ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಿಸೋಣ..!

ಹೇಗೆ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುವುದು?

ಕಲೆ, ಸಂಸಕೃತಿಯನ್ನು ಪ್ರಸ್ತುತಿಪಡಿಸಲು ಈ ಹತ್ತು ದಿನಗಳು ಒಳ್ಳೆಯ ವೇದಿಕೆಯೂ ಹೌದು. ಕೊನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ಹಾಡು, ನೃತ್ಯ ಹಾಗೂ ಭಜನೆಗಳೊಂದಿಗೆ ಭವ್ಯ ಮೆರವಣಿಗೆಗಳಲ್ಲಿ ಸಾಗಿ ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುವುದು. ಮನೆಗಳಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಈ ಹಬ್ಬವನ್ನು ಬಾಲಗಂಗಾಧರ ತಿಲಕರು ಸ್ವಾತಂತ್ರ್ಯದ ಸಂಗ್ರಾಮಕ್ಕಾಗಿ, ಜನರನ್ನು ಒಟ್ಟುಗೂಡಿಸಿ ರಾಷ್ಟ್ರೀಯತೆಯ ಕಿಚ್ಚನ್ನು ಹಚ್ಚಲು ಸಾರ್ವಜನಿಕವಾಗಿ ಈ ಹಬ್ಬವನ್ನು ಆಚರಿಸುವ ಪ್ರತೀತಿಯನ್ನು ಹುಟ್ಟುಹಾಕಿದ್ದು ಈಗ ಇತಿಹಾಸ.

ಹೀಗೆ ಭಕ್ತಿಭಾವದೊಂದಿಗೆ, ರಾಷ್ಟ್ರೀಯತೆಯನ್ನು, ಏಕತೆಯನ್ನು ಪಸರಿಸಿದ ನಮ್ಮ ಗಣಪತಿ ಹಬ್ಬ, ಇತ್ತೀಚಿನ ದಿನಗಳಲ್ಲಿ ತನ್ನ ನಿಜ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಹಬ್ಬವು ಈಗ ಆಡಂಬರ, ಮಾಲಿನ್ಯ, ಪರಿಸರ ಹಾನಿಗೆ ಕಾರಣ ಎಂಬಂತೆ ಆಗುತ್ತಿದೆ. ಇದರ ಪ್ರತಿಯಾಗಿ, ಪರಿಹಾರವಾಗಿ ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಯ ಹೊಸ ಪರಂಪರೆ ಈ ನಡುವೆ ಪ್ರಾರಂಭವಾಗಿದೆ. ಗಣಪತಿಯನ್ನು ಬಣ್ಣಗಳಿಂದ ಚಂದ ಅಲಂಕರಿಸಿ, ಉತ್ಸಾಹದಿಂದ ಆಚರಿಸಲು ಇಚ್ಚಿಸುತ್ತಾರೆ, ಆದರೆ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಪರಿಸರದ ಮೇಲೆ ಆಗುವ ಪರಿಣಾಮವನ್ನು ನೋಡಬೇಕಿದೆ.

#ಮೂರ್ತಿಯನ್ನು ಉಪಯೋಗಿಸಿ: ರಾಸಾಯನಿಕ ವಸ್ತು ಅಥವಾ ಬಣ್ಣಗಳಿಂದ ಮಾಡಿದ, ಪಿ ಒ ಪಿ, ಪ್ಲಾಸ್ಟಿಕ್ ಮತ್ತು ತರ್ಮಕೋಲ್ ಗಳಿಂದ ತಯಾರಿಸಿದ ಮೂರ್ತಿಗಳನ್ನು ಬಳಸಬೇಡಿ. ಬದಲಿಗೆ ನೀರಿನಲ್ಲಿ ಸುಲಭವಾಗಿ ಕರಗುವ, ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು.

#ಪ್ಲಾಸ್ಟಿಕ್ ನಿಷೇಧಿಸಿ: ನೈವೇದ್ಯ, ಪ್ರಸಾದ, ಹಣ್ಣು ಮತ್ತಿತರೆ ತಿನಿಸುಗಳನ್ನು ವಿನಿಯೋಗಿಸಲು ಬಾಳೆ ಎಲೆ, ಅಡಿಕೆಯ ಹಾಳೆ, ದೊನ್ನೆಗಳನ್ನು ಬಳಸಿ. ಕಸದ ಬುಟ್ಟಿಯಲ್ಲೆ ಕಸವನ್ನು ಹಾಕಿ ಪರಿಸರ ಶುಚಿತ್ವ ಕಾಯ್ದಿರಿಸಿ.

#ಅದರಂತೆ, ರಾಸಾಯನಿಕವಾಗಿ ತಯಾರಿ ಮಾಡುವ ಗಣೇಶನ ಮೂರ್ತಿಗಳಿಂದಾಗಿ ಬಾವಿ, ಕೆರೆಯಲ್ಲಿ ಗಣಪತಿ ವಿಸರ್ಜಣೆ ಮಾಡುವುದರಿಂದ ಜಲಮಾಲಿನ್ಯ ಆಗುವುದರ ಜೊತೆಗೆ ರೋಗಗಳು ಹರಡುವ ಸಾದ್ಯತೆಗಳು ಹೆಚ್ಚಿವೆ. ಹೀಗಾಗಿ ಮನೆಯಲ್ಲಿ ಪ್ರತಿಷ್ಠಾಪಿಸಿದ ಪಾರಂಪರಿಕ ಗಣೇಶ ಮೂರ್ತಿ ಮನೆಗಳಲ್ಲಿ; ಸಾರ್ವಜನಿಕ ಪ್ರದೇಶಗಳಲ್ಲಿ ಕೂರಿಸಿದ ಗಣೇಶ ವಿಗ್ರಹಗಳನ್ನು ಸಮೀಪದ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ನಿರ್ಮಿಸಿರುವ ಹೊಂಡ, ಮೊಬೈಲ್ ಟ್ಯಾಂಕ್, ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವ ಮೂಲಕ ಜಲಮಾಲಿನ್ಯ,ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ತಡೆಗಟ್ಟಬೇಕು. ಅಲ್ಲದೇ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯೊಂದಿಗೆ ಸರಳತೆಯ ಜೊತೆಗೆ ಅರ್ಥಪೂರ್ಣ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಿಸೋಣ..

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group