ಚಿಯಾ ಬೀಜದ ಉಪಯೋಗಗಳು

ನಾವೆಲ್ಲ ಸೇವಿಸುವ ಕೆಲವು ಆಹಾರ ಧಾನ್ಯಗಳಂತೆಯೇ ಈ ಚಿಯಾ ಬೀಜ ಕೂಡ ಒಂದು. ಪುದೀನಾ ಸಸ್ಯಗಳಂತೆ ಈ ಚಿಯಾ ಬೀಜಗಳ ಸಸ್ಯವು ಕಂಡುಬರುತ್ತದೆ.ಇವುಗಳು ನೋಡುವುದಕ್ಕೆ ಅಂಡಾಕಾರವಾಗಿದ್ದು, ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತವೆ.

ಕೇವಲ 2 ಟೀ ಚಮಚ ಚಿಯಾ ಬೀಜಗಳು(Chia Seeds) (30 ಗ್ರಾಂ) 10 ಗ್ರಾಂ ಫೈಬರ್, 5 ಗ್ರಾಂ ಪ್ರೋಟೀನ್ ಮತ್ತು 138 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಪ್ರೋಟೀನ್ ಭರಿತ ಚಿಯಾ ಬೀಜಗಳು ಮೂಳೆಗಳನ್ನು ಬಲವಾಗಿರಿಸಲು, ಹೃದಯಾ ರೋಗದಿಂದ ರಕ್ಷಿಸಲು ಮತ್ತು ದೇಹ ತೂಕ ಇಳಿಸಿಲು ಕೂಡ ಸಹಾಯ ಮಾಡುತ್ತದೆ. ಇಂತಹ ಹಲವು ಪ್ರಯೋಜನಗಳನ್ನು ತಿಳಿಯೋಣ ಬನ್ನಿ.

#ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ:ಚಿಯಾ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳ (alpha-linolenic acid ಅಥವಾ ALA) ಪ್ರಭಾವಶಾಲಿ ಪ್ರಮಾಣವಿದೆ. ಈ ಆಲ್ಫಾ-ಲಿನೋಲೆನಿಕ್ ಆಮ್ಲ ಅತ್ಯಂತ ಹೃದಯಸ್ನೇಹಿ ಪೋಷಕಾಂಶವಾಗಿದೆ.ತನ್ಮೂಲಕ ಚಿಯಾ ಬೀಜಗಳನ್ನು ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುವುದುಅಥವಾ ನಿಮ್ಮ ದೈನಂದಿನ ಆಹಾರದಲ್ಲಿ ಚಿಯಾ ಬೀಜಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದ್ರೋಗ ಎದುರಾಗುವ ಅಪಾಯವನ್ನು ಅಪಾರ ಮಟ್ಟಿಗೆ ಕಡಿಮೆ ಮಾಡಬಹುದು.

#ರಕ್ತಹೀನತೆ(Anemia) ಸಮಸ್ಯೆಯಿಂದ ಬಳಲುತ್ತಿರುವವರು ಚಿಯಾ ಬೀಜಗಳನ್ನ ಹಾಲಿನಲ್ಲಿ ನೆನಸಿ ಸೇವಿಸಬೇಕು. ಚಿಯಾ ಬೀಜಗಳಲ್ಲಿ ಕಬ್ಬಿಣ ಅಂಶವು ಹೆಚ್ಚಾಗಿದೆ. ಆದ್ದರಿಂದ ಹಾಲು ಮತ್ತು ಚಿಯಾ ಬೀಜಗಳನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆಗೆ ಬೇಗೆ ಪರಿಹಾರ ದೊರೆಯುತ್ತದೆ

