ಬೆಳೆಹಾನಿಯಾದ ಈ ರೈತರಿಗೆ ಸೆಪ್ಟೆಬರ್ 18 ರೊಳಗೆ ಪರಿಹಾರ ಜಮೆಯಾಗಲಿದೆ

ಅತೀವೃಷ್ಟಿಯಿಂದಾಗಿ ಬೆಳೆ ಹಾನಿಯಾದ ಸಂತ್ರಸ್ತ ರೈತರ ಮಾಹಿತಿ ಪರಿಹಾರ ಪೋರ್ಟಲ್ ಗೆ ದಾಖಲಾದವರಿಗೆ ಸೆಪ್ಟೆಂಬರ್ 18 ರೊಳಗಾಗಿ ಪರಿಹಾರ ನೀಡಲಾಗುವುದು. ಬೆಳೆ ಹಾನಿಯಾಗಿರುವ ಕುರಿತು ಪರಿಹಾರ ಪೋರ್ಟಲ್ ಗೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು, ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಅವರು ದಾವಣಗೆರೆ ನಗರದಲ್ಲಿ 18ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅತೀವೃಷ್ಟಿ, ಪ್ರವಾಹದಿಂದಾಗಿ ಆಗಿರುವ ನಷ್ಟದ ಬಗ್ಗೆ ಪರಿಹಾರ ಪೋರ್ಟಲ್ ಗೆ ಸಮರೋಪಾದಿಯಲ್ಲಿ ಮಾಹಿತಿ ದಾಖಲಿಸಲು ಸೂಚನೆ ನೀಡಲಾಗಿದೆ ಎಂದರು.
ಪರಿಹಾರ ಪೋರ್ಟಲ್ ಗೆ ಶೇ. 50 ರಷ್ಟು ಮಾಹಿತಿ ದಾಖಲಾಗಿದೆ. ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಆಗಿದ್ದು, ಪೋರ್ಟಲ್ಗೆ ಅದರ ಮಾಹಿತಿ ದಾಖಲಿಸಬೇಕಿದೆ.
ರೈತರಿಗೆ ನಗದು ರೂಪದಲ್ಲಾಗಲಿ ಅಥವಾ ಚೆಕ್ ಆಗಲಿ ನೀಡಲಾಗುವುದಿಲ್ಲ. ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಲಾಗುವುದು. ಸಂತ್ರಸ್ತ ರೈತರಿಗೆ ಅತೀ ಶೀಘ್ರದಲ್ಲಿ ಪರಿಹಾರ ಸಿಗಲಿದೆ ಎಂದರು.
ಕಳೆದ ಎರಡು ತಿಂಗಳಲ್ಲಿ ಸುರಿದ ಅತೀವೃಷ್ಟಿ ಹಾಗೂ ಪ್ರವಾಹರಿಂದಾಗಿ ರಾಜ್ಯದಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದಾಗಿ ಪರಿಹಾರ ನೀಡಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆಯಾಗಲಿದೆ.
ಏನಿದು ಪರಿಹಾರ ತಂತ್ರಾಂಶ?
ಅತೀವೃಷ್ಟಿ, ಅನಾವೃಷ್ಟಿ, ಪ್ರವಾಹದಿಂದಾಗಿ ರೈತರ ಬೆಳೆ ಹಾಳಾದರೆ ಸರ್ಕಾರವು ರೈತರಿಗೆ ಆರ್ಥಿಕ ನೆರವಾಗಲೆಂದು ಪರಿಹಾರ ಹಣ ಘೋಷಿಸುತ್ತದೆ. ಎಕರೆಗೆ ಇಂತಿಷ್ಟು ಹಣ ಪರಿಹಾರ ಘೋಷಣೆ ಮಾಡುತ್ತದೆ. ಯಾವ ಜಿಲ್ಲೆಯಲ್ಲಿ ಯಾವ ಯಾವ ರೈತರಿಗೆ ಎಷ್ಟು ಎಕರೆ ಬೆಳೆ ಹಾಳಾಗಿದೆ ಎಂಬುದನ್ನುಮಾಹಿತಿ ಅಪ್ಲೋಡ್ ಮಾಡಲು ಪರಿಹಾರ ತಂತ್ರಾಂಶವನ್ನು ಸರ್ಕಾರವು ಅಭಿವೃದ್ಧಿಪಡಿಸಿದೆ. ಈ ಪರಿಹಾರ ತಂತ್ರಾಂಶದಲ್ಲಿ ರೈತರ ಬೆಳೆ ಹಾನಿ ಮಾಹಿತಿ ಅಪ್ಲೋಡ್ ಮಾಡಿದ ನಂತರ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುವುದು.
- ಪರಿಹಾರ ಸ್ಟೇಟಸ್ ಚೆಕ್ ಮಾಡಬಹುದೇ?
ರೈತರು ಪರಿಹಾರ ಸ್ಟೇಟಸನ್ನು ಮೊಬೈಲ್ನಲ್ಲಿ ಚೆಕ್ ಮಾಡಬಹುದು.ಇದು ತುಂಬಾ ಸರಳ ವಿಧಾನವಾಗಿರುತ್ತದೆ. ರೈತರ ಬಳಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ಯಾವ ವರ್ಷದಲ್ಲಿ ಎಷ್ಟು ಪರಿಹಾರ ಹಣ ಜಮೆ ಮಾಡಲಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ರೈತರು ಈ
https://parihara.karnataka.gov.in/Pariharahome/PHHome
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಜ್ ಓಪನ್ ಆಗುತ್ತದೆ. ಅಲ್ಲಿ parihara Payment ಮೇಲೆ ಕ್ಲಿಕ್ ಮಾಡಬೇಕು. ನಂತರ ತೆರೆದುಕೊಳ್ಳುವ ಇನ್ನೊಂದು ಪೇಜ್ ನಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಫ್ಲಡ್, ವರ್ಷ, ಆಧಾರ್ ಕಾರ್ಡ್, ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಪರಿಹಾರ ಸ್ಟೇಟಸ್ ಚೆಕ್ ಮಾಡಬಹುದು. ಬೆಳೆ ಹಾನಿ ವೀಕ್ಷಣೆಗೆ ಕೇಂದ್ರ ತಂಡರಾಜ್ಯದಲ್ಲಿ ಮಳೆಯಿಂದಾಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ತಂಡ ಸೆಪ್ಟೆಂಬರ್ 7 ರಂದು ರಾಜ್ಯಕ್ಕೆ ಆಗಮಿಸಿದೆ. ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.