ಗೋಡಂಬಿ ಸೇವನೆಯ ಲಾಭಗಳು..!

ವಾಸ್ತವವಾಗಿ ಗೋಡಂಬಿ ನಮ್ಮ ದೇಶದ್ದಲ್ಲ, ದೂರದ ಬ್ರೆಜಿಲ್ ದೇಶದಿಂದ ಹದಿನಾರನೇ ಶತಮಾನದಲ್ಲಿ ಬಂದ ಪೋರ್ಚುಗೀಸರ ಮೂಲಕ ಬಂದಿದೆ. ಅದರೆ ಬಳಿಕ ಭಾರತದಾದ್ಯಂತ ಗೇರು ಕೃಷಿ ಒಂದು ಲಾಭಕರ ಉದ್ದಿಮೆಯಾಗಿದೆ ನಮ್ಮ ಕರಾವಳಿಯಲ್ಲಂತೂ ತಾಲ್ಲೂಕಿಗೆ ಎರಡಾದರೂ ಗೇರುಬೀಜದ ಕಾರ್ಖಾನೆಗಳಿವೆ. ಇದರ ನುರಿತ ಕೆಲಸಗಾರರು ಗೋಡಂಬಿಯನ್ನು ಅತ್ಯಂತ ಸೂಕ್ಷ್ಮವಾಗಿ ವಿಂಗಡಿಸುವುದನ್ನು, ಹರಿತವಾದ ಚಾಕುವಿನಿಂದ ಬೀಜದ ಹೊರಕವಚವನ್ನು ನಿವಾರಿಸುವುದನ್ನು ನೋಡುವುದೇ ಒಂದು ಚೆಂದ. ಬನ್ನಿ ಗೋಡಂಬಿ ಬೀಜದ ಪ್ರಯೋಜನಗಳೇನು ಎಂಬುದನ್ನು ನೋಡೋಣ.
#ತಲೆನೋವು: ಗೋಡಂಬಿ ತಿನ್ನುವುದರಿಂದ ಇನ್ನು ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಗೋಡಂಬಿಯಲ್ಲಿರುವ ಅಮೈನೊ ಆಮ್ಲಗಳಾದ ಟೈರಮೈನ್ ಮತ್ತು ಫಿನೈಲೆಥೈಲಮೈನ್ ಅಂಶವು ತಲೆನೋವುವಿಗೆ ಕಾರಣವಾಗಿರುತ್ತದೆ.
#ಗೋಡಂಬಿಯಲ್ಲಿ ಕಾಪರ್ ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚಿರುವುದರಿಂದ ಚರ್ಮದ ಕಾಂತಿ ಹೊಳೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ, ಈ ಆ್ಯಂಟಿ ಆಕ್ಸಿಡೆಂಟ್ಸ್ ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ
#ಇದು ಸಮೃದ್ಧವಾದ ಕ್ಯಾಲೋರಿಯನ್ನು ಮತ್ತು ನಾರಿನಂಶಗಳನ್ನು ಒಳಗೊಂಡಿದೆ. ಈ ಎರಡು ಅದ್ಭುತ ಗುಣಗಳು ತೂಕ ಇಳಿಸಲು ಯೋಜನೆ ಹೊಂದಿದವರಿಗೆ ಸಹಾಯ ಆಗುವುದು. ಬೆರಳೆಣಿಕೆಯ ಗೋಡಂಬಿಗಳನ್ನು ಸವಿದರೆ ಸಾಕಷ್ಟು ಸಮಯಗಳ ಕಾಲ ಹಸಿವನ್ನು ಹಿಡಿದಿಡುವುದು. ಜೊತೆಗೆ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ಸಹ ನೀಡುವುದು. ರುಚಿಕರವಾದ ಈ ಬೀಜವನ್ನು ಮಿತವಾಗಿ ಸೇವಿಸಬೇಕು. ಆಗ ಆರೋಗ್ಯಕರವಾದ ಫಲಿತಾಂಶವನ್ನು ಸುಲಭವಾಗಿ ಪಡೆಯಬಹುದು.
#ಕ್ಯಾನ್ಸರ್ ರೋಗ ಬಾರದಂತೆ ತಡೆಹಿಡಿಯುತ್ತದೆ:ಉತ್ಕರ್ಷಣ ನಿರೋಧಕ ಶಕ್ತಿಯು ಗೋಡಂಬಿಯಲ್ಲಿ ಹೆಚ್ಚಾಗಿ ಇದೆ. ಇದರಿಂದ ಕ್ಯಾನ್ಸರ್ನಂತಹ ಕಾಯಿಲೆಗಳು ಬಾರದಂತೆ ತಡೆಹಿಡಿಯಬಹುದು. ವಿಟಮಿನ್ ಇ ಅಂಶ ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ. ಮಹಿಳೆಯರು ನಿಯಮಿತವಾಗಿ ಗೋಡಂಬಿ ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
#ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ:ಗೋಡಂಬಿಯಲ್ಲಿ ಒಮೆಗಾ 3 ಅಂಶವಿರುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇನ್ನು, ಹಸಿವಾದಾಗ ಬೊಗಸೆಯಷ್ಟು ಗೋಡಂಬಿ ತಿಂದರೆಅದರಿಂದ ಹೆಚ್ಚು ಕಾಲ ಹೊಟ್ಟೆ ತುಂಬುವಂತೆಯೂ ನೋಡಿಕೊಳ್ಳುತ್ತದೆ.
#ಗಟ್ಟಿಮುಟ್ಟಾದ ಮೂಳೆಗಳಿಗಾಗಿ: ಗೋಡಂಬಿ ಬೀಜಗಳಲ್ಲಿ ಮೆಗ್ನೀಷಿಯಂ ಅಧಿಕ ಪ್ರಮಾಣದಲ್ಲಿದ್ದು, ಇದು ಗಟ್ಟಿಮುಟ್ಟಾದ ಮೂಳೆಗಳಿಗಾಗಿ ಮತ್ತು ಮಾ೦ಸಖ೦ಡಗಳ ಹಾಗೂ ನರವ್ಯೂಹದ ಸರಿಯಾದ ಕಾರ್ಯನಿರ್ವಹಣೆಗಾಗಿ ಅತ್ಯಾವಶ್ಯಕವಾಗಿದೆ. ದಿನವೊ೦ದಕ್ಕೆ ಸುಮಾರು ಮುನ್ನೂರರಿಂದ ಏಳುನೂರಾ ಐವತ್ತು ಮಿಲಿಗ್ರಾ೦ಗಳಷ್ಟು ಮೆಗ್ನೀಷಿಯ೦ನ ಸೇವನೆಯು ನಮ್ಮ ಶರೀರದ ಸ್ವಾಸ್ಥ್ಯಕ್ಕಾಗಿ ಅತ್ಯಾವಶ್ಯಕವಾಗಿದೆ. ಏಕೆಂದರೆ ಮೆಗ್ನೀಷಿಯಂ ನಮ್ಮ ಶರೀರದ ಮೂಳೆಗಳಿಂದ ಹೀರಲ್ಪಡುವ ಕ್ಯಾಲ್ಸಿಯಂನ ಪ್ರಮಾಣವನ್ನು ನಿಯಮಿತಗೊಳಿಸುವ ನಿಟ್ಟಿನಲ್ಲಿ ನೆರವಾಗುತ್ತದೆ.