ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಇಲ್ಲಿವೆ ಮನೆಮದ್ದುಗಳು

ಕೂದಲು ಬೆಳ್ಳಗಾಗಲು ಹೆಚ್ಚುತ್ತಿರುವ ಮಾಲಿನ್ಯ, ಒತ್ತಡ, ರೋಗಗಳು, ತಪ್ಪು ಆಹಾರ ಪದ್ಧತಿ ಸೇರಿದಂತೆ ಹಲವು ಕಾರಣಗಳಿರಬಹುದು.ನೈಸರ್ಗಿಕವಾಗಿ ಉದ್ದವಾದ, ಕಪ್ಪಾದ ಕೂದಲನ್ನು ಪಡೆಯಲು ಬಹಳ ನಿಮಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳು ಸಹಕಾರಿ ಆಗಿವೆ.

ಬಿಳಿ ಕೂದಲಿನ ಸಮಸ್ಯೆಯಿಂದ ನೀವೂ ತೊಂದರೆಗೀಡಾಗಿದ್ದರೆ ಕೆಲವು ನೈಸರ್ಗಿಕ ಮನೆಮದ್ದುಗಳಿಂದ ನೀವು ಇದರಿಂದ ಪರಿಹಾರ ಪಡೆಯಬಹುದು.

#ತೆಂಗಿನೆಣ್ಣೆ ಮತ್ತು ಲಿಂಬೆ:ತೆಂಗಿನೆಣ್ಣೆ ಮತ್ತು ಲಿಂಬೆಯು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿನ ಕಿರುಚೀಲದ ಕೋಶಗಳು ವರ್ಣಕಳೆದುಕೊಳ್ಳದಂತೆ ತಡೆಯುವುದು ಮತ್ತು ದಿನಕಳೆದಂತೆ ಕೂದಲು ಕಪ್ಪಾಗುವಂತೆ ಮಾಡುವುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಇದನ್ನು ಬಳಸಿಕೊಳ್ಳಿ.

#ನೆಲ್ಲಿಕಾಯಿ:ಮೊದಲನೆಯದಾಗಿ, ನೆಲ್ಲಿಕಾಯಿಯನ್ನು ಹಿಸುಕಿ ಮತ್ತು ಅದರ ಕಾಳುಗಳನ್ನು ತೆಗೆದುಹಾಕಿ. ಅದರ ನಂತರ ಅದನ್ನು ನೀರಿನಲ್ಲಿ ಕುದಿಸಿ.ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ. ನಂತರ ಅದರಲ್ಲಿ ಗೋರಂಟಿ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ.

#ಬ್ಲ್ಯಾಕ್ ಟೀ:ಬ್ಲ್ಯಾಕ್ ಟೀಯನ್ನು ಕೂದಲಿಗೆ ಹಚ್ಚಿಕೊಂಡರೆ ಕೂದಲು ಕಪ್ಪಾಗುವುದು. ಇದು ಕೂದಲು ದಪ್ಪವಾಗಿ ಬೆಳೆದು ಕಾಂತಿಯುತವಾಗುವಂತೆ ಮಾಡುವುದು. ಬ್ಲ್ಯಾಕ್ ಟೀ ಮಾಸ್ಕ್ ನ್ನು ವಾರದಲ್ಲಿ ಎರಡು ಸಲ ಬಳಸಿ ಮತ್ತು ಇದರ ಬಳಿಕ ಶಾಂಪೂ ಬಲಸಬೇಡಿ.

#ಈರುಳ್ಳಿ ಬಿಳಿ ಕೂದಲು ಹೋಗಲಾಡಿಸುತ್ತದೆ:ಈರುಳ್ಳಿಯನ್ನು ಪೇಸ್ಟ್ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆ ಅದನ್ನು ಹಾಗೆಯೇ ಬಿಡಿ. ಒಂದು ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.

#ಕರಿಬೇವಿನ ಎಲೆ :ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ಒಗ್ಗರಣೆಗೆ ಬಳಸಲಾಗುತ್ತದೆ. ಕರಿಬೇವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಒಂದು ಬಟ್ಟಲು ತೆಂಗಿನೆಣ್ಣೆ ತೆಗೆದುಕೊಂಡು ಅದನ್ನು ಬಿಸಿಮಾಡಿ. ಎಣ್ಣೆ ಬಿಸಿ ಮಾಡುವಾಗ ಆ ಎಣ್ಣೆಗೆ 20 ರಿಂದ 30 ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸುಮಾರು ಅರ್ಧ ಘಂಟೆಯ ನಂತರ, ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅಳವಡಿಸಿಕೊಂಡರೆ, ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group