ಬೀಟ್ರೂಟ್ ನ ಸೇವನೆಯಿಂದ ಆರೋಗ್ಯ ಸಂಬಂಧಿ ಪ್ರಯೋಜನಗಳು!

ಬೀಟ್ರೂಟ್ ನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಈ ತರಕಾರಿಯನ್ನು ಆಹಾರದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಬೀಟ್‌ರೂಟ್‌ನಲ್ಲಿ ಅಧಿಕ ಕಾರ್ಬೋಹೈಡ್ರೇಟ್‌ ಮಟ್ಟವಿರಬಹುದು ಹಾಗೂ ತರಕಾರಿಗಳಲ್ಲೇ ಅತಿ ಹೆಚ್ಚು ಸಕ್ಕರೆ ಅಂಶವಿದೆ

ಕೆಲವು ಅರೋಗ್ಯ ಪ್ರಯೋಜನಗಳು ಈ ಕೆಳಗೆ ನೀಡಲಾಗಿದೆ

# ಹೃದಯದ ಆರೋಗ್ಯವನ್ನು ವೃದ್ಧಿಸಬಹುದು:ಬೀಟ್ರೂಟ್ ರಸದ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದ ನೈಟ್ರೇಟುಗಳು ದೊರಕುತ್ತವೆ. ಈ ನೈಟ್ರೇಟುಗಳು ರಕ್ತನಾಳಗಳನ್ನು ಸಡಿಲಿಸಿ ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತವೆ. ಇದರಿಂದ ಹೃದಯದ ಮೇಲಿನ ಭಾರ ಇಳಿದು ಆರೋಗ್ಯ ಉತ್ತಮಗೊಳ್ಳುತ್ತದೆ.

ಗಮನಿಸಿ: ಅತಿಯಾದ ಬೀಟ್ರೂಟ್ ರಸದ ಸೇವನೆಯಿಂದ ನಮ್ಮ ದೇಹದ ಅನೈಚ್ಛಿಕ ಕಾರ್ಯಗಳನ್ನು ನಿರ್ವಹಿಸುವ ನರವ್ಯವಸ್ಥೆ (sympathetic nervous system) ಅಗತ್ಯಕ್ಕೂ ಹೆಚ್ಚು ಪ್ರಚೋದನೆಗೊಳ್ಳದಂತೆ ತಡೆಯುತ್ತದೆ. ಅತಿ ಪ್ರಚೋದನೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಹಾಗೂ ನಿದ್ದೆಯಲ್ಲಿ ಹೃದಯಾಘಾತವಾಗುವ ಸಂಭವವನ್ನು ಹೆಚ್ಚಿಸುತ್ತದೆ. ಒಂದು ಸಂಶೋಧನೆಯಲ್ಲಿ ಕೆಲವು ವ್ಯಕ್ತಿಗಳಿಗೆ ಸತತವಾಗಿ ಬೀಟ್ರೂಟ್ ರಸವನ್ನು ಸೇವಿಸಲು ನೀಡಲಾಯಿತು. ಇವರ ಅಧಿಕ ರಕ್ತದೊತ್ತಡ ಕೇವಲ ಮೂವತ್ತು ನಿಮಿಷಗಳಲ್ಲಿಯೇ ಕಡಿಮೆಯಾಗಿತ್ತು. ಆದರೆ ಮುಂದಿನ ಇಪ್ಪತನಾಲ್ಕು ಘಂಟೆಗಳಲ್ಲಿ ಮೊದಲಿನ ಒತ್ತಡವನ್ನು ಪಡೆದಿತ್ತು.

#ಪ್ರತಿದಿನ ಬೀಟ್​ ರೂಟ್ ಸೇವನೆಯಿಂದ ರಕ್ತಹೀನತೆಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಾಣಬಹುದು.

