ಆಗಾಗ ತಲೆ ತಿರುಗುವಿಕೆಗೆ ಕೆಲವು ಮನೆಮದ್ದು;

ತಲೆ ತಿರುಗುವುದು, ತೂರಾಡುವುದು ಮತ್ತು ಪ್ರಜ್ಞಾ ಶೂನ್ಯತೆಗಳಾಗಿರುತ್ತವೆ. ರಕ್ತದೊತ್ತಡವು ಕಡಿಮೆಯಾಗುವುದು ತಲೆ ತಿರುಗುವುದು ಮತ್ತು ಮೂರ್ಚೆ ಹೋಗುವುದಕ್ಕೆ ಇದು ಸಾಮಾನ್ಯವಾಗಿ ಊಟ ತಿಂದ ತಕ್ಷಣ ಬೇಗ ಸರಿ ಹೋಗುತ್ತದೆ. ಭಾರ ಎತ್ತುವಿಕೆ ಮತ್ತು ಆಯಾಸವನ್ನುಂಟು ಮಾಡುವ ಕೆಲಸಗಳು ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ತಲೆ ನೋವಿಗೆ ತಕ್ಷಣದ ಪರಿಹಾರ ಎಲ್ಲಿದೆ?ಆಂಟಿಬಯೋಟಿಕ್‌ಗಳು ಸಹ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಯಾವುದೇ ಔಷಧವನ್ನು ತೆಗೆದುಕೊಳ್ಳುವ ಮೊದಲು ಅದರ ಅಡ್ಡ ಪರಿಣಾಮಗಳ ಕುರಿತು ಸಹ ತಿಳಿದುಕೊಳ್ಳುವುದು ಒಳ್ಳೆಯದು. ಅನಿಮಿಯಾ ಎಂಬುದು ರಕ್ತ ಹೀನತೆಯ ಗಂಭೀರ ಸಮಸ್ಯೆಯಾಗಿರುತ್ತದೆ. ಇದು ಪೋಷಕಾಂಶಗಳ ಕೊರತೆಯಿಂದ ಕಂಡು ಬರುವ ಸಮಸ್ಯೆಯಾಗಿರುತ್ತದೆ. ಈ ಸಮಸ್ಸೆಯಲ್ಲಿ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆ ಇರುತ್ತವೆ ಮತ್ತು ಇವು ದೇಹದ ಸಮತೋಲನವನ್ನು ತಪ್ಪಿಸುತ್ತವೆ ಇಂತಹ ಸಮಸ್ಯೆಗಳಿಗೆ ಕೆಲವು ಮನೆ ಮದ್ದುಗಳು.
ಲೆಮೆನ್ ಬಾಮ್: ಲೆಮನ್ ಬಾಮ್ನಲ್ಲಿರುವ ಆ್ಯಂಟಿ ವೈರಲ್ ಅಂಶಗಳು ಮಾನಸಿಕ ಖಿನ್ನತೆ, ಮಾನಸಿಕ ಆತಂಕ, ಅಧಿಕ ರಕ್ತದ ಒತ್ತಡ, ಮೈಗ್ರೇನ್, ಇನ್ಸೋಮ್ನಿಯಾ, ದೌರ್ಬಲ್ಯ, ವರ್ಟಿಗೊ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿ ಎನ್ನಲಾಗುತ್ತದೆ. ಅಲ್ಲದೇ ನಿಂಬೆಯ ನೀರನ್ನು ಸೇವನೆ ಮಾಡುವುದು ಸಹ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ ಎನ್ನಲಾಗುತ್ತದೆ. ಹಾಗಾಗಿ ವರ್ಟಿಗೋ ಸಮಸ್ಯೆಯನ್ನು ಅನುಭವಿಸುತ್ತಿರುವವರು ಪ್ರತಿದಿನ ನಿಂಬೆಯ ನೀರನ್ನು ಸೇವನೆ ಮಾಡುವುದು ಉತ್ತಮ.
#ಯಾವುದೇ ಕ್ಷಣದಲ್ಲಿ ನಿಮಗೆ ಇದ್ದಕ್ಕಿದ್ದಂತೆ ನೀವು ನಿಂತಿರುವ ಸ್ಥಳ ಸುತ್ತಿದಂತಹ ಅನುಭವ ಉಂಟಾದರೆ, ತಕ್ಷಣವೇ ನೀರು ಕುಡಿಯಿರಿ. ಒಂದು ವೇಳೆ ನಿಮಗೆ ಕಿತ್ತಳೆ ಹಣ್ಣಿನ ಜೂಸ್ ಅಥವಾ ಎಳನೀರು ಲಭ್ಯವಿದ್ದರೆ ಅದನ್ನು ಸೇವಿಸಿ.ಏಕೆಂದರೆ ಕೆಲವೊಮ್ಮೆ ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಆಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಳನೀರು ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಗಳ ಸಮತೋಲನ ಉಂಟಾಗಿ ಮತ್ತೊಮ್ಮೆ ನಿಮ್ಮ ಆರೋಗ್ಯ ಸಹಜ ಸ್ಥಿತಿಗೆ ಬರುತ್ತದೆ.ನೀರು ಆರೋಗ್ಯಕರವಾದ ಯಾವುದೇ ಪಾನಿಯವನ್ನು ಸೇವಿಸಿದ ಬಳಿಕ ಆ ಕ್ಷಣವೇ ಎದ್ದು ಹೋಗಲು ಪ್ರಯತ್ನಿಸಬೇಡಿ. ಒಂದು ಕಡೆ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ತೆಗೆದುಕೊಳ್ಳಿ.
#ಹೆಚ್ಚು ನೀರು ಕುಡಿಯಿರಿ:ಕೆಲವೊಮ್ಮೆ ವರ್ಟಿಗೋ ನಿರ್ಜಲೀಕರಣದಿಂದ ಉಂಟಾಗುತ್ತದೆ. ಇದು ನೀವು ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿದರೆ ಸಹಾಯ ಮಾಡಬಹುದು. ಆದರೆ ಹೈಡ್ರೇಟೆಡ್ ಆಗಿ ಉಳಿಯಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ನಿಮ್ಮ ನೀರಿನ ಸೇವನೆಯನ್ನು ಮಾಡಿ. ನೀವು ಎಷ್ಟು ನೀರು ಕುಡಿಯುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ತಲೆ ತಿರುಗುವಿಕೆ ಕಡಿಮೆಯಾಗುತ್ತದೆ
#ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಮಾಡಿ: ನಿದ್ರೆ ಕಡಿಮೆ ಆದಲ್ಲಿ ತಲೆತಿರುಗುವುದು ಹೆಚ್ಚಾಗುತ್ತದೆ. ನೀವು ಮೊದಲ ಬಾರಿಗೆ ವರ್ಟಿಗೋ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಅದು ಒತ್ತಡ ಅಥವಾ ನಿದ್ರೆಯ ಕೊರತೆಯ ಪರಿಣಾಮವಾಗಿರಬಹುದು. ಹಾಗಾಗಿ ಸರಿಯಾಗಿ ನಿದ್ರೆ ಮಾಡುವುದು ಬಹಳ ಮುಖ್ಯವಾಗುತ್ತದೆ.