ದೇಹಕ್ಕೆ ಶಕ್ತಿ ಕೊಡುವ ಪೋಷಕಾಂಶಗಳು

ಆಹಾರವು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆನ್ನುವುದು ನಮಗೆಲ್ಲರಿಗೂ ತಿಳಿದಿದೆ. ಇದು ಬೆಳವಣಿಗೆಗೆ (ದೈಹಿಕ ಮತ್ತು ಮಾನಸಿಕ), ಉತ್ತಮ ಆರೋಗ್ಯ ಮತ್ತು ರೋಗದಿಂದ ರಕ್ಷಣೆಗೆ ಸಹಾಯ ಮಾಡುವ ಅಗತ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತದೆ.
ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿ ನೀಡಲಾಗಿದೆ;
ಪಾಲಕ್ ಸೊಪ್ಪು :ವಿಟಮಿನ್ ಸಿ ಯಥೇಚ್ಛ ಪ್ರಮಾಣದಲ್ಲಿರುವ ಪಾಲಕ್ ಸೊಪ್ಪು ಆ್ಯಂಟಿಆಕ್ಸಿಡೆಂಟ್ಸ್ ಮತ್ತು ಬೀಟಾ ಕ್ಯಾರೊಟಿನ್‌ನ ಆಗರವೂ ಆಗಿದೆ. ಇವು ಸೋಂಕಿನ ವಿರುದ್ಧ ಹೋರಾಡುತ್ತವೆ.
ಟೊಮೆಟೊ : ಅಡುಗೆ ಮನೆಯಲ್ಲಿ ಸದಾ ಇರುವ ಮತ್ತು ವರ್ಷವಿಡೀ ಸಿಗುವ ಟೊಮೆಟೊ ವಿಟಮಿನ್ ಸಿ ಯ ಆಗರವಾಗಿದೆ. ಇದನ್ನು ಸಾರು, ಪಲ್ಯ, ಪಾಸ್ತಾ, ಸಲಾಡ್, ಸಾಸ್, ಸೂಪ್ ಇತ್ಯಾದಿಗಳಿಗೆ ಸೇರಿಸಿ ಸೇವಿಸಬಹುದು.
ಸೇಬು:ಸೇಬು ವಿಟಮಿನ್ ಸಿ ಮತ್ತು ಬಿ ಯ ಅತ್ಯುತ್ತಮ ಮೂಲವಾಗಿದೆ. ಇದು ಪೊಟ್ಯಾಷಿಯಂ ಅನ್ನು ಹೊಂದಿದ್ದು, ಇದು ನಿಮ್ಮ ಶರೀರಕ್ಕೆ ಅಗತ್ಯವಿರುವ ಶಕ್ತಿ ನೀಡಿ, ನಿಮಗೆ ಚೈತನ್ಯ ನೀಡುತ್ತದೆ.
ನೆಲ್ಲಿಕಾಯಿ : ಆಮ್ಲ ಎಂದೂ ಕರೆಯಲ್ಪಡುವ ನೆಲ್ಲಿಕಾಯಿಯಲ್ಲಿ ಮೂರು ಕಿತ್ತಳೆಗಳಲ್ಲಿರುವುದಕ್ಕಿಂತಲೂ ಹೆಚ್ಚಿನ ವಿಟಮಿನ್ ಸಿ ಇದೆ.
ಬಾಳೆಹಣ್ಣು :ಬಾಳೆಹಣ್ಣು ನಿಮ್ಮ ಶರೀರಕ್ಕೆ ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ಬೆಳಿಗ್ಗೆ ಒಂದು ಬಾಳೆಹಣ್ಣು ಸೇವಿಸುವುದರಿಂದ ನೀವು ದಿನವಿಡೀ ಚೈತನ್ಯದಿಂದಿರಬಹುದು. ಇದು ಪೊಟ್ಯಾಷಿಯಂ, ಕಾರ್ಬೋಹೈಡ್ರೇಟ್ಸ್, ವಿಟಮಿನ್ ಬಿ6 ನಂತಹ ಖನಿಜಗಳಿಂದ ತುಂಬಿದ್ದು, ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ.
ದ್ರಾಕ್ಷಿ ಹಣ್ಣು: ದ್ರಾಕ್ಷಿ ಹಣ್ಣು ಬಿಳಿ ಇರಲಿ ಕಪ್ಪು ಇರಲಿ, ರುಚಿಕರ ಮತ್ತು ಆರೋಗ್ಯಕರವಾಗಿವೆ. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳು, ಕರಗುವ ನಾರು ಮತ್ತು ವಿಟಮಿನ್ ಸಿ ಇವೆ. ನಿತ್ಯವೂ ಕೊಂಚ ಪ್ರಮಾಣದಲ್ಲಿ ದ್ರಾಕ್ಷಿಗಳನ್ನು ಸೇವಿಸುತ್ತಾ ಬಂದರೆ ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸನ್ನು ಪಡೆಯಬಹುದು.
ಬೆಳ್ಳುಳ್ಳಿ:ಬೆಳ್ಳುಳ್ಳಿಯನ್ನು (garlic) ಬಹುತೇಕ ಬಳಸಲಾಗುತ್ತದೆ. ಇದು ಆಹಾರ ಪರೀಕ್ಷೆಗಳ ಜೊತೆಗೆ ಆರೋಗ್ಯಕ್ಕೆ ಅತ್ಯಗತ್ಯ. ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯ ರೋಗ ನಿರೋಧಕ-ವರ್ಧಕ ಗುಣ ಲಕ್ಷಣಗಳು ಸಲ್ಫರ್-ಸಮೃದ್ಧ ಸಂಯುಕ್ತಗಳಿಂದ ಬರುತ್ತವೆ. ಉದಾಹರಣೆಗೆ ಎಲಿಸಿನ್ ನ ಭಾರೀ ಸಾಂದ್ರತೆಗಳು. ಇದು ಅಪಧಮನಿಗಳ ಗಟ್ಟಿಯಾಗುವಿಕೆಯನ್ನೂ ನಿಧಾನಗೊಳಿಸಬಹುದು.