ಗೊರಕೆ ಹೊಡೆಯುವ ಸಮಸ್ಯೆ ನಿವಾರಣೆಗೆ ಪರಿಹಾರ!

ಒಬ್ಬರ ಸುಖನಿದ್ದೆಗೆ ಕಾರಣವಾಗುವ ಗೊರಕೆ ಇನ್ನೊಬ್ಬರ ನಿದ್ದೆಯನ್ನು ಕೆಡಿಸಬಲ್ಲುದು. ಅಷ್ಟೇ ಏಕೆ, ಗೊರಕೆಯನ್ನೇ ನೆಪವಾಗಿಸಿ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೇಳಿಕೊಂಡು ಬರುವ ಮಹಿಳೆಯರ ಸಂಖ್ಯೆಯೂ ದೊಡ್ಡದೇ..! ವೈದ್ಯಕೀಯ ಸಮೀಕ್ಷೆಯ ಪ್ರಕಾರ ಶೇಖಡಾ ಐವತ್ತರಷ್ಟು ವಯಸ್ಕರು ಗೊರಕೆ ಹೊಡೆಯುತ್ತಾರೆ. ಆದರೆ ಇದರ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಆದರೆ ಕೆಲವರ ಗೊರಕೆಯಂತೂ ಬಸ್ಸಿನ ಇಂಜಿನ್ನಿನ ಶಬ್ದಕ್ಕಿಂತಲೂ ಭೀಕರವಾಗಿದ್ದು, ಪಕ್ಕದಲ್ಲಿ ಮಲಗಿದ್ದವರಿಗೂ ಇದರಿಂದ ಕಿರಿಕಿರಿ ಬಂದು ಬಿಡುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಉಪಾಯಗಳು ಈ ಕೆಳಗೆ ನೀಡಲಾಗಿದೆ.

#ಸೋಯಾ ಹಾಲು: ಗೊರಕೆಯ ಸಮಸ್ಯೆ ಇರುವವರು ಹಸುವಿನ ಹಾಲು ಕುಡಿಯುವ ಬದಲು ಸೋಯಾ ಹಾಲನ್ನು ಕುಡಿಯುವುದು ಉತ್ತಮ. ಹಸುವಿನ ಹಾಲಿನಲ್ಲಿರುವ ಕೆಲವು ಪ್ರೋಟೀನ್ಗಳು ಅಲರ್ಜಿಯನ್ನು ಉಂಟುಮಾಡಬಹುದು. ಮೂಗಿನ ಮಾರ್ಗಗಳನ್ನು ಮುಚ್ಚುವುದು, ಗೊರಕೆಯನ್ನು ಹೆಚ್ಚಿಸುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗಬಹುದು

#ಧೂಮಪಾನ ಮಾಡದಿರಿ! ಧೂಮಪಾನ ಆರೋಗ್ಯಕ್ಕೆ ಮಾರಕ. ಮೂಗಿನ ನಾಳಗಳು ಬ್ಲಾಕ್‌ ಆಗುವುದರಿಂದ ಗೊರಕೆ ಸಮಸ್ಯೆ ಸಿಗರೇಟು ಸೇದುವವರಲ್ಲಿ ಹೆಚ್ಚು. ಹೀಗಾಗಿ ಈ ಕೆಟ್ಟ ಚಟಕ್ಕೆ ಕಡಿವಾಣ ಹಾಕಲೇ ಬೇಕು.

#ಏಲಕ್ಕಿ:ಈ ಮಸಾಲೆ ಅತ್ಯುತ್ತಮ ಎಕ್ಸ್‌ಪೆಕ್ಟೊರೆಂಟ್ ಮತ್ತು ಡಿಕೊಂಜೆಸ್ಟೆಂಟ್ ಆಗಿದೆ. ಇದರಿಂದಾಗಿ ಉಸಿರಾಟದ ಜಾಗದ ಉದ್ದಕ್ಕೂ ಗಾಳಿಯನ್ನು ಸ್ಪಷ್ಟವಾಗಿ ಸಾಗಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಸುಮಾರು ಒಂದೂವರೆ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಮಲಗುವ ಮುನ್ನ ಕನಿಷ್ಠ ಅರ್ಧ ಘಂಟೆಯಾದರೂ ಮುಂಚೆ ಕುಡಿಯಿರಿ.

