ನೀವು ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಇಲ್ಲಿದೆ ಮದ್ದುಗಳು!

ಪ್ರಯಾಣವು ವಿಭಿನ್ನ ರೀತಿಯ ಅನುಭವ ನೀಡುತ್ತದೆ. ಅನೇಕರು ಬಸ್, ರೈಲು, ಕಾರು ಅಥವಾ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣಿಸುವಾಗ ಕೆಲವರಿಗೆ ವಾಂತಿ, ತಲೆತಿರುಗುವಿಕೆ ಮತ್ತು ವಾಕರಿಕೆ ಬರುತ್ತದೆ. ಇದಕ್ಕೆ ಕಾರಣ ಮತ್ತು ಪರಿಹಾಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಅಂತಹ ಪರಿಹಾರ ಕ್ರಮಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.
#ಪುದೀನಾ ಟೀ:ಪ್ರಯಾಣಕ್ಕೂ ಮುನ್ನ ಒಂದು ಲೋಟ ಬಿಸಿಯಾದ ಪುದೀನಾ ಟೀ ಸೇವಿಸಿ. ಇನ್ನೂ ಉತ್ತಮವೆಂದರೆ ಕೆಲವು ಪುದೀನಾ ಎಲೆಗಳನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೈಯಲ್ಲಿಯೇ ಹಿಡಿದಿರಿ. ವಾಹನ ಪ್ರಯಾಣ ಆರಂಭಿಸಿದ ತಕ್ಷಣ ಒಂದೆರಡು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಪೂರ್ಣವಾಗಿ ನೀರಾಗಿಸಿ ನುಂಗಿ. ಇದರಿಂದ ವಾಕರಿಕೆ ಬರುವುದಿಲ್ಲ.
#ಏಲಕ್ಕಿ:ಒಂದು ವೇಳೆ ಪ್ರಯಾಣದ ಅವಧಿಯಲ್ಲಿ ವಾಕರಿಕೆ ಉಂಟಾದರೆ ತಕ್ಷಣ ಏಲಕ್ಕಿಯೊಂದನ್ನು ಬಾಯಿಗೆ ಹಾಕಿ ಜಗಿಯಲು ಪ್ರಾರಂಭಿಸಿ.
#ವಿಶೇಷವಾಗಿ ಬಸ್ ಪ್ರಯಾಣದ ಅವಧಿಗೂ ಮುನ್ನ ಒಂದೆರಡು ಲವಂಗಗಳನ್ನು ಬಾಯಿಗೆ ಹಾಕಿ ಜಗಿಯುತ್ತಿರಬೇಕು. ಪೂರ್ಣ ನೀರಾದ ಬಳಿಕ ನುಂಗಬೇಕು.
#ಈರುಳ್ಳಿ ರಸ:ಇದು ವಾಂತಿ ಮತ್ತು ಪಿತ್ತೋದ್ರೇಕವನ್ನು ಕ್ಷಣಮಾತ್ರದಲ್ಲಿ ನಿಲ್ಲಿಸುತ್ತದೆ. ಮಿಕ್ಸಿಗೆ ಹಾಕಿ ಕೆಲವು ಈರುಳ್ಳಿಗಳನ್ನು ಪುಡಿಮಾಡಿ ಮತ್ತು ಅದರಿಂದ ರಸ ತೆಗೆಯಿರಿ. ಇದಕ್ಕೆ ನೀವು ಪುದೀನಾ ಸಾರವನ್ನು ಸೇರಿಸಬಹುದು. ಈ ಮಿಶ್ರಣವು ಪಿತ್ತೋದ್ರೇಕ ಮತ್ತು ವಾಂತಿಯನ್ನು ನಿಲ್ಲಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡಲಿದೆ.
#ಒಂದು ವೇಳೆ ಊಟ ಮಾಡಿದ ಬಳಿಕ ಪ್ರಯಾಣ ಮಾಡುವುದಾದರೆ ಒಂದು ಲೋಟ ಹಸಿ ಶುಂಠಿಯ ಟೀ ಕುಡಿದು ಹೊರಡಬೇಕು. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ.
#ಬಾಳೆಹಣ್ಣು: ನೀವು ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಆದರೆ ಪ್ರಯಾಣ ಮಾಡುವಾಗ ನಿಮ್ಮ ಚೀಲದಲ್ಲಿ ಒಂದೆರಡು ಬಾಳೆಹಣ್ಣು ಇರಿಸಿ. ಈ ಹಣ್ಣು ಪೊಟ್ಯಾಸಿಯಮ್ ಮರುಸ್ಥಾಪಿಸುವ ಗುಣವನ್ನು ಹೊಂದಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ವಾಂತಿಯನ್ನು ಹೋಗಲಾಡಿಸುತ್ತದೆ. ಲಾಂಗ್ ಡ್ರೈವ್‍ನಲ್ಲಿ ವಾಂತಿ ಅಥವಾ ತಲೆಸುತ್ತು ಬಂದರೆ ಬಾಳೆಹಣ್ಣು ತಿಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
#ಕಾಳುಮೆಣಸು ಮತ್ತು ಲಿಂಬೆ:ಇದು ತಲೆನೋವು, ಪಿತ್ತೋದ್ರೇಕ ಮತ್ತು ತಲೆತಿರುಗುವಿಕೆಯನ್ನು ತಡೆಯುತ್ತದೆ. ಉಪ್ಪು ಅಥವಾ ಕರಿಮೆಣಸನ್ನು ಬಿಸಿಯಾದ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ ಮತ್ತು ಪ್ರಯಾಣಕ್ಕೆ ಮೊದಲು ಇದನ್ನು ಕುಡಿಯಿರಿ. ಇದು ಪಿತ್ತೋದ್ರೇಕ ಮತ್ತು ವಾಂತಿಯನ್ನು ತಡೆಯುತ್ತದೆ.
#ಪೆಪ್ಪರ್ ಮಿಂಟ್ ಸಹಾಯ ಮಾಡುತ್ತದೆ:ಆಹಾರ ತಜ್ಞರ ಪ್ರಕಾರ, ಪ್ರಯಾಣದಲ್ಲಿ ತಲೆತಿರುಗುವಿಕೆ ಮತ್ತು ವಾಕರಿಕೆ ತೊಂದರೆ ಇದ್ದರೆ, ಪುದೀನಾ ಸಹಾಯವನ್ನು ತೆಗೆದುಕೊಳ್ಳಿ. ಪುದೀನಾ ಶರಬತ್ ಅಥವಾ ಪಾನಕವನ್ನು ನಿಮ್ಮೊಂದಿಗೆ ಇರಿಸಿ .