ನಿಂಬೆ ರಸದ ಆರೋಗ್ಯ ಪ್ರಯೋಜನ!

ಬೆಳಗ್ಗಿನ ಉಪಹಾರದ ಮೊದಲು ನಿಂಬೆ ರಸವನ್ನು ಸೇವಿಸುವುದರಿಂದ ಅನೇಕ ಲಾಭಗಳಿವೆ ಎಂದು ಆರ್ಯುವೇದವು ಹೇಳುತ್ತದೆ. ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯಬೇಕು ಇದರಿಂದ ಎಷ್ಟೋ ಲಾಭಗಳಿಬೆ, ನಿಂಬೆಹಣ್ಣು ಶರೀರದಲ್ಲಿನ ಅನೇಕ ದೋಷಗಳನ್ನು ನಿವಾರಿಸುತ್ತದೆ ಅಂತಹ ಕೆಲವು ಅರೋಗ್ಯ ಪ್ರಯೋಜನ ತಿಳಿಯೋಣ ಬನ್ನಿ

#ಪ್ರತಿದಿನ ಬೆಳಿಗ್ಗೆ ನಿಂಬೆ ರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ತೂಕ ನಷ್ಟದಲ್ಲಿ ಇದು ಉಪಯುಕ್ತವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಇಷ್ಟಪಟ್ಟಲ್ಲಿ ದಿನಕ್ಕೆ ಹಲವು ಬಾರಿ ಅದನ್ನು ಸೇವಿಸಬಹುದು. ಪ್ರತಿ ಗಂಟೆಗೊಮ್ಮೆ ಒಂದು ಲೋಟ ನೀರಿಗೆ ನಿಂಬೆ ರಸ ಬೆರೆಸಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಇದೊಂದು ಉತ್ತಮ ಹಾರೈಕೆಯಾಗಿ ಕಾರ್ಯನಿರ್ವಹಿಸುತ್ತದೆ.

#ನಿಂಬೆ ನೀರು ಅಪಧಮನಿಗಳ ಅಡಚಣೆ ಮತ್ತು ದೇಹದಲ್ಲಿ ಕೊಬ್ಬುಗಳನ್ನು ಶೇಖರಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಹೃದಯ ಕಾಯಿಲೆಗಳು, ಪಾರ್ಶ್ವವಾಯುಗಳ ಅಪಾಯವನ್ನು ಮಾತು ಮಧುಮೇಹ ಕಡಿಮೆ ಮಾಡುತ್ತದೆ. ನಿಂಬೆ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ವಿಷ ಹೊರಹಾಕಿ, ಶುದ್ಧೀಕರಿಸಲು ಸಹಾಯ ಮಾಡುತ್ತದೆ, ಚಯಾಪಚಯ ದರವನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಂಬೆಹಣ್ಣುಗಳಲ್ಲಿನ ಸಿಟ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

#ಸಕ್ಕರೆ ಇಲ್ಲದೆ ನಿಂಬೆ ಪಾನಕ ಸೇವಿಸುವುದರಿಂದ ಸಂಪೂರ್ಣವಾಗಿ ಕ್ಯಾಲೊರಿ ಮುಕ್ತವಾಗಿದೆ. ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಶಕ್ತಿಯ ರೂಪದಲ್ಲಿ ಸಂಗ್ರಹಗೊಳ್ಳಲು ಆರಂಭಿಸುತ್ತದೆ. ಇದಕ್ಕೆ ಕಾರಣವೆಂದರೆ ದೇಹದಲ್ಲಿ ಕೊಬ್ಬಿನ ಶಕ್ತಿಯ ಬದಲಾವಣೆಯು ನಿಮ್ಮ ದೇಹದಲ್ಲಿ ಇರುವ ನೀರಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ನೀವು ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು ನಿಂಬೆ ಪಾನಕವು ನಿದ್ದೆ ಮಾಡಲು ಕೂಡಾ ಸಹಾಯಕವಾಗಿದೆ.

#ನಿಂಬೆ ಹಣ್ಣಿನಲ್ಲಿರುವ ಕೆಲವೊಂದು ಅಂಶಗಳು ಮನುಷ್ಯನ ಯಕೃತ್ ನಲ್ಲಿ ಬೈಲ್ ಜ್ಯೂಸ್ ಉತ್ಪಾದನೆಯನ್ನು ವೃದ್ಧಿಸುತ್ತವೆ. ಇದು ಆರೋಗ್ಯಕರ ಜೀರ್ಣ ವ್ಯವಸ್ಥೆಗೆ ಸಹಕಾರಿಯಾಗುತ್ತದೆ. ಇದರ ಜೊತೆಯಲ್ಲಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣ ಪ್ರಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳಾದ ಮಲಬದ್ಧತೆ, ಹೊಟ್ಟೆಯ ಉಬ್ಬರ ಮತ್ತು ಭೇದಿಯಂತಹ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.

#ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ:ಇದು ಸುಲಭವಾಗಿ ತಯಾರಿಸಬಹುದಾದ ಪಾನೀಯವಾಗಿದ್ದು, ನೈಸರ್ಗಿಕ ಬಾಯಿ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಕುಡಿದರೆ ಬಾಯಿಯ ದುರ್ವಾಸನೆ ತಡೆಯಬಹುದು. ಇದು ಹೈಡ್ರೇಟಿಂಗ್ ಪಾನೀಯವಾಗಿದ್ದು, ಇದು ಬಾಯಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

ನಿಂಬೆ ನಿಮ್ಮ ದೇಹದ ವಿಲಕ್ಷಣ ಅಂಶಗಳನ್ನು ಹೊರಹಾಕುತ್ತದೆ. ನಿಂಬೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಮತ್ತು ವಿವಿಧ ರೀತಿಯ ಕ್ಯಾನ್ಸರ್ ವಿರುದ್ಧ ರಕ್ಷಿಸಿ ಉತ್ತಮ ಆರೋಗ್ಯ ನೀಡುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group