ಹೈ ಬಿಪಿ ಸಮಸ್ಯೆಗೆ ಮನೆಮದ್ದು!

ನೀವು ಒಂದು ವೇಳೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಸಾಮಾನ್ಯವಾಗಿ ಅದರಿಂದ ಹೊರಬರಲು ಸದಾ ಮಾತ್ರೆ ನುಂಗುತ್ತಿರುತ್ತೀರಿ ಮತ್ತು ನಿಮ್ಮ ಸಂಪೂರ್ಣ ದೇಹವನ್ನ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತ ಇನ್ನೆಷ್ಟು ಘಾಸಿಗೊಂಡಿದೆ ಎಂದು ತಿಳಿಯುತ್ತೀರಿ ಅಷ್ಟೆ. ಆದರೆ ಇವೆಲ್ಲವುಕ್ಕಿಂತಲ್ಲು ಪರಿಣಾಮಾಕಾರಿಯಾದ ಮತ್ತು ಆರೋಗ್ಯಕರವಾದ ದಾರಿಗಳು ಈ ಸಮಸ್ಯೆಯಿಂದ ಹೊರಬರಲು ಇವೆ.

#ಕಡಿಮೆ ರಕ್ತದೊತ್ತಡ ಉಂಟಾದಾಗ ಒಂದು ಲೋಟ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಕುಡಿಯಬೇಕು. ಅಲ್ಲದೇ ಒಂದು ಲೋಟ ನೀರಿಗೆ ಅರ್ಧ ಚಮಚ ಸಕ್ಕರೆ ಹಾಕಿಯೂ ಕುಡಿಯಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಕಿಯೂ ಸೇವಿಸಬಹುದು.

#ರಕ್ತದೊತ್ತಡ ಕಡಿಮೆ ಮಾಡಬೇಕೆಂದರೆ ವೈದ್ಯರು ಮೊದಲು ಹೇಳುವುದೇ ತೂಕ ಇಳಿಸಿ ಎಂದು. ತೂಕ ಹೆಚ್ಚಾದಷ್ಟೂ ಬಿಪಿ ಹೆಚ್ಚುವ ಸಾಧ್ಯತೆಗಳು ಜಾಸ್ತಿ. ಹಾಗಂತ ತೂಕ ಹೆಚ್ಚಾದೊಡನೆ ಬಿಪಿ ಹೆಚ್ಚುತ್ತದೆ, ತೂಕ ಇಳಿದೊಡನೆ ಬಿಪಿ ಇಳಿಯುತ್ತದೆ ಎಂದು ಆಗಲ್ಲ ಹೀಗಾಗಿ, ತೂಕ ಇಳಿಸುವುದೊಂದೇ ಗುರಿ ಮಾಡಿಕೊಳ್ಳುವ ಬದಲು ಆರೋಗ್ಯಕರ ಆಹಾರ ತಿನ್ನುವುದರತ್ತ ಗಮನ ಹರಿಸುವುದು ಒಳ್ಳೆಯದು.ಲೋ ಬಿಪಿ ಇದ್ದವರು ಊಟ, ತಿಂಡಿಯಲ್ಲಿ ಸ್ವಲ್ಪ ಉಪ್ಪಿನಂಶ ಹೆಚ್ಚು ಇದ್ದರೆ ಒಳ್ಳೆಯದು ಕೂಡ. ಮೇಲುಪ್ಪು ಹಾಕಿಕೊಳ್ಳಬಹುದು. ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಚೆನ್ನಾಗಿ ನಿದ್ರೆಯನ್ನು ಮಾಡಬೇಕು

#ನೀರಿನಂಶ ಹೆಚ್ಚಿರುವ ನಿಂಬೆ, ಮೂಸಂಬಿ, ಕಿತ್ತಲೆ ಹಣ್ಣಿನ ಜೂಸ್ ಮತ್ತು ಎಳನೀರನ್ನು ತೆಗೆದುಕೊಳ್ಳಬೇಕು. ದೇಹದಲ್ಲಿ ನಿರ್ಜಲೀಕರಣ ಆಗುವುದರಿಂದ ನೀರಿನಂಶ ಹೆಚ್ಚಿಸುವ ಶರಬತ್ತುಗಳನ್ನು ಸೇವಿಸಬೇಕು. ನೀರನ್ನು ಆದಷ್ಟು ಸ್ವಲ್ಪ ಹೆಚ್ಚು 3-4 ಲೀಟರ್ ಪ್ರತಿದಿನ ಕುಡಿಯಬೇಕು.

