ತೆಂಗಿನ ಸಿಪ್ಪೆಯ ಉಪಯೋಗಗಳು..!

ತೆಂಗಿನ ನಾರಿನಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಜನರು ಕಂಡುಕೊಳ್ಳಬಹುದು. ಪ್ರಮುಖವಾಗಿ ಮೂಲವ್ಯಾಧಿ ಸಮಸ್ಯೆಗೆ ಇದರಿಂದ ಸಾಕಷ್ಟು ಪರಿಣಾಮಕಾರಿಯಾದ ಪರಿಹಾರ ಸಿಗುತ್ತದೆ. ಸ್ವಲ್ಪ ಬುದ್ಧಿ ಖರ್ಚು ಮಾಡಿದರೆ ಇದರ ಒಂದೊಂದೇ ಉಪಯೋಗಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಸದ್ಯ ಈ ಲೇಖನದಲ್ಲಿ ಮೂಲವ್ಯಾದಿ ಸಮಸ್ಯೆಗೆ ಸಂಬಂಧ ಪಟ್ಟಂತೆ ತೆಂಗಿನ ನಾರಿನ ಉಪಯೋಗಗಳನ್ನು ಮತ್ತು ಇನ್ನಿತರ ಕೆಲವು ಆರೋಗ್ಯ ಸಮಸ್ಯೆಗಳಿಗೆ ತೆಂಗಿನ ನಾರನ್ನು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂಬ ಬಗ್ಗೆ ನೋಡೋಣ.
#ತೆಂಗಿನ ಸಿಪ್ಪೆಯ ನಾರುಗಳು ನಿಮ್ಮ ಸಸ್ಯಗಳ ಬೇರುಗಳಿಗೆ ಉತ್ತಮ ಗಾಳಿ ಪಡೆಲು ಸಹಾಯ ಮಾಡುತ್ತದೆ. ತೆಂಗಿನ ಸಿಪ್ಪೆಯ ಉತ್ಪನ್ನಗಳು ಆಮ್ಲಜನಕವನ್ನು ಸಸ್ಯದ ಬೇರುಗಳ ಸುತ್ತ ಮುಕ್ತವಾಗಿ ಹರಿಯುವಂತೆ ಮಾಡುತ್ತದೆ, ಇದು ನಿಮ್ಮ ಸಸ್ಯಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಅಂತಿಮವಾಗಿ ಅವು ದೊಡ್ಡದಾಗಿ, ವೇಗವಾಗಿ ಬೆಳೆಯಲು ಸಹಾಯ ಮಾಡಿಕೊಡುತ್ತದೆ.
#ನೈಸರ್ಗಿಕ ಡೈ (Natural Die) ರೂಪದಲ್ಲಿ ಬಳಕೆ ತೆಂಗಿನ ಜುಟ್ಟನ್ನು ನೈಸರ್ಗಿಕ ಡೈ ತಯಾರಿಸಲು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಲೋಹದ ಬಾಣಲೆಯನ್ನು ತೆಗೆದುಕೊಳ್ಳಿ ಹಾಗೂ ಅದನ್ನು ಬಿಸಿ ಮಾಡಿ. ಈಗ ಅದರಲ್ಲಿ ತೆಂಗಿನ ಜುಟ್ಟನ್ನು ಇಡಿ ಹಾಗೂ ಅವುಗಳಲ್ಲಿನ ಒಂದು ಅಥವಾ ಎರಡು ಜುಟ್ಟನ್ನು ಬೆಂಕಿಯಿಂದ ಸುಟ್ಟುಹಾಕಿ. ಇದರಿಂದ ನಿಧಾನಕ್ಕೆ ಎಲ್ಲಾ ಜುಟ್ಟುಗಳು ಹೊತ್ತಿಕೊಳ್ಳಲಿವೆ.
#ಬಾಣಲೆಯಲ್ಲಿರುವ ಎಲ್ಲಾ ತೆಂಗಿನ ಜುಟ್ಟನ್ನು ಸರಿಯಾಗಿ ಸುಟ್ಟುಕೊಳ್ಳಿ. ಇದರ ಪೌಡರ್ ತಯಾರಿಸಿಕೊಳ್ಳಿ. ಪೌಡರ್ ತಯಾರಿಸಿದ ಬಳಿಕ ಇದು ಚಾರ್ಕೋಲ್ ರೀತಿ ಕಪ್ಪಾಗಲಿದೆ. ಇದೀಗ 3 ಚಮಚೆ ತೆಂಗಿನ ಪೌಡರ್‌ನಲ್ಲಿ 2 ಚಮಚೆ ಸಾಸಿವೆ ಎಣ್ಣೆ ಬೆರೆಸಿ ಹಾಗೂ ಅದನ್ನು ಡೈ ರೀತಿಯಲ್ಲಿ ಬಳಸಬಹುದು. ಇದರಿಂದ ಕೂದಲಿಗೆ ಕಪ್ಪು ಬಣ್ಣ ಬರುತ್ತದೆ. ಆದರೆ ಇದು ಈ ಬಣ್ಣ ಹೆಚ್ಚು ದಿನವಿರೋಲ್ಲ.
#ಬಾಯಿಯ ಸ್ವಚ್ಛತೆಗೆ ಪ್ರಮುಖ ಆದ್ಯತೆ ಕೊಡುವವರು ಬಹುಶಹ ತೆಂಗಿನ ಸಿಪ್ಪೆಯನ್ನು ಬಿಸಾಡುವುದಿಲ್ಲ ಎನಿಸುತ್ತದೆ. ಏಕೆಂದರೆ ತೆಂಗಿನ ನಾರನ್ನು ಹಲ್ಲುಗಳ ಸ್ವಚ್ಛತೆಗೆ ಬಳಕೆ ಮಾಡುತ್ತಾರೆ. ನಿಮ್ಮ ಹಲ್ಲುಗಳ ಹೊಳಪು ಹೆಚ್ಚಿಸುವಂತೆ ತೆಂಗಿನ ನಾರು ಕೆಲಸ ಮಾಡುತ್ತದೆ. ಹಳದಿ ಬಣ್ಣದಲ್ಲಿ ಕರೆಗಟ್ಟಿರುವ ಹಲ್ಲುಗಳನ್ನು ಮತ್ತೆ ಬಿಳಿ ಬಣ್ಣಕ್ಕೆ ತಿರುಗಿಸುವಲ್ಲಿ ತೆಂಗಿನ ಎಣ್ಣೆಯ ಪಾತ್ರವನ್ನು ಮರೆಯುವಂತಿಲ್ಲ.
#ರಕ್ತ ಸಂಚಾರಕ್ಕೆ ಸಂಬಂಧ ಪಟ್ಟ ಹಲವಾರು ಅಸ್ವಸ್ಥತೆಗಳನ್ನು ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಪರಿಹಾರ ಮಾಡುತ್ತದೆ. ತೆಂಗಿನ ಸಿಪ್ಪೆಯನ್ನು ಸುಟ್ಟ ಬೂದಿಯನ್ನು ಕಾಲರಾ ಸಮಸ್ಯೆಗೆ ಮತ್ತು ಬಿಕ್ಕಳಿಕೆ ಸಮಸ್ಯೆಗೆ ಬಳಕೆ ಮಾಡಬಹುದು. ಇಷ್ಟೇ ಅಲ್ಲದೆ ಒಣಗಿದ ತೆಂಗಿನ ನಾರಿನ ಸಿಪ್ಪೆಯ ಪುಡಿಯನ್ನು ಜನರು ಗಿಡಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸುತ್ತಾರೆ.