ತೆಂಗಿನ ಎಣ್ಣೆಯ ಹಲವು ಪ್ರಯೋಜನಗಳು..!

ಹಲ್ಲುಗಳಲ್ಲಿ ನಿಂತಿರುವಂತಹ ಪದರಗಳನ್ನು ತೆಗೆದುಹಾಕಲು ನಾವು ಹಲ್ಲಿನ ಪೇಸ್ಟ್ ನ್ನು ಮೊದಲಿಗೆ ಬಳಸಿಕೊಳ್ಳುತ್ತೇವೆ. ಇದು ಅತೀ ಅಗತ್ಯ ಮತ್ತು ಅನಿವಾರ್ಯ ಕೂಡ. ಈ ರೀತಿಯಾಗಿ ನಾವು ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುತ್ತೇವೆ. ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನೂ ಹಲವಾರು ವಿಧಾನಗಳು ಇವೆ. ಇದರಿಂದ ಬಾಯಿಯ ಆರೋಗ್ಯವನ್ನು ಸುಧಾರಿಸಬಹುದು. ಇಲ್ಲಿ ಮುಖ್ಯವಾಗಿ ತೆಂಗಿನೆಣ್ಣೆ ಬಳಸಿಕೊಂಡು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.
#ದಂತಕುಳಿ ತಡೆಯುವುದು:ಹಲ್ಲುಗಳ ಆರೋಗ್ಯಕ್ಕೆ ತೆಂಗಿನ ಎಣ್ಣೆ ಬಳಸುವ ಕಾರಣದಿಂದಾಗಿ ಅದು ಸ್ಟ್ರೆಪ್ಟೋಕೊಕಸ್ ಮ್ಯುಟಾನ್ಸ್ ಮತ್ತು ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಇದು ದಂತಕುಳಿ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಬ್ಯಾಕ್ಟೀರಿಯಾ ನಿರ್ಮಾಣ ಮಾಡುವುದನ್ನು ತೆಂಗಿನ ಎಣ್ಣೆಯು ಕಡಿಮೆ ಮಾಡುವುದು ಎಂದು ವಿವಿಧ ರೀತಿಯ ಅಧ್ಯಯನಗಳು ಹೇಳಿವೆ. ಒಸಡಿಗೆ ಸುಮಾರು 20-25 ದಿನಗಳ ಕಾಲ ನಿರಂತರವಾಗಿ ತೆಂಗಿನ ಎಣ್ಣೆ ಬಳಸಿಕೊಂಡು ಮಸಾಜ್ ಮಾಡಿಕೊಳ್ಳಿ ಮತ್ತು ಆಗ ನಿಮಗೆ ವ್ಯತ್ಯಾಸವು ಕಂಡುಬರುವುದು. 9-10 ನಿಮಿಷ ಕಾಲ ನೀವು ಮಸಾಜ್ ಮಾಡಿಕೊಳ್ಳಿ.
#ಮಕ್ಕಳಿನ ಚರ್ಮಕ್ಕೆ ಬಹಳ ಉಪಯುಕ್ತ:ತೆಂಗಿನ ಎಣ್ಣೆಯು ಶಿಶುಗಳಿಗೆ ಉತ್ತಮವಾದ ಮಾಯಿಶ್ಚರೈಸರ್ ಆಗಿದೆ. ಇದರಲ್ಲಿ ಯಾವುದೇ ರಾಸಾಯನಿಕಗಳು ಇಲ್ಲವಾದ್ದರಿಂದ ಮಕ್ಕಳಿಗೆ ಬಳಸಲು ಭಯಪಡುವ ಅಗತ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗೆ ಸ್ನಾನ ಮಾಡುವ ಮೊದಲು ದೇಹವನ್ನು ಮಸಾಜ್ ಮಾಡಲು ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ. ನವಜಾತ ಶಿಶುಗಳ ಚರ್ಮವನ್ನು ಬಲಪಡಿಸಲು ಮತ್ತು ಸುಧಾರಿಸಲು ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ. ಇದು ಮಾಯಿಶ್ಚರೈಸರ್ ಆಗಿಯೂ ಕೆಲಸ ಮಾಡುತ್ತದೆ. ಇದು ಮಕ್ಕಳ ಸೂಕ್ಷ್ಮ ಚರ್ಮವನ್ನು ತೇವಗೊಳಿಸುತ್ತದೆ.
#ತೂಕವನ್ನು ನಿಯಂತ್ರಿಸುತ್ತದೆ:ಪ್ರತಿದಿನ ಹಸಿ ತೆಂಗಿನಕಾಯಿ ಅಥವಾ ಕೊಬ್ಬರಿ ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ಬಿಡುಗಡೆಯಾಗುವ ತೈಲವು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬು ನಿಯಂತ್ರಣದಲ್ಲಿರುತ್ತದೆ. ಇದರಿಂದಾಗಿ ಸಹಜವಾಗಿಯೇ ತೂಕ ಕೂಡ ಕಡಿಮೆಯಾಗುತ್ತದೆ.
