ಸೌತೆಕಾಯಿ ಬೀಜಗಳ ಆರೋಗ್ಯ ಪ್ರಯೋಜನ!

ಸೌತೆಕಾಯಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್ ಕೆ, ಸಿ ಮತ್ತು ಮ್ಯಾಂಗನೀಸ್ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ಇದು ಆರೋಗ್ಯವಾಗಿರಲು ಸಹಕಾರಿಯಾಗಿದೆ. ಅಲ್ಲದೇ ಸೌತೆಕಾಯಿ ಬೀಜಗಳು ಕೂಡ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ. ಹಾಗಾಗಿ ಸೌತೆಕಾಯಿ ಬೀಜಗಳಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

#ಸೌತೆಕಾಯಿ ಬೀಜಗಳನ್ನು ಸೇವನೆ ಮಾಡುವುದು ಕೆಲವರಿಗೆ ಕಿರಿಕಿರಿ ಎನಿಸುತ್ತದೆ. ಹಾಗಾಗಿ ಮೇಲ್ಭಾಗದ ಸಿಪ್ಪೆಯಂತೆ ಸೌತೆಕಾಯಿಯ ಒಳಗಿನ ಬೀಜಗಳನ್ನು ಸಹ ತೆಗೆದುಹಾಕಿ ಆನಂತರ ಕೇವಲ ಸೌತೆಕಾಯಿ ತಿರುಳನ್ನು ಮಾತ್ರ ಸೇವನೆ ಮಾಡುತ್ತಾರೆ.

#ಆದರೆ ಸಾಧಾರಣವಾಗಿ ಹಸಿ ಮತ್ತು ತಾಜಾ ಸೌತೆಕಾಯಿಯನ್ನು ಬೀಜಗಳ ಸಹಿತ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಇವೆ. ಆದರೆ ಹಸಿಯಾಗಿ ತಿನ್ನಲು ಇಷ್ಟಪಡದೇ ಇರುವವರು ಸೌತೆಕಾಯಿ ಚಿಪ್ಸ್, ಉಪ್ಪಿನಕಾಯಿ, ಸಲಾಡ್ ಇತ್ಯಾದಿಗಳನ್ನು ತಯಾರಿಸಿಕೊಂಡು ಸೇವನೆ ಮಾಡಬಹುದು. ಸೌತೆಕಾಯಿಯಲ್ಲಿ ಇದೇ ರೀತಿಯ ಹಲವಾರು ಆರೋಗ್ಯ ಪ್ರಯೋಜನಗಳು ಇರುವುದರಿಂದ ಅವುಗಳ ಲಾಭವನ್ನು ಪಡೆದುಕೊಳ್ಳಬಹುದು.

#ಒಂದು ವೇಳೆ ನೀವು ಅತಿಯಾದ ಕೆಟ್ಟ ಬಾಯಿಯ ದುರ್ವಾಸನೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದಕ್ಕೆ ನಿಮ್ಮ ಹೊಟ್ಟೆಯ ಭಾಗದ ಅತಿಯಾದ ಉಷ್ಣಾಂಶ ಕೂಡ ಕಾರಣವಾಗುತ್ತದೆ.ಆದರೆ ಈ ಸಮಸ್ಯೆಯಿಂದ ಪಾರಾಗಲು ಬಾಯಿಯಲ್ಲಿ ಸ್ವಲ್ಪ ಹೊತ್ತು ಬೀಜಗಳನ್ನು ಒಳಗೊಂಡ ಸೌತೆಕಾಯಿ ಚೂರುಗಳನ್ನು ಇಟ್ಟುಕೊಳ್ಳುವುದರಿಂದ ಬಾಯಿಯಲ್ಲಿನ ಬ್ಯಾಕ್ಟಿರಿಯಾಗಳನ್ನು ನಾಶಪಡಿಸಲು ಅನುಕೂಲವಾಗುತ್ತದೆ ಮತ್ತು ಬಾಯಿಯ ದುರ್ವಾಸನೆ ಸಂಪೂರ್ಣವಾಗಿ ದೂರವಾಗುತ್ತದೆ.

#ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇದ್ದಾಗ ಹಲ್ಲುಗಳಲ್ಲಿ ಸಮಸ್ಯೆಗಳು ಕಾಡುತ್ತವೆ. ಆದರೆ ಸೌತೆಕಾಯಿ ಬೀಜಗಳು ಹಲ್ಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ರಾಸಾಯನಿಕ ಪದಾರ್ಥಗಳು ಹಲ್ಲು ಮತ್ತು ಒಸಡಿನ ಆರೋಗ್ಯವನ್ನು ಕಾಪಾಡುತ್ತವೆ.ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಸೌತೆಕಾಯಿ ಬೀಜ ಸಹಕಾರಿಯಾಗಿದೆ. ಇದು ಚರ್ಮದ ತುರಿಕೆ, ಒಣ ಚರ್ಮ, ಟ್ಯಾನಿಂಗ್ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗೇ ಬೀಜಗಳು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಉತ್ತಮ.

#ಗಮನಿಸಿ: ಮಧ್ಯಮ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ದೇಹಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಆದರೆ ಸೌತೆಕಾಯಿಗಳನ್ನು ಅಧಿಕವಾಗಿ ಸೇವಿಸಿದರೆ ಕೆಲವು ಹೊಟ್ಟೆಯ ಸಂಬಂಧಿ ತೊಂದರೆಗಳಿಗೆ ಕಾರಣವಾಗಬಹುದು.ಸೌತೆಕಾಯಿಗಳು ಶೇಕಡಾ 90 ಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುವುದರಿಂದ ಹೊಟ್ಟೆ ಉಬ್ಬಿಕೊಳ್ಳುವ ಸಾಧ್ಯತೆಯಿರುತ್ತದೆ. ಅಲ್ಲದೆ ಸೌತೆಕಾಯಿಯಲ್ಲಿರುವ ಬೀಜಗಳು ಕುಕುಬಿಟಿನ್ ನ ಸಮೃದ್ಧ ಮೂಲವಾಗಿದೆ. ಇದು ಮೂತ್ರವರ್ಧಕ ಗುಣಗಳನ್ನು ಹೊಂದಿದೆ.ದೊಡ್ಡ ಪ್ರಮಾಣದಲ್ಲಿ ಸೌತೆಕಾಯಿಯನ್ನು ಸೇವಿಸುವುದರಿಂದ ದೇಹದ ಅತಿಯಾದ ದ್ರವವನ್ನು ಹೊರಹಾಕಲು ಇದು ಕಾರಣವಾಗುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group