ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ಮಾಡಲು ಈ ಟಿಪ್ಸ್!

ಈರುಳ್ಳಿಗಳನ್ನು ಹೆಚ್ಚುವಾಗ ಕಣ್ಣೀರು ಬರುವುದಾದರೂ ಏತಕ್ಕೆ? ಈರುಳ್ಳಿಯನ್ನು ಕತ್ತರಿಸಿದಾಗ, ಅದರ ಜೀವಕೋಶಗಳ ಗೋಡೆಗಳು ಕತ್ತರಿಸಲ್ಪಟ್ಟು ಆ ಜೀವಕೋಶಗಳು ಒ೦ದು ಬಗೆಯ ಕಿಣ್ವಗಳನ್ನು ಬಿಡುಗಡೆಗೊಳಿಸುತ್ತವೆ. ಈ ಕಿಣ್ವಗಳು ಗ೦ಧಕಯುಕ್ತ ಅನಿಲವನ್ನು೦ಟು ಮಾಡುತ್ತವೆ. ಈ ಗ೦ಧಯುಕ್ತ ಅನಿಲವು ಕಣ್ಣುಗಳಿಗೆ ಉರಿಯನ್ನು೦ಟು ಮಾಡುತ್ತದೆ. ಹಾಗಿದ್ದಲ್ಲಿ, ಈರುಳ್ಳಿಯನ್ನು ಹೆಚ್ಚುವಾಗ ಕಣ್ಣೀರು ಹಾಕುವ೦ತಾಗುವುದನ್ನು ತಪ್ಪಿಸುವ ಯಾವುದಾದರೂ ಸರಿಯಾದ, ಪರಿಣಾಮಕಾರಿ ಮಾರ್ಗೋಪಾಯವಿದೆಯೇ? ಕಣ್ಣೀರಿಗೆ ಆಸ್ಪದ ಕೊಡದ ರೀತಿಯಲ್ಲಿ ಈರುಳ್ಳಿಯನ್ನು ಹೆಚ್ಚಲು ನೆರವಾಗುವ ಸರಳವಾದ ಅಡುಗೆಯ ಮಾರ್ಗೋಪಾಯಗಳನ್ನು ಇಲ್ಲಿ ನೀಡಲಾಗಿದೆ.

#ಈರುಳ್ಳಿಗಳನ್ನು ಕತ್ತರಿಸುವ ಮೊದಲು ಸಮಾರು 15 ನಿಮಿಷ ಅದನ್ನು ಫ್ರಿಜ್‌ನಲ್ಲಿರಿಸಿ. ಇದು ಈರುಳ್ಳಿ ಒಳಗಿರುವ ರಾಸಾಯನಿಕಗಳಿಂದ ಉಂಟಾಗುವ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ.ವಿಪರೀತ ತಾಪಮಾನವು ನಿಮ್ಮ ಕಣ್ಣುಗಳಿಗೆ ಕಿರಿಕಿರಿ ಉಂಟು ಮಾಡುವ ರಾಸಾಯನಿಕಗಳ ಬಿಡುಗಡೆಯನ್ನು ತಡೆಯುತ್ತದೆ. ಆದರೆ ಈರುಳ್ಳಿಯನ್ನು ಫ್ರೀಜ್ ಮಾಡಬೇಡಿ, ಅದು ಕರಗಿದ ನಂತರ ಮೆತ್ತಗಾಗಬಹುದು.

#ಇಲ್ಲಾಂದ್ರೆ, ಈರುಳ್ಳಿ ಹೆಚ್ಚಲು ಬಳಸುವ ಚಾಪಿಂಗ್ ಬೋರ್ಡ್ ಮೇಲೆ ಸಹ ವಿನಗರ್ ಅನ್ನು ಸವರಿ ಅದರಮೇಲೆ ಈರುಳ್ಳಿಯನ್ನು ಹೆಚ್ಚುವುದರಿಂದ ನಿಮಗೆ ಕಣ್ಣೀರು ಬರುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

#ಈರುಳ್ಳಿಯ ಮೇಲ್ಪದರಗಳನ್ನು ತೆಗೆದು , ಅದನ್ನು 15 ರಿಂದ 20 ನಿಮಿಷ ನೀರಿನಲ್ಲಿ ನೆನೆ ಹಾಕಿ. ಹಾಗೆ ಮಾಡುವುದರಿಂದ ಈರುಳ್ಳಿಯಲ್ಲಿರುವ ಸಲ್ಫರಿಕ್ ಸಂಯುಕ್ತಗಳು ನೀರಿಗೆ ಸೇರಿಕೊಳ್ಳುತ್ತವೆ. ಆದರೆ ಹೀಗೆ ಮಾಡುವುದರಿಂದ ಈರುಳ್ಳಿಯ ಗಾಢ ಸುವಾಸನೆ ಕಡಿಮೆ ಆಗುತ್ತದೆ ಎಂದು ಕೆಲವರು ವಾದಿಸುತ್ತಾರೆ. ಈರುಳ್ಳಿಯನ್ನು ನೀರಿನಲ್ಲಿ ನೆನೆಸಿದಾಗ ಸ್ವಲ್ಪ ಜಾರಿದಂತೆ ಆಗುತ್ತದೆ, ಹಾಗಾಗಿ ಕತ್ತರಿಸುವಾಗ ಎಚ್ಚರವಾಗಿರಿ.

#ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಸ್ವಲ್ಪ ವಿನಿಗರ್ ಹಾಕಿ ಈರುಳ್ಳಿಗಳನ್ನು ಅದರಲ್ಲಿ ನೆನೆಹಾಕಿ ಸ್ವಲ್ಪ ಹೊತ್ತು ಬಿಟ್ಟು ಹೆಚ್ಚಬಹುದು.

#ಈರುಳ್ಳಿಗಳನ್ನು ಕತ್ತರಿಸುವಾಗ ಯಾವಾಗಲೂ ಹರಿತವಾದ ಚೂರಿಯನ್ನೇ ಬಳಸಿರಿ. ಹರಿತವಾದ ಚೂರಿಯು ಈರುಳ್ಳಿಯ ಜೀವಕೋಶಗಳನ್ನು ಕತ್ತರಿಸಲಾರವಾದ್ದರಿಂದ ಕಿಣ್ವಗಳ ಬಿಡುಗಡೆಯ ಪ್ರಮಾಣವು ತಗ್ಗುತ್ತದೆ.ಕಂಬನಿಗರೆಯದೇ ಈರುಳ್ಳಿಗಳನ್ನು ಕತ್ತರಿಸುವಂತಾಗಲು ಈ ಅಡುಗೆ ಸಂಬಂಧಿ ಸಲಹೆಗಳನ್ನು ಪಾಲಿಸಲು ಪ್ರಯತ್ನಿಸಿರಿ.

#ಕೆಲವು ಶೆಫ್‍ಗಳು ಈರುಳ್ಳಿಯನ್ನು ಕತ್ತರಿಸುವ ಸುಲಭ ವಿಧಾನವನ್ನು ಸೂಚಿಸುತ್ತಾರೆ. ಈರುಳ್ಳಿಯ ತೆರೆದ ಭಾಗವು ಕತ್ತರಿಸುವ ಹಲಗೆಯ ಕಡೆಗೆ ಮುಖ ಮಾಡಿದ್ದರೆ, ನಿಮ್ಮ ಕಣ್ಣಿಗೆ ಅದರ ಅನಿಲ ತಲುಪುವುದನ್ನು ತಡೆಯುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group