#ಕೂದಲಿಗೆ ಕಾಂತಿ ನೀಡುವುದು:ಬೀಟ್ರೂಟ್ ಜ್ಯೂಸ್ ಕೂದಲಿನ ಕಾಂತಿ ಮತ್ತು ಹೊಳಪವನ್ನು ಕಾಪಾಡಿಕೊಂಡು ಸಂಪೂರ್ಣ ಆರೋಗ್ಯ ಕಾಪಾಡುವುದು. ನೈಸರ್ಗಿಕವಾಗಿ ಸೌಂದರ್ಯ ಪಡೆಯಲು ನೀವು ಕೂದಲಿಗೆ ಕೂಡ ಬೀಟ್ ರೂಟ್ ಬಳಸಬಹುದು. ಬೀಟ್ ರೂಟ್ ಕೂದಲಿನ ಗುಣಮಟ್ಟವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳುವುದು

#ಬೀಟ್​ ರೂಟ್​ನಲ್ಲಿ ಫೈಬರ್ ಅಂಶವೂ ಹೇರಳವಾಗಿರುವುದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು. ಅಲ್ಲದೆ, ಮಲಬದ್ಧತೆ ಇರುವವರಿಗೂ ಇದರ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು.

#ದೈನಂದಿನ ಕಾರ್ಯಕ್ಕೆ ಶಕ್ತಿ : ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದು ದೈನಂದಿನ ಕಾರ್ಯಕ್ಕೆ ಶಕ್ತಿ ನೀಡುವುದು ಮತ್ತು ದೀರ್ಘಕಾಲ ದೈಹಿಕ ಚಟುವಟಿಕೆಯನ್ನು ದಣಿವಿಲ್ಲದೆ ಮಾಡಬಹುದಾಗಿದೆ.ಬೀಟ್ ರೂಟ್ ಜ್ಯೂಸ್ ನ್ನು ನಿತ್ಯವೂ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್ ರೂಟ್ ನಲ್ಲಿ ಇರುವಂತಹ ಫಾಲಟೆ ಅಂಶವು ಈ ಕಾರ್ಯಕ್ಕೆ ಕಾರಣವಾಗಿದೆ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.

#ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ:- ಬೀಟ್‌ರೂಟ್‌ನಲ್ಲಿರುವ ಬೀಟಾಸಯಾನಿನ್ ಪೋಷಕಾಂಶ ರಕ್ತದಲ್ಲಿರುವ ಕ್ಯಾನ್ಸರ್ ಕಾರಕ ಕಣಗಳನ್ನು ಹೊಡೆದೋಡಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಬಲ್ಲದು.(ವಿಕೋಪಕ್ಕೆ ತಿರುಗಿದ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಸಮಯಾವಕಾಶ ಅಗತ್ಯವಿದೆ).

#ಉರಿಯೂತ ಸಮಸ್ಯೆಯನ್ನು ಎದುರಿಸುತ್ತದೆಬೀಟ್‌ರೂಟ್‌ನಲ್ಲಿ ಬೀಟೈನ್‌ ಎಂಬ ಪೌಷ್ಟಿಕಾಂಶ ಪರಿಸರದ ಒತ್ತಡದಿಂದ ಜೀವಕೋಶಗಳು, ಪ್ರೋಟೀನ್‌ಗಳು ಮತ್ತು ಕಿಣ್ವಗಳನ್ನು ರಕ್ಷಿಸುತ್ತದೆ. ಅಲ್ಲದೆ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ರಕ್ಷಿಸುತ್ತದೆ ಹಾಗೂ ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ.

#ಆರೋಗ್ಯಕರ ದೇಹತೂಕ:ನಿಮ್ಮ ದೇಹತೂಕವನ್ನು ನಿಯಂತ್ರಣದಲ್ಲಿಡಲು ಬೀಟ್‌ರೂಟ್‌ ಸಹಾಯಕಾರಿ. ದಿನಕ್ಕೊಂದು ಬೀಟ್‌ರೂಟ್‌ ಸೇವಿಸಿದರೆ ಸಾಕಷ್ಟು ಕ್ಯಾಲೊರಿ ಬಾಡಿಗೆ ಸಿಗುತ್ತದೆ. ಇತರ ಆಹಾರಗಳನ್ನು ಒಂದು ಮಿತಿಗಿಂತ ಹೆಚ್ಚಾಗಿ ಸೇವಿಸುವ ಅಗತ್ಯ ಬೀಳುವುದಿಲ್ಲ. ಹೀಗಾಗಿ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರವಾಗುವುದು ತಪ್ಪುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group