ಲಿಚ್ಚಿ ಹಣ್ಣಿನ ಪ್ರಯೋಜನಗಳು..!

ಲಿಚ್ಚಿ ಹಣ್ಣು ಹೆಚ್ಚಿನವರಿಗೆ ಇಷ್ಟವಾದರೆ, ಮತ್ತೆ ಕೆಲವರು ಈ ಹಣ್ಣಿನಿಂದ ಬಲು ದೂರ. ಆದರೆ ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ಈ ಹಣ್ಣಿನಲ್ಲಿ ಹೇರಳವಾಗಿರುವ ವಿಟಮಿನ್ ಸಿ ಇದ್ದು, ಇದು ಸಾಂಕ್ರಾಮಿಕ ರೋಗಗಳು ಬರದಂತೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಈ ಹಣ್ಣಿನ ನಿಯಮಿತ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅದರಲ್ಲೂ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಹಣ್ಣು ಉತ್ತಮ ಮನೆಮದ್ದು ಎಂದು ಹೇಳಲಾಗಿದೆ. ಇಂತಹ ಈ ಹಣ್ಣಿನ ಅರೋಗ್ಯ ಪ್ರಯೋಜನ ತಿಳಿಯೋಣ ಬನ್ನಿ.

ಲಿಚ್ಚಿ ನೋಡಲು ಸ್ಟ್ರಾಬೆರ್ರಿ ಮಾದರಿಯಲ್ಲಿರುವ ಕೆಂಬಣ್ಣದ ಹಣ್ಣು. ಈ ಹಣ್ಣು ವಿಶೇಷವಾದ ರುಚಿಯನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಸತು ಅಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಟೀ ಮಾಡಿ ಕುಡಿದರೆ ರುಚಿಯ ಜೊತೆಗೆ ಮನಸ್ಸು ಉಲ್ಲಾಸವಾಗಿರುತ್ತದೆ.

ಲಿಚ್ಚಿ ಟೀ :ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* 1/2 ಕಪ್ ಲಿಚ್ಚಿ* 2 ಚಮಚ ಸಕ್ಕರೆ*

1/4 ಚಮಚ ಶುಂಠಿ
* 2 ಚಿಕ್ಕ ಚಮಚ ಟೀ ಪುಡಿ* 2 ಕಪ್ ನೀರು.

ತಯಾರಿಸುವ ವಿಧಾನ:

1. ನೀರನ್ನು ಕುದಿಸಿ ಟೀ ಪುಡಿ ಹಾಕಬೇಕು.

2. ಈಗ ಟೀಗೆ ಸಕ್ಕರೆ, ಜಜ್ಜಿದ ಶುಂಠಿ ಮತ್ತು ಲಿಚ್ಚಿ ಸೇರಿಸಬೇಕು.

3. ನಂತರ ಟೀಯನ್ನು ಸೋಸಿ ತಣ್ಣಗಾಗಲು ಇಡಬೇಕು (ಫ್ರಿಜ್ ನಲ್ಲಿ 1/2 ಗಂಟೆ ಇಟ್ಟರೆ ಒಳ್ಳೆಯದು). ಈಗ ತಣ್ಣನೆಯ ರುಚಿಕರವಾದ ಲಿಚ್ಚಿ ಟೀ ಕುಡಿದು ನೋಡಿ.

#ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ :ಲಿಚ್ಚಿ ಹಣ್ಣಿನಲ್ಲಿ ಫೈಬರ್ ಹೇರಳವಾಗಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆ ಮತ್ತು ಇತರ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ನೀವು ಆಗಾಗ್ಗೆ ಮಲಬದ್ಧತೆ ಅಥವಾ ಜಿಐ ನಾಳಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳಿಂದ ಬಳಲುತ್ತಿದ್ದರೆ, ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗಲು ಲಿಚ್ಚಿ ಹಣ್ಣನ್ನು ಸೇವಿಸಬಹುದು. ಲಿಚ್ಚಿ ಹಣ್ಣಿನಲ್ಲಿ ಬಹಳಷ್ಟು ನೀರಿನ ಅಂಶವಿದೆ. ಇದು ಹೊಟ್ಟೆಯ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ.

#ಮ್ಯಾಂಗನೀಸ್, ಖನಿಜಗಳು, ತಾಮ್ರ, ಕಬ್ಬಿಣ, ಮೆಗ್ನೀಷಿಯಮ್, ಫೋಲೇಟ್, ವಿಟಮಿನ್-ಬಿ 6, ಸಿ, ಪೊಟ್ಯಾಷಿಯಮ್ ಸಮೃದ್ಧವಾಗಿರುವ ಲಿಚಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಅದರ ಪಾಲಿಫಿನಾಲ್, ಆಂಟಿಆ್ಯಕ್ಸಿಡೆಂಟ್, ಆಂಟಿವೈರಲ್ ಕಾರಣ, ಇದು ಇನ್ನೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ.

#ಹಾಗೆಯೇ ಸೌಂದರ್ಯ ಹೆಚ್ಚಿಸಲು ಕೂಡ ಈ ಹಣ್ಣು ಪ್ರಯೋಜನಕಾರಿಯಾಗಿದ್ದು, ಇದನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೊಡವೆ ಹಾಗೂ ಇನ್ನಿತರ ಗುಳ್ಳೆಗಳು ಮಾಯವಾಗುತ್ತದೆ. ಅಲ್ಲದೆ ಮುಖವನ್ನು ಕಾಂತಿಯುತವಾಗಿ ರೂಪಿಸುತ್ತದೆ.

ಈ ಬಗ್ಗೆ ಎಚ್ಚರವಿರಲಿ: ಈ ಹಣ್ಣಿನಲ್ಲಿ ಸಕ್ಕರೆಯ ಅಂಶ ಹೆಚ್ಚಿರುವುದರಿಂದ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರು ಸೇವಿಸದಿರುವುದು ಉತ್ತಮ. ಹೀಗಾಗಿ ಮಧುಮೇಹಿಗಳು ಈ ಹಣ್ಣನ್ನು ಸೇವಿಸದಂತೆ ಎಚ್ಚರವಹಿಸಿ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group