ತುಕ್ಕು ತೆಗೆಯಲು ಕೆಲವು ಸುಲಭ ಮಾರ್ಗ!

ಕೆಲವೊಮ್ಮೆ ಅಡುಗೆ ಮನೆಯ ನೆಲದಲ್ಲಿ ಅಥವಾ ಅಡುಗೆ ಮಾಡುವ ಸ್ಲ್ಯಾಬ್ ಮೇಲೆ ತುಕ್ಕಿನ ( Rust Stains) ಕಲೆಗಳಾಗುತ್ತದೆ. ಅಲ್ಲದೇ ಪಾತ್ರೆಗಳಲ್ಲಿ ಸಹ ತುಕ್ಕಿನ ಕಲೆಗಳು ಉಂಟಾಗುತ್ತದೆ. ಪಾತ್ರೆಗಳು ಸ್ವಚ್ಛವಾಗಿಲ್ಲದಿದ್ದರೆ ಅಡುಗೆ ಮಾಡಲು ಮನಸ್ಸು ಬರುವುದಿಲ್ಲ ಹಾಗೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಬ್ಬಿಣದ ವಸ್ತುಗಳನ್ನು ಅಡಿಗೆ ಮನೆ ಅಥವಾ ಬಾತ್ ರೂಮಿನಲ್ಲಿ ನೆಲದ ಮೇಲೆ ಇರಿಸಿದರೆ, ಅದರ ಕಲೆಗಳು ಅಂಟಿಕೊಳ್ಳುತ್ತವೆ. ಎಷ್ಟೇ ಉಜ್ಜಿದರೂ ಕಲೆ ಹೋಗುವುದಿಲ್ಲ. ಪಾತ್ರೆಗಳ ಮೇಲೆ ಮತ್ತು ನೆಲದ ಮೇಲೆ ತುಕ್ಕಿನ ಕಲೆಯಾಗಿದ್ದರೆ ಅದನ್ನು ಹೋಗಲಾಡಿಸುವ ಸುಲಭ ವಿಧಾನ ಇಲ್ಲಿದೆ.
ಪಾತ್ರೆಗಳ ಮೇಲಿರುವ ತುಕ್ಕು(Rust )ಗುರುತುಗಳನ್ನು ಸ್ವಚ್ಛಗೊಳಿಸಲು ಹೀಗೆ ಮಾಡಿ : ಉಪ್ಪು(Salt) ಮತ್ತು ನಿಂಬೆ(Lemon) ತುಕ್ಕನ್ನು ತೆಗೆದುಹಾಕುವ ಗುಣ ಹೊಂದಿದೆ. ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ತುಕ್ಕು ಇರುವ ಜಾಗಕ್ಕೆ ಹಚ್ಚಿ ಉಜ್ಜಬೇಕು. ಉಜ್ಜಿದ ನಂತರ ಐದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಆನಂತರ ಶುದ್ಧ ನೀರಿನಿಂದ ಪಾತ್ರೆಯನ್ನು ಸ್ವಚ್ಛಗೊಳಿಸಬೇಕು.ಉಪ್ಪು,ನಿಂಬೆ ರಸ ಮಾತ್ರವಲ್ಲ ಅಡಿಗೆ ಸೋಡಾ (Baking soda )ಕೂಡ ಕಲೆ ತೆಗೆಯುತ್ತದೆ. ಇದಕ್ಕೆ ಅಡುಗೆ ಸೋಡಾ ಮತ್ತು ಉಪ್ಪನ್ನು ಬಳಸಬೇಕು. ಪಾತ್ರೆಗಳ ಮೇಲಿನ ತುಕ್ಕು ಹೋಗಬೇಕೆಂದ್ರೆ ಉಪ್ಪು ಮತ್ತು ಸೋಡಾ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ. ಸ್ವಲ್ಪ ಉಜ್ಜಿದ ನಂತರ ಅದನ್ನು ಐದು ನಿಮಿಷ ಬಿಟ್ಟು ನಂತರ ತೊಳೆಯಿರಿ.
ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿಯುವುದರಿಂದ ಮಕ್ಕಳಿಗೆ ಸೈಕಲ್ ಆಡಲು ಆಗುವುದಿಲ್ಲ. ಹಾಗಾಗಿ ಅವರು ಅದನ್ನು ಬಳಸದೇ ಹಾಗೇ ಇಡುವುದರಿಂದ ಅದು ತುಕ್ಕು ಹಿಡಿದಿರುತ್ತದೆ. ಈ ತುಕ್ಕನ್ನು ಕ್ಲೀನ್ ಮಾಡಿ ಸೈಕಲ್ ಅನ್ನು ಹೊಸದರಂತೆ ಮಾಡಲು ಇಲ್ಲಿದೆ ಸುಲಭ ಮಾರ್ಗ.-
ಸ್ಯಾಂಡ್ ಪೇಪರ್ ಬಳಸಿಕೊಂಡು ಸೈಕಲ್ ತುಕ್ಕನ್ನು ನಿವಾರಿಸಬಹುದು. ಹಾಗಾಗಿ ತುಕ್ಕು ಹಿಡಿದ ಸ್ಥಳದಲ್ಲಿ ನೀರನ್ನು ಹಾಕಿ ಸ್ಯಾಂಡ್ ಪೇಪರ್ ನಿಂದ ಉಜ್ಜಿ. ಹೀಗೆ 4-5 ಬಾರಿ ಉಜ್ಜಿ. ಇದರಿಂದ ತುಕ್ಕು ನಿವಾರಣೆಯಾಗುತ್ತದೆ.-ಮಕ್ಕಳ ಸೈಕಲ್ ಕ್ಲೀನ್ ಮಾಡಲು ಅಡುಗೆ ಸೋಡಾ ಒಂದು ಉತ್ತಮ ವಿಧಾನವಾಗಿದೆ. ಅದಕ್ಕಾಗಿ ಒಂದು ಪಾತ್ರೆಯಲ್ಲಿ 3-4 ಚಮಚ ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಕ್ಸ್ ಮಾಡಿ. ಅದನ್ನು ತುಕ್ಕು ಹಿಡಿದ ಪ್ರದೇಶದಲ್ಲಿ ಹಾಕಿ. 10 ನಿಮಿಷಗಳ ಕಾಲ ಬಿಟ್ಟು ಬ್ರಷ್ ನಿಂದ ಉಜ್ಜಿ ಸ್ವಚ್ಛಗೊಳಿಸಿ.
ಬೇಕಿಂಗ್ ಸೋಡಾ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಅದನ್ನು ಬಹಳಷ್ಟು ವಸ್ತುಗಳನ್ನು ಸ್ವಚ್ಛ ಮಾಡಲು ಬಳಕೆ ಮಾಡಲಾಗುತ್ತದೆ. ತುಕ್ಕು ಹಿಡಿದಿರುವ ನೆಲ ಮತ್ತು ಪಾತ್ರೆಯನ್ನು ಸಹ ನೀವು ಬೇಕಿಂಗ್ ಸೋಡಾ ಬಳಸಿ ಸ್ವಚ್ಛ ಮಾಡಬಹುದು. ತುಕ್ಕು ಹಿಡಿದ ಸ್ಥಳದಲ್ಲಿ ಬೇಕಿಂಗ್ ಸೋಡಾ ಹಾಕಿ 2 ರಿಂದ 3 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಚನ್ನಾಗಿ ಉಜ್ಜಿ, ಇದನ್ನ 2 ರಿಂದ 3 ಬಾರಿ ಮಾಡಿದರೆ ತುಕ್ಕಿನ ಕಲೆಗಳು ಮಾಯವಾಗುತ್ತದೆ. ಅಲ್ಲದೇ ನೀವು ಬೇಕಿಂಗ್ ಸೋಡಾವನ್ನು ಬೆಳ್ಳಿ ಪಾತ್ರೆಗಳನ್ನು ಸಹ ಸ್ವಚ್ಛ ಮಾಡಲು ಬಳಕೆ ಮಾಡಬಹುದು.