#ಬೆಳ್ಳುಳ್ಳಿ:ನಿಮ್ಮ ಗೊರಕೆ ಸಮಸ್ಯೆ ಬಂದರೆ ಬೆಳ್ಳುಳ್ಳಿ ನಿಮಗೆ ಪ್ರಯೋಜನಕಾರಿಯಾಗಿದೆ. ಇದು ಗೊರಕೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ, ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಅಥವಾ ಎರಡು ಮೊಗ್ಗು ಬೆಳ್ಳುಳ್ಳಿ ತಿನ್ನಿರಿ ಮತ್ತು ನೀರು ಕುಡಿಯಿರಿ. ಗೊರಕೆಯಿಂದ ನೀವು ಪರಿಹಾರ ಪಡೆಯಬಹುದು.

#ಅರಿಶಿನ ಹಾಲು:ಅರಿಶಿನದಲ್ಲಿ ಪ್ರತಿಜೀವಕ ಗುಣಗಳಿದ್ದು ದೇಹಕ್ಕೆ ಇತರ ರೀತಿಯಲ್ಲಿ ಉಪಕಾರಿಯಾಗಿರುವಂತೆಯೇ ಗೊರಕೆಗೂ ಉತ್ತಮವಾಗಿದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಪ್ರತಿ ದಿನ ನೀವು ಮಲಗುವ ಮುನ್ನ ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

#ದೇಹದ ತೂಕ ಇಳಿಸುವುದು:ತೂಕ ಹೆಚ್ಚಿದ ನಂತರ ಗೊರಕೆ ಸಮಸ್ಯೆ ಕಾಣಿಸಿಕೊಂಡರೆ, ತೂಕ ಇಳಿಸುವುದು ಉತ್ತಮ. ನೀವು ನಿಮ್ಮ ಎತ್ತರ ಮತ್ತು ವಯಸ್ಸಿಗೆ ತಕ್ಕಷ್ಟು ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಹೆಚ್ಚು ತೂಕವಿರುವ ಜನರು ಕೊಬ್ಬಿನ ಅಂಶವನ್ನು ಹೊಂದಿರುತ್ತಾರೆ. ಇದು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ನೀವು ತೂಕ ಕಡಿಮೆ ಮಾಡಿಕೊಂಡರೆ ಗೊರಕೆಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಕೆಲವರಿಗಂತೂ ತೂಕ ಕಡಿಮೆ ಆದ ನಂತರ ಗೊರಕೆ ಸಮಸ್ಯೆ ಪರಿಹಾರವಾಗುತ್ತದೆ.

#ಮಲಗುವ ಕೋಣೆಯಲ್ಲಿ ತೇವಾಂಶವಿರಲಿ:ಮಲಗುವಾಗ ಯಾವಾಗಲೂ ಉಸಿರಾಡಲು ಸಾಧ್ಯವಾಗಬೇಕು. ಉಸಿರಾಟಕ್ಕೆ ಅಡಚಣೆಯುಂಟಾದಾಗ ಗೊರಕೆ ಹೊಡೆಯುತ್ತಾರೆ. ಹೀಗಾಗಿ ಮಲಗುವ ಕೋಣೆಯಲ್ಲಿ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ. ಕೊಠಡಿಯಲ್ಲಿ ಗಾಳಿ ಓಡಾಡದೆ ಒಣ ಒಣ ಆಗಿದ್ದಾಗ, ಇವುಗಳು ಮೂಗಿನ ನಾಳ ಒಣಗಿ ಹೋಗುವಂತೆ ಮಾಡುತ್ತದೆ. ಸ್ನಾಯುಗಳು ಕಂಪಿಸುವಂತೆ ಮಾಡುತ್ತದೆ. ಹೀಗಾಗಿ ಮಲಗುವ ಕೋಣೆಯಲ್ಲಿ ಹ್ಯೂಮಿಡಿಫೈಯರ್ ಅಳವಡಿಸುವುದು ಒಳ್ಳೆಯದು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group