ಪಶುಸಂಗೋಪನಾ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು!

ಇದು ಒಂದು ಕೇಂದ್ರ ಸರ್ಕಾರದ ಯೋಜನೆ. ಕೋಳಿ ಸಾಕಾಣಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಪಶು ಆಹಾರ/ ಮೇವು ಕ್ಷೇತ್ರಗಳಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಿಂದ ಹಾಗೂ ಕೋಳಿ, ಕುರಿ, ಮೇಕೆ ಮತ್ತು ಪಶು ಆಹಾರ/ ಮೇವು ಇವುಗಳ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಉದ್ಯಮಶೀಲತಾ ಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸದರಿ ಯೋಜನೆಯು 2021-22 ನೇ ಸಾಲಿನಿಂದ 2025-26 ನೇ ಸಾಲಿನ ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯಡಿಯಲ್ಲಿ ಯೋಜನಾ ವೆಚ್ಚದ ಶೇ.50ರಷ್ಟು (25 ಲಕ್ಷದಿಂದ – 50 ಲಕ್ಷದವರೆಗೆ) ಬ್ಯಾಕ್ ಎಂಡೆಡ್ ಸಹಾಯಧನವನ್ನು ನೀಡಲಾಗುವುದು. ಎರಡು ಸಮಾನ ಕಂತುಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುವುದು.
ಯಾರು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ?
ಆಸಕ್ತ ವ್ಯಕ್ತಿಗಳು, ರೈತ ಉತ್ಪಾದಕ ಸಂಸ್ಥೆಗಳು, ಜಂಟಿ ಹೊಣೆಗಾರಿಕೆ ಗುಂಪುಗಳು, ಸ್ವಸಹಾಯ ಸಂಘಗಳು ಮತ್ತು ಸೆಕ್ಷನ್ 8 ಕಂಪನಿಗಳು.
ಗುರುತಿನ ಪುರಾವೆ (ಆಧಾರ್ ಕಾರ್ಡ್,
ಮತದಾರರ ಚೀಟಿ, ಪಾನ್ ಕಾರ್ಡ್, ಚಾಲನಾ ಪರವಾನಿಗೆ)ವಿಳಾಸದ ಪುರಾವೆ (ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಬ್ಯಾಂಕ್ ಪಾಸ್ ಪುಸ್ತಕ)ಜಾತಿ ಪ್ರಮಾಣ ಪತ್ರ (ಅವಶ್ಯಕವಿದ್ದಲ್ಲಿ)
ಯೋಜನೆ ಕೈಗೊಳ್ಳಲು ಅವಶ್ಯವಿರುವಷ್ಟು ಜಮೀನು ಹೊಂದಿರುವುದಕ್ಕೆ ಪುರಾವೆ (ಸ್ವಂತದ್ದು ಅಥವಾ ಭೋಗ್ಯಕ್ಕೆ)ಶೈಕ್ಷಣಿಕ ದಾಖಲಾತಿಗಳು, ತರಬೇತಿಪಡೆದ ಪ್ರಮಾಣಪತ್ರಗಳು
ಆದಾಯದ ಪುರಾವೆ, ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್, ಕಳೆದ 6 ತಿಂಗಳಿನ ಬ್ಯಾಂಕ್ ತಖ್ತೆ
ಕೈಗೊಳ್ಳುತ್ತಿರುವ ಪಶುಸಂಗೋಪನಾ ಚಟುವಟಿಕೆಯ ವಿಸ್ತೃತ ಯೋಜನಾ ವರದಿಯೋಜನಾ ಸ್ಥಳದ ಜಿಐ ಟ್ಯಾಗ್ ಇರುವ ಫೋಟೋ/ ಭಾವಚಿತ್ರ.
ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ.
ಜಾನುವಾರಗಳಿಗೆ ವಿಮೆ – ಶೇಕಡ 50 ರಿಂದ 70ರಷ್ಟು ಪ್ರೀಮಿಯಂ ಸಹಾಯಧನ