ಕೊಲೆಸ್ಟ್ರಾಲ್ ನಿಯಂತ್ರಕ್ಕೆ ಮನೆಮದ್ದು!

ಕೊಲೆಸ್ಟ್ರಾಲ್ ಎನ್ನುವುದು ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪದಾರ್ಥ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೆಟ್ಟ (ಬೇಡದ) ಕೊಲೆಸ್ಟ್ರಾಲ್ ಎಂದು ಎರಡು ಪ್ರಕಾರ ಇರುವುದನ್ನು ಕಾಣಬಹುದು.ದೇಹಕ್ಕೆ ಅಗತ್ಯವಿರುವ ಕೊಲೆಸ್ಟ್ರಾಲ್ ಹಾರ್ಮೋನ್‍ಗಳ ಉತ್ಪಾದನೆಗೆ, ಜೀರ್ಣಕ್ರಿಯೆಗೆ, ವಿಟಮಿನ್-ಡಿಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ದೇಹಕ್ಕೆ ಬೇಡದ ಕೊಲೆಸ್ಟ್ರಾಲ್ ಅನಗತ್ಯವಾದ ಕೊಬ್ಬಿನಂಶವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತಸಂಚಾರಕ್ಕೆ ಅಡ್ಡಿಯನ್ನುಂಟುಮಾಡುವುದು. ನಾವು ಸೇವಿಸುವ ಆಹಾರವು ದೇಹಕ್ಕೆ ಅಗತ್ಯವಿರುವ ಪೂರಕ ಮತ್ತು ಮಾರಕವಾದ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವುದು. ಹಾಗಾಗಿ ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚು ಗಮನವಹಿಸಬೇಕು.
#ನಿಂಬೆ ಮತ್ತು ಶುಂಠಿ ಚಹಾ: ಈ ಎರಡೂ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನೀವು ಪ್ರತಿದಿನ ನಿಂಬೆ ಮತ್ತು ಶುಂಠಿ ಕಪ್ಪು ಚಹಾವನ್ನು ತೆಗೆದುಕೊಳ್ಳಬಹುದು. ಇದರೊಂದಿಗೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು ಮಾತ್ರವಲ್ಲದೆ, ಇತರ ಅನೇಕ ಸಮಸ್ಯೆಗಳು ಸಹ ಹೊರಬರುತ್ತವೆ
#ಪಪ್ಪಾಯ:ಈ ಹಣ್ಣಿನಲ್ಲಿ ಜೀವಸತ್ವಗಳು ಮತ್ತು ಇತರ ಪೋಷಕಾಂಶ ಗುಣ ಜೊತೆಗೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಮತ್ತು ಚರ್ಮವು ಹೊಳೆಯುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಇದರಲ್ಲಿ ನಾರಿನಂಶ ಹೆಚ್ಚಿದ್ದು, ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದರ ಹೊರತಾಗಿ, ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಪಪ್ಪಾಯಿಯನ್ನು ಸೇರಿಸಿದರೆ, ಅದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
#ಹೆಸರು ಕಾಳು:ಹೆಸರು ಕಾಳು ದೇಹದ ತೂಕ ಇಳಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರ ಪದಾರ್ಥಗಳಲ್ಲಿ ಒಂದು. ಪ್ರೋಟೀನ್‍ನ್ನು ಸಮೃದ್ಧವಾಗಿ ಹೊಂದಿರುವ ಈ ಹೆಸರು ಕಾಳನ್ನು ಸಾರು, ಪಲ್ಯ, ಕೋಸಂಬರಿ ಅಥವಾ ಬೇಯಿಸಿದ ನೀರಿನ ರೂಪದಲ್ಲೂ ಸಹ ಸೇವಿಸಬಹುದು. ಇದರ ಸೇವನೆಯು ತೂಕ ನಷ್ಟ ಮಾಡುವಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುವುದು
#ಶುಂಠಿ ಮತ್ತು ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಶುಂಠಿ ಕಷಾಯದಲ್ಲಿಯೂ ಬಳಸಬಹುದು. ಶುಂಠಿಯಂತೆ ಬೆಳ್ಳುಳ್ಳಿ ಕೂಡ ಕೊಲೆಸ್ಟ್ರಾಲ್ನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಬೆಳ್ಳುಳ್ಳಿ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.