#ಕ್ಯಾನ್ಸರ್ ರೋಗಕ್ಕೂ ರಾಮಬಾಣ:ಚಿಯಾ ಬೀಜಗಳು ಆಂಟಿ ಆಕ್ಸಿಡೆಂಟು ಅಥವಾ ಉತ್ಕರ್ಷಣ ನಿರೋಧಕ ಗುಣಗಳ ಸಮೃದ್ಧ ಮೂಲವಾಗಿದೆ. ಈ ಉತ್ಕರ್ಷಣ ನಿರೋಧಕಗಳು ಬೀಜಗಳಲ್ಲಿನ ಸೂಕ್ಷ್ಮ ಕೊಬ್ಬಗಳು ರಾನ್ಸಿಡ್ (rancid-ನಾತದ ಜಿಡ್ಡು) ಆಗಿ ಪರಿವರ್ತನೆಯಾಗದಂತೆ ರಕ್ಷಿಸುತ್ತದೆ.ಇದಕ್ಕಿಂತಲೂ ಹೆಚ್ಚಾಗಿ, ಈ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಕ್ಯಾನ್ಸರ್ ಆವರಿಸಲು ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ಎದುರಾಗಬಹುದಾದ ಹಾನಿಯಿಂದ ರಕ್ಷಣೆ ನೀಡುತ್ತದೆ.

#ಚಿಯಾ ಪಾನೀಯ:ಈ ತಾಜಾ ಪಾನೀಯದಲ್ಲಿ ಅಧಿಕ ಪ್ರಮಾಣದ ನಾರಿನಂಶಗಳಿವೆ. ಇವು ಜೀರ್ಣ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಡುತ್ತವೆ. ಚಿಯಾದಲ್ಲಿ ಇರುವ ಆರೋಗ್ಯಕಾರಕ ಗುಣಗಳು ಕರುಳಿನ ಚಲನೆಯನ್ನು ಸುಧಾರಿಸುತ್ತವೆ. ಇನ್ಸುಲಿನ್ ಸಂವೇದನೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತವೆ. ಆರೋಗ್ಯಕಾರಕ ರಕ್ತನಾಳದ ವ್ಯವಸ್ಥೆಯನ್ನು ಸುಧಾರಿಸುವುದು. ಈ ಬೀಜದಲ್ಲಿ ಕ್ಯಾಲ್ಸಿಯಮ್, ಮೆಗ್ನಿಸಿಯಮ್ ಮತ್ತು ರಂಜಕ ಸಮೃದ್ಧವಾಗಿವೆ.ಅವು ಮೂಳೆಯ ಆರೋಗ್ಯಕ್ಕೆ ಅದ್ಭುತ ಪೋಷಣೆ ನೀಡುವುದು. ಈ ಪಾನೀಯವನ್ನು ಗಣನೀಯವಾಗಿ ಕುಡಿಯುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ನಿವಾರಿಸಬಹುದು. ಜೊತೆಗೆ ಅನಗತ್ಯವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದು.

#ಆರೋಗ್ಯಕರ ಕೂದಲಿಗೆ ಸಹಾಯಕಾರಿ:ದೇಹದ ಆರೋಗ್ಯ ಅಷ್ಟೇ ಅಲ್ಲದೇ, ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಈ ಚಿಯಾ ಬೀಜಗಳನ್ನು ಬಳಸಬಹುದು.ಕೂದಲು ವೇಗವಾಗಿ ಬೆಳೆಯುತ್ತದೆ.ಕೂದಲು ನಯಾ ಹಾಗೂ ಶೈನ್ ಆಗುತ್ತದೆಕೂದಲ ಉದುರುವಿಕೆ ತಡೆಯುತ್ತದೆಡ್ರೈ ಆಗಿರುವ ಕೂದಲನ್ನು ಸರಿ ಪಡಿಸುತ್ತದೆ.ಕೂದಲು ತೆಳುವಾಗದಂತೆ ನೋಡಿಕೊಳ್ಳುತ್ತದೆ.ಕೂದಲ ಸ್ಥಿತಿಸ್ಥಾಪಕತ್ವವನ್ನು ಕಾಯುತ್ತದೆಉದ್ದನೆಯ ಕೂದಲನ್ನು ಕಾಯ್ದುಕೊಳ್ಳುತ್ತದೆ

ಈ ಮೇಲಿನ ಪ್ರಯೋಜನಗಳನ್ನು ನೀವು ಚಿಯಾ ಬೀಜಗಳನ್ನು ಉಪಯೋಗಿಸುವುದರಿಂದ ಪಡೆದುಕೊಳ್ಳಬಹುದು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group