ಮೂಳೆಗಳು ಗಟ್ಟಿಮುಟ್ಟಾಗಿ ಇರಲು ಇಂತಹ ಆಹಾರ ಸೇವಿಸಿ!

ಮೂಳೆಗಳು ಗಟ್ಟಿಮುಟ್ಟಾಗಿ ಇದ್ದರೆ ಮಾತ್ರ ದೇಹ ಗಟ್ಟಿಮುಟ್ಟಾಗಿರಲು ಸಾಧ್ಯ. ದೇಹದಲ್ಲಿ ಕ್ಯಾಲ್ಷಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಕೂಡ ಮೂಳೆಗಳ ಸಮಸ್ಯೆಗೆ ಕಾರಣವಾಗುತ್ತದೆ. ಕೇವಲ ಔಷಧಿಗಳಿಂದ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ನಿಯಮಿತ ವ್ಯಾಯಾಮ ಹಾಗೂ ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಪೌಷ್ಟಿಕ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ. ಮೂಳೆಗಳು ಆರೋಗ್ಯಕರವಾಗಿಟ್ಟುಕೊಳ್ಳಲು, ಕ್ಯಾಲ್ಶಿಯಂ, ವಿಟಮಿನ್ ಡಿ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಎ ವುಳ್ಳ ಆಹಾರಗಳ ಸೇವನೆ ಅತ್ಯವಶ್ಯಕ.ಅಂತಹ ಆಹಾರಗಳ ಪಟ್ಟಿಯನ್ನು ಈ ಕೆಳಗೆ ನೋಡಿ;

#ಹಾಲು:ಹಾಲು ಒಂದು ಸೂಪರ್ ಆಹಾರ. ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ನೀವು ಬೆಳಗಿನ ಉಪಹಾರದಲ್ಲಿ ಹಾಲನ್ನು ಸೇವಿಸಬಹುದು. ಇದಲ್ಲದೇ, ಹಾಲಿಗೆ ಓಟ್ಸ್ ಬೆರೆಸಿ ಸೇವಿಸಬಹುದು.

#ಕಡಿಮೆ ಸಿಹಿ ಮೊಸರು ಸೇವನೆ ಮಾಡಿಗ್ರೀಕ್ ಮೊಸರಿನಂತೆ ಬೆಳಿಗ್ಗೆ ಕಡಿಮೆ ಸಿಹಿ ಮೊಸರು ಸೇವನೆ ಮಾಡುವ ಮೂಲಕ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಸಹ ಪೂರೈಸಬಹುದು. ಇದಲ್ಲದೆ ಸಾಕಷ್ಟು ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಅನ್ನು ಸೇವಿಸುವ ಮೂಲಕ ಮೂಳೆಗಳ ಹಾನಿ, ನೋವು ತಡೆಯಬಹುದು.

#ಮೊಟ್ಟೆ:ಮೊಟ್ಟೆಗಳು ಅಗ್ಗವಾಗಿದ್ದು, ಸುಲಭವಾಗಿ ಸಿಗುತ್ತವೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಇರುತ್ತದೆ. ದೇಹದಲ್ಲಿನ ಪ್ರೋಟೀನ್ ಕೊರತೆಯು ಮೂಳೆಗಳ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಮೊಟ್ಟೆಯನ್ನು ಆಮ್ಲೆಟ್ ರೂಪದಲ್ಲಿ ಕೂಡ ತಿನ್ನಬಹುದು.

#ಗ್ರೀಕ್ ಮೊಸರು ಸೇವನೆ ಮಾಡಿ:ವಯಸ್ಸಾಗುವಿಕೆಯಿಂದ ಮತ್ತು ಮೂಳೆಗಳು ದುರ್ಬಲವಾಗುವುದನ್ನು ತಡೆಯಲು ನೀವು ಬೆಳಗಿನ ಉಪಾಹಾರದಲ್ಲಿ ಗ್ರೀಕ್ ಮೊಸರನ್ನು ಸೇವಿಸಬಹುದು. ಓಟ್ಸ್, ವಾಲ್‌ನಟ್‌ಗಳನ್ನು ಗ್ರೀಕ್ ಮೊಸರಿನೊಂದಿಗೆ ಬೆರೆಸುವುದರಿಂದ ನಿಮ್ಮ ದೇಹವು ಕ್ಯಾಲ್ಸಿಯಂ, ಅಮೈನೋ ಆಮ್ಲಗಳು ಮತ್ತು ಮೆಗ್ನೀಸಿಯಮ್ ಅನ್ನು ಹೇರಳವಾಗಿ ಪಡೆಯುತ್ತದೆ.ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವುದರಿಂದ, ನಿಮ್ಮ ಹೊಟ್ಟೆಯು ದೀರ್ಘ ಕಾಲದವರೆಗೆ ತುಂಬಿರುತ್ತದೆ, ಇದರಿಂದ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.

#ಏಕ ದಳ ಧಾನ್ಯಗಳು:ಏಕದಳ ಧಾನ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಗೋಧಿ, ಜೋಳ, ಮೆಕ್ಕೆಜೋಳ, ಬ್ರೌನ್ ರೈಸ್ ಇವುಗಳಲ್ಲಿ ಅಗತ್ಯ ವಿಟಮಿನ್ ಮತ್ತು ಫೈಬರ್ ಇರುತ್ತದೆ. ಇವು ಮೂಳೆಯನ್ನು ಬಲಿಷ್ಠಗೊಳಿಸಲು ಹಾಗೂ ಆರೋಗ್ಯವಾಗಿಡಲು ನೆರವಾಗುತ್ತದೆ.

#ಪ್ರತಿದಿನ ಹಸಿರು ಸೊಪ್ಪುಗಳನ್ನು ಸೇವಿಸಿ:ಪಾಲಕ್ ನಂತಹ ಹಸಿರು ಸೊಪ್ಪುಗಳು ಮೂಳೆಗಳಿಗೆ ಬಹಳ ಮುಖ್ಯ. 1 ಕಪ್ ಪಾಲಕ್ ನಲ್ಲಿ ದೈನಂದಿನ ಅಗತ್ಯದ 25% ನಷ್ಟು ಕ್ಯಾಲ್ಸಿಯಂ ಇದೆ.

#ಮೀನು: ಮೀನು (fish) ಮಿಟಮಿನ್ ಡಿ ಅತ್ಯಂತ ಉತ್ತಮ ಮೂಲ. ಇದರಿಂದ ಮೂಳೆ ಬಲಿಷ್ಠವಾಗುತ್ತದೆ. ಮೀನು ಖಂಡಿತಾ ನಿಮ್ಮ ಡಯಟ್ (diet) ನಲ್ಲಿರಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group