#ಒಡೆದ ಹಿಮ್ಮಡಿಗಳಿಗೆ ಒಳ್ಳೆಯದು:ಹಿಮ್ಮಡಿ ಒಡೆಯುವುದು ಬಹುತೇಕರ ಸಮಸ್ಯೆಯಾಗಿದೆ. ಅದನ್ನು ನಿರ್ಲಕ್ಷಿಸಿದರೆ ನೋವಿಗೆ ಕೂಡಾ ಕಾರಣವಾಗಬಹುದು. ನಿಮ್ಮ ಹಿಮ್ಮಡಿಗಳ ಸುತ್ತಲಿನ ಚರ್ಮವು ಶುಷ್ಕ ಮತ್ತು ಬಿಗಿಯಾದಾಗ ಪಾದಗಳು ಬಿರುಕು ಬಿಡಬಹುದು. ಆದರೆ ಈ ಸಮಸ್ಯೆಯನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆಯನ್ನು ಬಳಸಬಹುದು. ಉತ್ತಮ ಫಲಿತಾಂಶಕ್ಕಾಗಿ, ತೆಂಗಿನ ಎಣ್ಣೆಯನ್ನು ಹಿಮ್ಮಡಿಗೆ ಮಸಾಜ್ ಮಾಡಬಹುದು. ಬಿರುಕು ಬಿಟ್ಟ ಹಿಮ್ಮಡಿಗಳು ರಕ್ತಸ್ರಾವ ಅಥವಾ ಸೋಂಕಿಗೆ ಗುರಿಯಾಗಿದ್ದರೆ, ತೆಂಗಿನ ಎಣ್ಣೆಯಲ್ಲಿರುವ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಅವುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
#ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ:ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು. ಭಾರತೀಯರು ಇದನ್ನು ಬಹಳ ಸಮಯದಿಂದ ಬಳಸುತ್ತಿದ್ದಾರೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಮತ್ತು ಕೊಬ್ಬಿನಾಮ್ಲಗಳಿವೆ. ಇವು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತವೆ. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನೆತ್ತಿಗೆ ರಕ್ತ ಪೂರೈಕೆಗೆ ಸಹಾಯ ಮಾಡುತ್ತದೆ. ಆ ಮೂಲಕ ಕೂದಲಿನ ನೈಸರ್ಗಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
#ಚರ್ಮಕ್ಕೆ ಕೂದಲಿಗೆ ಮತ್ತು ಬಾಯಿಯ ಆರೋಗ್ಯಕ್ಕೆ ತೆಂಗಿನ ಎಣ್ಣೆ ಬಹಳ ಒಳ್ಳೆಯದು:ನಾವು ಮೊದಲೇ ಹೇಳಿದ ಹಾಗೆ ತಾಜಾ ತೆಂಗಿನ ಎಣ್ಣೆಯಿಂದ ಮನುಷ್ಯನ ದೇಹದ ಸಂಪೂರ್ಣ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ದೇಹದ ಒಳಗೆ ತನ್ನ ಪವಾಡವನ್ನು ಮೆರೆಯುವುದಷ್ಟೇ ಅಲ್ಲದೆ ದೇಹದ ಹೊರಗೂ ಕೂಡ ತೆಂಗಿನ ಎಣ್ಣೆ ತನ್ನದೇ ಆದ ರೀತಿಯಲ್ಲಿ ಮನುಷ್ಯನಿಗೆ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ ಹೊಳಪನ್ನು ಹೊಂದುತ್ತದೆ. ಚರ್ಮದ ವಿಷಯದಲ್ಲಿ ಕೂಡ ತೆಂಗಿನ ಎಣ್ಣೆ ನಮ್ಮ ದೇಹದ ಚರ್ಮ ಯಾವುದೇ ರೀತಿಯ ಚರ್ಮ ವ್ಯಾದಿಗಳಿಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಬಾಯಿಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತೆಂಗಿನ ಎಣ್ಣೆಯನ್ನು ಬಳಸಿಕೊಂಡು ಆಯಿಲ್ ಪುಲ್ಲಿಂಗ್ ಮಾಡಿದರೆ ಹಲ್ಲುಗಳ ಆರೋಗ್ಯ ಮತ್ತು ವಸಡಿನ ರಕ್ಷಣೆ ಕೂಡ ಚೆನ್ನಾಗಿ ಆಗಿ ಬಾಯಿಯ ದುರ್ವಾಸನೆ ದೂರವಾಗುತ್ತದೆ