ವಿಜಯಪುರದಲ್ಲಿ ನಡೆಯಲಿದೆ ನಾಳೆಯಿಂದ ಕೃಷಿ ಮೇಳ:

ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬಾಗಲಕೋಟೆ ಹಾಗೂ ಕೃಷಿ ಮಹಾವಿದ್ಯಾಲಯ ವಿಜಯಪುರ ಕರ್ನಾಟಕ ರಾಜ್ಯನಿಂಬೆ ಅಭಿವೃದ್ಧಿ ಮಂಡಳಿ ಹಾಗೂ ಕೃಷಿ ಪರಿಕರ ಮಾರಾಟಗಾರರ ಸಂಘ ವಿಜಯಪುರ, ಕೃಷಿ ಇಲಾಖೆ ವಿಜಯಪುರ ಇವರ ಸಹಕಾರದಿಂದ ಯು ಎಸ್ ಕಮ್ಯುನಿಕೇಶನ್ ಅರ್ಪಿಸುವ ಕೃಷಿ ಮೇಳ ವಿಜಯಪುರದಲ್ಲಿ ಹಂಬಿಕೊಳ್ಳಲಾಗಿದೆ.
ಕಳೆದ ವರ್ಷ ಕೊರೋನ ಇರುವ ಕಾರಣದಿಂದ ಕೃಷಿ ಮೇಳ ಆಯೋಜಿಸಲಾಗಿಲ್ಲ.ಹೌದು. ಬರದ ನಾಡು ಎಂದೇ ಹೆಸರಾಗಿರುವವ ವಿಜಯಪುರದಲ್ಲಿ 3 ದಿನಗಳ ಕೃಷಿ ಮೇಳವನ್ನು ನಡೆಸಲಾಗುತ್ತಿದೆ.
ವಿಜಯಪುರ ನಗರದ ಹೊರ ವಲಯದಲ್ಲಿರುವ ದರ್ಬಾರ್ ಹೈ ಸ್ಕೂಲ್ ಮೈದಾನ ವಿಜಯಪುರ ದಲ್ಲಿ ಮೂರು ದಿನಗಳ ಕೃಷಿ ಮೇಳ ಆರಂಭವಾಗುತ್ತದೆ.
ರೈತರ ಆದಾಯವನ್ನು ಹೆಚ್ಚಿಸಲು ಕೃಷಿ ತಾಂತ್ರಿಕತೆಗಳು” ಎಂಬ ವಿಷಯಾಧಾರಿತವಾಗಿ ಈ ಬಾರಿಯ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದ್ದು, ಈ ಕುರಿತಂತೆ ಸಾಕಷ್ಟು ಜೊತೆ ಜೊತೆಗೆ ನಿರಾವರಿಗಾಗಿ ವಿನ್ಯಾಸಿಸಲಾದ ಹೊಸ ತಂತ್ರಜ್ಞಾನ ಹಾಗೂ ವಸ್ತುಗಳು, ಕೃಷಿ ಯಂತ್ರೋಪಕರಣಗಳು.
ಹಾಗೂ ಇನ್ನಿತರ ಕೃಷಿ ಸಂಬಂಧಿತ ವಸ್ತುಗಳನ್ನು ರೈತರಿಗೆ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9480424603 / 9986814680
ಕೃಷಿ ಮೇಳ ನಡೆಯುವ ದಿನಾಂಕ:2,3,5 ಸಪ್ಟೆಂಬರ್ 2022 (ಶುಕ್ರವಾರ,ಶನಿವಾರ,ಸೋಮವಾರ)
ಕೃಷಿ ಮೇಳ ನಡೆಯುವ ಸ್ಥಳ:ದರ್ಬಾರ ಹೈಸ್ಕೂಲ್ ಮೈದಾನ, ವಿಜಯಪುರ.