ವಿಟಮಿನ್ ಸಿ ಹೆಚ್ಚಿರುವ ಈ 5 ಹಣ್ಣುಗಳು..!

ನಮ್ಮ ದೇಹದ ಆರೋಗ್ಯವು ರೋಗ ನಿರೋಧಕ ಶಕ್ತಿಯ ಮೇಲೆ ಅವಲಂಭಿತವಾಗಿದೆ. ದೇಹದ ಒಳಗಡೆ ಮತ್ತು ಹೊರಗಡೆಯ ಬ್ಯಾಕ್ಷೀರಿಯಾ, ವೈರಸ್‍ನಂತಹ ಹಾನಿಕಾರಕ ಕ್ರಿಮಿಗಳ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ ಶಕ್ತಿ ಬಲವಾಗಿರಬೇಕು.ಪೌಷ್ಠಿಕ ಆಹಾರ ಸೇವನೆಯಿಂದ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲೂ ವಿಟಮಿನ್ ಸಿ ಸತ್ವವನ್ನು ಹೆಚ್ಚಾಗಿ ಹೊಂದಿರುವ ಹಣ್ಣುಗಳನ್ನು ಸೇವಿಸುವುದರಿಂದ ಮತ್ತಷ್ಟು ಬಲಿಷ್ಠಗೊಳಿಸಬಹುದು ಇಲ್ಲಿ ಸುಲಭವಾಗಿ ದೊರೆಯುವ ಮತ್ತು ಕೈಗೆಟುವ 6 ಹಣ್ಣುಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ಇಮ್ಯೂನಿಟಿಯನ್ನು ಹೆಚ್ಚಿಸಿಕೊಳ್ಳಿ.

#ನಿಂಬೆಹಣ್ಣಿನಲ್ಲಿ 88% ನಷ್ಟು ವಿಟಮಿನ್ ಸಿ ಸತ್ವ ಇದೆ. ಪ್ರತಿದಿನ ಒಂದು ನಿಂಬೆಹಣ್ಣನ್ನು ಸೇವಿಸಬಹುದು. ನೀರಿನ ಜೊತೆ ಮಿಕ್ಸ್ ಮಾಡಿ ಸೇವಿಸುವ ಬದಲು ನೇರವಾಗಿ ಸೇವಿಸುವುದು ಹೆಚ್ಚು ಪರಿಣಾಕಾರಿ. ದೇಹದ ತೂಕ ಕಡಿಮೆ ಮಾಡುವುದರಲ್ಲಿ ಇದು ಸಹಕಾರಿಯಾಗಿದೆ. ಪಾರ್ಶವಾಯು ಆಗುವುದನ್ನು ತಡೆಯುತ್ತದೆ.ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ಬ್ಲಡ್ ಪ್ರಶರ್. ಆಸ್ತಮಾ ನಿವಾರಿಸುತ್ತದೆ. ನಿಂಬೆಹಣ್ಣು ಹೆಚ್ಚು ಪರಿಣಾಕಾರಿಯಾಗಿದ್ದು ಹೆಚ್ಚು ಬಳಸಬಾರದು ಅತಿಯಾದರೆ ಅಮೃತವು ವಿಷವಾಗುತ್ತದೆ. ಅತಿಯಾದರೆ ಗ್ರಾಸ್ಟ್ರಿಕ್ ಹೆಚ್ಚಾಗುವ ಸಾಧ‍್ಯತೆ ಇದೆ. ಎದೆ ಉರಿ ಬಾಯಿ ಹುಣ್ಣು ಆಗುವ ಸಾಧ್ಯತೆಗಳಿರುತ್ತವೆ ಎಚ್ಚರಿಕೆ.

#ಕಿತ್ತಳೆ ಹಣ್ಣಿನಲ್ಲಿ 88% ನಷ್ಟು ವಿಟಮಿನ್ ಸಿ ಸತ್ವ ಅಡಗಿದೆ. ಇದು ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರುತ್ತದೆ. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಹೃದಯಾಘಾತ ಆಗುವುದನ್ನು ತಡೆಯುತ್ತದೆ. ಮೆದುಳಿನ ಬೆಳವಣಿಗೆ ಸಹಕಾರಿಯಾಗಿದೆ. ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.

ಹೊಟ್ಟೆ ಹುಣ್ಣಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ದೇಹ ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ 3.6 ಗ್ರಾಂ ನಾರಿನಾಂಶವಿದೆ. ಚರ್ಮದ ಆರೋಗ್ಯ ಕಾಪಾಡುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

#ನೆಲ್ಲಿಕಾಯಿಯಲ್ಲಿ 27.7 ಎಂಜಿಯಷ್ಟು ಸಿ ಸತ್ವ ಅಡಗಿದೆ. ಆರ್ಯುವೇದದ ಚಿಕಿತ್ಸೆಯಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ನೆಲ್ಲಿಕಾಯಿ ಬಳಸುವುದರಿಂದ ಮಧುಮೇಹ, ಅಜೀರ್ಣ, ಕೂದಲು ಉದರುವಿಕೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಮಿತವಾಗಿ ಬಳಸಿದರೆ ಒಳ್ಳೆಯದು ಅತಿಯಾದರೆ ದುಷ್ಪರಿಣಾಗಳೇ ಹೆಚ್ಚು ಯಕೃತ್‍ಗೆ ಹಾನಿಯಾಗುತ್ತದೆ.

ಅಲ್ಲದೆ ರಕ್ತದೊತ್ತಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

#ಕಚ್ಚಾ ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ `ಸಿ’ ಹೇರಳವಾಗಿ, ಸುಮಾರು ಶೇ 157 ರಷ್ಟು `ಸಿ’ ಸತ್ವ ಇದರಲ್ಲಿ ಅಡಕವಾಗಿದೆ. ಒಂದು ಅಧ್ಯಯನದ ಪ್ರಕಾರ ಸೇಬಿಗಿಂತ ಪಪ್ಪಾಯ ಸೇವಿಸುವುದು ಒಳ್ಳೆಯದಾಗಿದೆ. ಈ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಾಗಿವೆ. ಮೂಳೆಯ ಬಲವರ್ಧನೆಗೆ ಸಹಕಾರಿ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಚರ್ಮದ ಗಾಯಗಳು ಬೇಗ ವಾಸಿಯಾವುದುಕ್ಕು ಇದು ಸಹಕಾರಿಯಾಗಿದೆ. ವಿಟಮಿನ್ ಎ, ಪಾಲಟೆ, ನಾರಿನಾಂಶ, ಪ್ರೋಟಿನ್, ಪೋಟ್ಯಾಶಿಯಂ, ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಂಶದಂತಹ ಸಾಕಷ್ಟು ಪೋಷಕಾಂಶಗಳಿವೆ.

#ಸ್ಟ್ರಾಬೆರಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳು ಈ ಹಣ್ಣನ್ನು ಸೇವಿಸಬಹುದು. ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ರಕ್ತದಲ್ಲಿನ ಪ್ರತಿ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ.ಊರಿಹುತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ದೇಹದಲ್ಲಿನ ಕೆಟ್ಟ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಹೆಚ್ಚು ಸೇವಿಸದರೆ ಪ್ರತಿಕೂಲ ಪರಿಣಾಮಗಳು ಬೀರುತ್ತದೆ. ಮೈಕೆರೆತ, ಗಂಟಲು, ತಲೆನೋವಿನಂತಹ ಸಮಸ್ಯೆಗಳು ಕಾಡಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group