#ಜೇನುತುಪ್ಪ ಹಾಗೂ ಆಪಲ್ ಸೈಡರ್ ವಿನೆಗರ್: ತುಪ್ಪದ ಪ್ರಯೋಜನಗಳ ಬಗ್ಗೆ ಹೇಳಬೇಕಾಗಿಲ್ಲ! ಒಂದು ಸಣ್ಣ ಬೌಲ್ ನಲ್ಲಿ ಒಂದು ಚಮಚ ಆಗುವಷ್ಟು ಜೇನುತುಪ್ಪ ತಗೊಂಡು, ಅದಕ್ಕೆ ಒಂದು ಚಮಚ ಆಗುವಷ್ಟು ಆಪಲ್ ಸೈಡರ್ ವಿನೆಗರ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ..ಇನ್ನು ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೊಂಡು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಹಾಕೊಂಡು ಮಿಕ್ಸ್ ಮಾಡಿಕೊಳ್ಳಿ.ಆಮೇಲೆ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವನೆ ಮಾಡಬೇಕು. ಹೀಗೆ ಪ್ರತಿದಿನ ಅನುಸರಿಸುವುದರಿಂದ, ರಕ್ತದ ಸಂಚಾರದಲ್ಲಿ ಏರುಪೇರಾಗುವುದು ನಿಯಂತ್ರಣಕ್ಕೆ ಬರುವುದರ ಜೊತೆಗೆ ರಕ್ತನಾಳಗಳಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕೂಡ ಕಡಿಮೆ ಆಗುತ್ತಾ ಹೋಗುತ್ತದೆ. ಅಲ್ಲದೇ ದೇಹಕ್ಕೆ ಸರಿಯಾಗಿ ರಕ್ತದ ಸಂಚಾರ ಪೂರೈಕೆಯಾಗುವಂತೆ ಮಾಡಿ, ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.. ಇದರಿಂದಾಗಿ ಹೃದಯದ ಆರೋಗ್ಯ ಕೂಡ ವೃದ್ಧಿ ಆಗುತ್ತಾ ಹೋಗುತ್ತದೆ.

#ಡಯಟ್ ಅನ್ನು ಸರಿಯಾಗಿಡಿ – ಇದಲ್ಲದೆ ನೀವು ನಿಮ್ಮ ಆಹಾರವನ್ನು ಕೂಡ ಸರಿಯಾಗಿಡಬೇಕು. ಇದರಿಂದ ಕೂಡ ನಿಮ್ಮ ಬಿಪಿ ನಿಯಂತ್ರಣದಲ್ಲಿರುತ್ತದೆ. ನಿಮ್ಮ ಡಯಟ್ ನಿಂದ ಹೈ ಸೋಡಿಯಂ ಇರುವ ಆಹಾರಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ಇದರ ಜೊತೆಗೆ ಊಟದಲ್ಲಿ ಅಧಿಕ ತರಕಾರಿ ಸೇವನೆ ಮಾಡಿ.

#ಒತ್ತಡಗಳ ನಿಗ್ರಹಿಸುವಿಕೆ:ರಕ್ತದೊತ್ತಡಕ್ಕೆ ಪ್ರಮುಖ ಕಾರಣ ಒತ್ತಡ ಅಲ್ಲದಿದ್ದರೂ, ಇವುಗಳು ರಕ್ತದೊತ್ತಡವನ್ನು ತೀರ ಅತಿರೇಕಕ್ಕೆ ಕೊಂಡೊಯ್ಯಬಲ್ಲವು. ವಿಶೇಷವಾಗಿ, ಆ ವ್ಯಕ್ತಿಗಳು ಕೆಲಸದ ಒತ್ತಡ, ಬದುಕಿನ ನಾನಾ ತೊಂದರೆಗಳು, ಕೋಪ ತರಿಸುವಂತಹ ವಿಚಾರಗಳು ಇತ್ಯಾದಿಗಳಿಂದ ಬಳಲುತ್ತಿದ್ದರೆ. ಯೋಗ, ಆಕ್ಯುಪಂಕ್ಚರ್ ಮತ್ತು ಇನ್ನಿತರ ಸಮಾಧಾನಗೊಳ್ಳುವ ವಿಧಾನಗಳನ್ನ ಅಭ್ಯಾಸ ಮಾಡುವುದು ಒತ್ತಡಗಳಿಂದ ಹೊರಬರಲು ಅತ್ತ್ಯುತ್ತಮ ವಿಧಾನಗಳಾಗಿವೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group