ಸರ್ಕಾರಿ ಸೌಲಭ್ಯ ಪಡೆಯಲು ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್ ಅವಶ್ಯಕ:

ಏನಿದು ಸ್ವಾಭಿಮಾನಿ ರೈತ ಕಾರ್ಡ್ (ಫ್ರೂಟ್ಸ್ ಐಡಿ)?ರಾಜ್ಯದ ರೈತರ ವಿವರಗಳನ್ನು ದಾಖಲಿಸಲು ಹಾಗೂ ರೈತರಿಗೆ ಸರ್ಕಾರಿ ಸೌಲಭ್ಯ ನೀಡುವುದಕ್ಕಾಗಿ ಸ್ವಾಭಿಮಾನಿ ರೈತ ಕಾರ್ಡ್ (ಎಫ್ಐಡಿ) ನೋಂದಣಿ ಆರಂಭಿಸಿದೆ. ಇದನ್ನೇ ಫ್ರೂಟ್ಸ್ ಐಡಿ ಎಂದು ಸಹ ಕರೆಯುವರು. ಫೂರ್ಟ್ಸ್ ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಸಿದ ನಂತರ ರೈತರಿಗೆ ಎಫ್ಐಡಿ ಸಂಖ್ಯೆ ನೀಡಲಾಗುವುದು. ಈ ಎಫ್ಐಡಿ ಸಂಖ್ಯೆಯಿಂದಲೇ ರೈತರು ಸರ್ಕಾರಿ ಸೌಲಭ್ಯ ಪಡೆಯುವರು

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿಗಾಗಿ ರೈತರ ಗುರುತು, ವಿಳಾಸ, ಭೂ ಹಿಡುವಳಿ, ಆಧಾರ್ ಸಂಖ್ಯೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ (ಆರ್.ಡಿ ಸಂಖ್ಯೆಯಿರುವ) , ಬ್ಯಾಂಕ್ ಅಕೌಂಟ್, ಫೋಟೋ ಸೇರಿದಂತೆ ಇನ್ನಿತರ ಮಾಹಿತಿಗಳನ್ನ ಭರ್ತಿ ಮಾಡಿದ ನಂತರ ಫ್ರೂಟ್ಸ್ ಐಡಿ ನೀಡಲಾಗುವುದು. ರೈತರು ಒಮ್ಮೆ ಮಾತ್ರ ನೋಂದಣಿ ಮಾಡಬೇಕು. ಪ್ರತಿ ನೋಂದಾಯಿತ ರೈತರಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ.

  • ಯಾವ ಯಾವ ಇಲಾಖೆಯಿಂದ ರೈತರು ಸೌಲಭ್ಯ ಪಡೆಯಬಹುದು?

ರೈತರು ಎಫ್ಐಡಿ ಸಂಖ್ಯೆಯೊಂದಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳಿಂದ ಸರ್ಕಾರಿ ಸೌಲಭ್ಯ ಪಡೆಯಬಹುದು.

  • ಎಫ್ಐಡಿ ಸಂಖ್ಯೆಯಿಂದ ರೈತರಿಗೆ ಯಾವ ಲಾಭ ಸಿಗಲಿದೆ?

ಸ್ವಾಭಿಮಾನಿ ರೈತ ಕಾರ್ಡ್ (ಎಫ್ಐಡಿ) ಇರುವ ರೈತರಿಗೆ ಬೆಳೆ ಸಾಲ, ಪಿಎಂ ಕಿಸಾನ್ ಸೌಲಭ್ಯ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಾಲ, ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಇನ್ನೀತರ ಸೌಲಭ್ಯ ಪಡೆಯಬಹುದು.

ಫ್ರೂಟ್ಸ್ ಐಡಿ ಪಡೆಯುವುದು ಹೇಗೆ?ರೈತರು ತಮ್ಮ ಮೊಬೈಲ್ ನಲ್ಲೇ ಫ್ರೂಟ್ಸ್ ಐಡಿ ಪಡೆಯಬೇಕಾದರೆ ಈ https://fruits.karnataka.gov.in/OnlineUserLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಐಡಿ ಪೇಜ್ ಓಪನ್ ಆಗುತ್ತದೆ. ಒಂದು ವೇಳೆ ನೀವು ಫ್ರೂಟ್ಸ್ ಐಡಿ ಕ್ರಿಯೇಟ್ ಮಾಡಿದ್ದರೆ ನಿಮ್ಮ ಮೊಬೈಲ್ ನಮಂಬರ್ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬಹುದು. ಒಂದು ವೇಳೆ ನೀವು ಆನ್ಲೈನ್ ನಲ್ಲಿ ಫ್ರೂಟ್ಸ್ ಐಡಿಗಾಗಿ ನೋಂದಣಿ ಮಾಡಬೇಕಾದರೆ citizen Registration ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಐಡಿಯ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಐ ಅಗ್ರಿ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬೈಲ್ ನಂಬರ್ ನಮೂದಿಸಬೇಕು.

ಈ ಮೇಲ್ ಐಡಿ ಇದ್ದರೆ ಯಸ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲದಿದ್ದರೆ ನೋ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಫ್ರೂಟ್ಸ್ ಐಡಿ ಕ್ರಿಯೇಟ್ ಮಾಡಿಕೊಳ್ಳಬಹುದು.

ಒಂದು ವೇಳೆ ಸ್ವತಃ ಮೊಬೈಲ್ ನಲ್ಲಿ ಫ್ರೂಟ್ಸ್ ಐಡಿ ನೋಂದಣಿ ಮಾಡಿಕೊಳ್ಳಲು ಆಗದಿದ್ದರೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದು. ಜಮೀನಿನ ಪಹಣಿ, ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಅಕೌಂಟ್ ದಾಖಲೆ ಪಡೆದು ನೋಂದಣಿ ಮಾಡಿಕೊಳ್ಳಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group