ಕೆಂಪು ಹರಿವೆ ಇದರ ಪ್ರಯೋಜನ ತಿಳಿಯಿರಿ!

ಹರಿವೆ ಸೊಪ್ಪು ಅನೇಕ ಪೌಷ್ಟಿಕಾಂಶಗಳನ್ನು ಒಳಗೊಂಡ ತರಕಾರಿ. ಇದನ್ನು ಕೆಲವು ಕಡೆ ದಂಟಿನ ಸೊಪ್ಪು, ರಾಜಗಿರಿ ಪಲ್ಯ ಎಂಬ ಹೆಸರುಗಳಿಂದ ಕೂಡ ಕರೆಯಲಾಗುತ್ತದೆ.ಇಂಗ್ಲಿಷ್‌ನಲ್ಲಿ ಇದು ಅಮರಾಂತ್. ಹಿಂದೀಯಲ್ಲಿ ಚೌಲಾಯೀ.ಇದರಲ್ಲಿ ಅನೇಕ ವಿಧಗಳಿವೆ.
ಇದರ ಪ್ರಯೋಜನಗಳು:
#ಕೂದಲು ಉದುರಲ್ಲ:ಹರಿವೆ ಸೊಪ್ಪು ಲೈಸಿನ್ ಹೊಂದಿರುತ್ತದೆ. ಇದು ಅಮೈನೊ ಆಮ್ಲವಾಗಿದ್ದು, ಶಕ್ತಿ ಉತ್ಪಾದನೆ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಅಗತ್ಯ. ಕೂದಲಿನ ಬೆಳವಣಿಗೆ ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ.
#ಕೂದಲಿನ ಆರೋಗ್ಯಕ್ಕೆ ಕೆಂಪು ಹರಿವೆ : ಕೆಂಪು ಹರಿವೆಯಲ್ಲಿ ಲೈಸಿನ್ ಮತ್ತು ಅಮೈನೋ ಆಮ್ಲವಿದೆ. ಇದು ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ. ಹಾಗೆಯೇ ಇದ್ರ ರಸವನ್ನು ಸೇವನೆ ಮಾಡ್ತಾ ಬಂದ್ರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
#ಜೀರ್ಣಕ್ರಿಯೆ ಸುಲಭ:ಅನಾರೋಗ್ಯದಿಂದ ಗುಣಮುಖರಾಗುತ್ತಿರುವವರು ಮತ್ತು ಉಪವಾಸ ಬಿಡುವವರಿಗೆ ಹರಿವೆ ಸೊಪ್ಪನ್ನು ನೀಡಲಾಗುತ್ತದೆ. ಯಾಕೆಂದರೆ ಇದು ಸುಲಭವಾಗಿ ಜೀರ್ಣವಾಗುವುದು. ಹರಿವೆ ಸೊಪ್ಪು ಅತಿಸಾರ ಮತ್ತು ರಕ್ತಸ್ರಾವದ ಚಿಕಿತ್ಸೆಗೆ ತುಂಬಾ ಒಳ್ಳೆಯದು. ನಿಯಮಿತವಾಗಿ ನಾವು ಇದನ್ನು ಸೇವಿಸಿದರೆ ಅದರಿಂದ ಹೆಚ್ಚಿನ ಲಾಭವಾಗಲಿದೆ.
#ಕ್ಯಾಲರಿ ಕಡಿಮೆ:ನೂರು ಗ್ರಾಂ ಅಮರನಾಥ ಎಲೆಗಳನ್ನು ಕೇವಲ 23 ಕ್ಯಾಲರಿ ಮಾತ್ರ ಇದೆ. ಸ್ವಲ್ಪವೇ ಸ್ವಲ್ಪ ಕೊಬ್ಬು ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದು ಒಳ್ಳೆಯ ಆಯ್ಕೆಯಾಗಿದೆ. ತೂಕ ಇಳಿಸಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆ.
#ನಾರಿನಾಂಶ ಅಧಿಕಹರಿವೆ ಸೊಪ್ಪಿನಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಇದೆ. ನಾರಿನಾಂಶವನ್ನು ತಿನ್ನುವುದರಿಂದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಪರಿಣಾಮ ಹೃದಯದ ಕಾಯಿಲೆ ನಿವಾರಣೆ ಮಾಡಲು ನೆರವಾಗುವುದು. ಅಧಿಕ ಪ್ರೋಟೀನ್ ಮತ್ತು ನಾರಿನಾಂಶವನ್ನು ಹೊಂದಿರುವಂತಹ ಹರಿವೆ ಸೊಪ್ಪು ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸುವುದು.
#ವಿಟಮಿನ್ ಬಿ:ಹರಿವೆ ಸೊಪ್ಪಿನಲ್ಲಿ ವಿಟಮಿನ್ ಬಿ ಗುಂಪಿನ ಅಂಶವು ಉತ್ತಮವಾಗಿದೆ. ಫಾಲಟೆ, ರಿಬೊಫ್ಲಾವಿನ್, ನಿಯಾಸಿನ್, ಥೈಮೇನ್, ವಿಟಮಿನ್ ಬಿ6 ಮತ್ತು ಇತರ ಕೆಲವೊಂದು ಅಂಶಗಳು ಈ ಹಸಿರೆಲೆ ತರಕಾರಿಗಳಲ್ಲಿ ಇದೆ. ಇದು ಹುಟ್ಟುವ ಮಕ್ಕಳಲ್ಲಿ ಅಂಗನ್ಯೂನ್ಯತೆ ತಡೆಯುವುದು ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವುದು.
#ರಕ್ತಹೀನತೆಗೆ ಪರಿಣಾಮಕಾರಿ:ಹರಿವೆ ಸೊಪ್ಪಿನಲ್ಲಿ ಇರುವಂತಹ ಕಬ್ಬಿನಾಂಶವು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು ಮತ್ತು ಇದು ಚಯಾಪಚಯ ಕೋಶಗಳಿಗೂ ಅಗತ್ಯವಾಗಿರುವುದು. ಹರಿವೆ ಸೊಪ್ಪಿನಲ್ಲಿ ಇರುವಂತಹ ಕಬ್ಬಿಣದ ಅಂಶದಿಂದ ಅತ್ಯಧಿಕ ಲಾಭ ಪಡೆಯಬೇಕು.ವಿಟಮಿನ್ ಸಿ ಸೇರಿಸಿದರೆ ದೇಹವು ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಕಾರಿ ಆಗಿರುವುದು. ಹೀಗಾಗಿ ಲಿಂಬೆ ರಸವನ್ನು ಹರಿವೆ ಸೊಪ್ಪಿನ ಖಾದ್ಯಕ್ಕೆ ಹಾಕಿ ಮತ್ತು ರಕ್ತಹೀನತೆ ಸಮಸ್ಯೆ ಇರುವವರಿಗೆ ಇದು ತುಂಬಾ ಸಹಕಾರಿ ಆಗಿರುವುದು.