#ಬಾದಾಮಿ:ಬಾದಾಮಿಯು ಅಧಿಕ ಪ್ರಮಾಣದ ಜೀವಸತ್ವ, ಪ್ರೋಟೀನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿದೆ. ಬಾದಾಮಿಯಲ್ಲಿ ಸುಮಾರು 21 ಗ್ರಾಂ.ಗಳಷ್ಟು ಪ್ರೋಟೀನ್‍ಗಳನ್ನು ಒಳಗೊಂಡಿದೆ ಎಂದು ಹೇಳಬಹುದು. ಒಮ್ಮೆ ಇದರ ನಿಯಮಿತ ಸೇವನೆ ಮಾಡಲು ಪ್ರಾರಂಭಿಸಿದರೆ ತೂಕವ ನಷ್ಟವಾಗುವುದು.
#ಕೊಲೆಸ್ಟ್ರಾಲ್ ನಿಯಂತ್ರಣಲ್ಲಿಡಬಹುದು:ಪ್ರತಿ ದಿನ ಆಗ್ಗಾಗ್ಗೆ ನೀವು ಬಿಸಿ ನೀರು ಕುಡಿದರೆ ಹೊಟ್ಟೆಯಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಬಿಸಿ ನೀರು ಕುಡಿಯುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳಿವೆ. 2 ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು. ಈ ಅಭ್ಯಾಸವು ನಿಮ್ಮ ತೂಕವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಈ ಅಭ್ಯಾಸದ ಜೊತೆಗೆ ನೀವು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು, ಡೈರಿ ಉತ್ಪನ್ನಗಳು, ಮಾಂಸ ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವ ಇನ್ನಿತರ ಆಹಾರಗಳಿಂದ ದೂರ ಇರಬೇಕು. ದಿನಕ್ಕೆ ಕನಿಷ್ಠ 20-30 ನಿಮಿಷ ವ್ಯಾಯಾಮ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ.
#ಜೇನುತುಪ್ಪದಿಂದಲೂ ಕಡಿಮೆ ಆಗುತ್ತೆ ಕೊಲೆಸ್ಟ್ರಾಲ್: ಜೇನುತುಪ್ಪವು ಅಧಿಕ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಣದಲ್ಲಿಡುತ್ತದೆ. ನೀವು ಇದನ್ನು ಸೇವಿಸಿದರೆ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವ ಜನರು ಜೇನುತುಪ್ಪವನ್ನು ಸೇವಿಸುವುದರಿಂದ ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ.
#ಹೃದಯಕ್ಕೆ ಆರೋಗ್ಯಕಾರಿಯಾದ ಆಹಾರ:ಪೂರ್ತಿ ಆರ್ದ್ರವಾಗಿರುವ ನಾರಿನಾಂಶದ ಸೇವನೆ ಕಡಿಮೆ ಮಾಡಿ ಮತ್ತು ಆಹಾರದ ನಾರಿನಾಂಶವನ್ನು ಸೇರಿಸಿಕೊಳ್ಳಿ. ಹಣ್ಣುಗಳು ಮತ್ತು ಲೀನ್ ಪ್ರೋಟೀನ್, ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು ನಿಮ್ಮ ಆಹಾರ ಕ್ರಮದಲ್ಲಿ ಇರಲಿ. ಇದರ ಜತೆಗೆ ಸಂಸ್ಕರಿತ ಸಕ್ಕೆ, ಸಂಸ್ಕರಿತ ಆಹಾರ ಮತ್ತು ಕರಿದ ಆಹಾರ ಕಡಿಮೆ ಮಾಡಿ. ಹೃದಯಕ್ಕೆ ಮೆಡಿಟೇರಿಯನ್ ಆಹಾರವು ಒಳ್ಳೆಯದು