನ್ ಆಡಿದರೆ ಶರೀರದ ಎಲ್ಲಾ ಭಾಗಗಳ ವ್ಯಾಯಾಮ ಆಗುತ್ತದೆ. ಅದು ಶರೀರಕ್ಕೆ ಒಳ್ಳೆಯದು .ಇದು ಸಾಧ್ಯವಿಲ್ಲ ಅಂದರೆ ಮೇಲಿನ ವಿಷಯ ಮಾಡಬೇಕು.
#ಒಂದು ದಿನದಲ್ಲಿ ೭-೭:೩೦ ಗಂಟೆಗಳು ಮಾತ್ರವೇ ನಿದ್ರೆ ಹೋಗಬೇಕು . ಆಗ ಖಂಡಿತ ರಾತ್ರಿ ಮಲಗಿದ ನಂತರ ತಕ್ಷಣ ನಿಮಗೆ ನಿದ್ರೆ ಬರುತ್ತದೆ.
#ನೀವು ಮಧ್ಯಾಹ್ನ ಸಮಯದಲ್ಲಿ ಮಲಗಬಾರದು. ನೀವು ಮಧ್ಯಾಹ್ನ ಮಲಗಿದರೆ ನಿಮಗೆ ತಡರಾತ್ರಿ ನಿದ್ರೆ ಬರುತ್ತದೆ.
#ಮಲಗಲು ತೊಂದರೆ ಇರುವ ಜನರು, ತಮ್ಮ ಮಲಗುವ ಕೋಣೆಯಲ್ಲಿ ಕನ್ನಡಿ(Mirror)ಯನ್ನು ಸ್ಥಾಪಿಸಬಾರದು. ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೆ, ರಾತ್ರಿ ಮಲಗುವಾಗ ಅದನ್ನು ಬಟ್ಟೆಯಿಂದ ಮುಚ್ಚಿ.
#ಜೀರ್ಣಕ್ರಿಯೆಯು ಸರಿಯಾಗಿ ಆಗದೆ ಹೋದರೂ ನಿದ್ರೆ ಬರದು. ಜೀರ್ಣಕ್ರಿಯೆಯು ತೀವ್ರ ಸ್ಥಾಯಿಯಲ್ಲಿ ನಡೆಯುತ್ತಿದ್ದಾಗ ನಿದ್ರೆ ಬರುವುದು ಕಷ್ಟ. ಆದ್ದರಿಂದ ರಾತ್ರಿಯ ವೇಳೆ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಕೆಲವು ನಿಬಂಧನೆಗಳನ್ನು ಪಾಲಿಸಬೇಕು. ಕೊಬ್ಬು, ಮಸಾಲ ಪದಾರ್ಥಗಳು ಕಡಿಮೆ ಇರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ರಾತ್ರಿಯ ವೇಳೆ ಊಟವನ್ನು ಮಿತವಾಗಿ ಸೇವಿಸಬೇಕು. ಊಟದ ತರುವಾಯ ಸ್ವಲ್ಪ ನಡಿಗೆ ಒಳ್ಳೆಯದು. ನಡಿಗೆಯ ನಂತರ ಒಂದು ಗ್ಲಾಸು ಉಗುರು ಬೆಚ್ಚಗಿನ ಹಾಲು ಕುಡಿದರೆ ರಾತ್ರಿಯ ವೇಳೆ ಚೆನ್ನಾಗಿ ನಿದ್ರೆ ಬರುತ್ತದೆ.