ಹಲವು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಎಕ್ಕದ ಗಿಡ!

ಎಕ್ಕದ (ಎಕ್ಕೆ) ಗಿಡ ಎಲ್ಲರಿಗೂ ಚಿರಪರಿಚಿತ. ಎಕ್ಕದ ಎಲೆ ಹಾಗೂ ಹೂವುಗಳಿಗೆ ಪೂಜಾ ವಿಧಿ ವಿಧಾನಗಳಲ್ಲಿ ಅತ್ಯಂತ ಅಗ್ರ ಹಾಗೂ ಶ್ರೇಷ್ಠ ಸ್ಥಾನವಿದೆ. ಹಿಂದೂ ಪುರಾಣದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ರಥಸಪ್ತಮಿಯ ದಿನದಂದು ಎಕ್ಕದ ಗಿಡದ ಎಲೆಗಳನ್ನು ಧರಿಸಿ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಗಿಡದಲ್ಲಿ ಎರಡು ಬಗೆಗಳಿದ್ದು, ಒಂದು ಗಿಡ ಬಿಳಿ ಹುವುಗಳನನ್ನು ಬಿಟ್ಟರೆ ಮತ್ತೊಂದು ನೀಲಿ (ಪರ್ಪಲ್) ಹೂವುಗಳನ್ನು ಬಿಡುತ್ತದೆ. ಬಿಳಿ ಎಕ್ಕದ ಗಿಡದ ಎಲೆಗಳನ್ನ ವಿಶೇಷವಾಗಿ ಗಣೇಶ ಪೂಜೆಗೆ ಬಳಸುತ್ತಾರೆ. ಜೊತೆಗೆ ಪರಮೇಶ್ವರನ ಪೂಜೆಗೂ ಎಕ್ಕದ ಹೂವುಗಳನ್ನು ಬಳಸಲಾಗುತ್ತದೆ.ಕೇವಲ ಪೂಜೆ, ಧಾರ್ಮಿಕವಾಗಿ ಮಾತ್ರವಲ್ಲದೆ ಆಯುರ್ವೇದದಲ್ಲೂ ಎಕ್ಕದ ಗಿಡಕ್ಕೆ ಶ್ರೇಷ್ಠ ಸ್ಥಾನವಿದೆ. ಇದರ ಎಲೆಗಳನ್ನ ಅನಾದಿಕಾಲದಿಂದಲೂ ಔಷಧವಾಗಿ ಬಳಸಲಾಗುತ್ತಿದೆ. ಅರ್ಕ ಅಥವಾ ದೇವ ರೇಖಾ ಎಂಬ ಹೆಸರಿನಿಂದ ಕರೆಯಲ್ಪಡುವ ಎಕ್ಕದ ಗಿಡ, ಔಷಧ ಗುಣಗಳಿಂದ ಶ್ರೀಮಂತವಾಗಿದೆ. ಚರ್ಮ ಸುಕ್ಕುಗಟ್ಟಿದರೆ, ವಿಷದ ಮುಳ್ಳು ತಾಗಿದರೆ, ಚೇಳು ಕಡಿದಾಗ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದಾಗ ಈ ಸಸ್ಯದ ಔಷಧ ರಾಮಬಾಣವಾಗಿದೆ. ಈ ಸಸ್ಯದ ಬಹು ಉಪಯೋಗಗಳ ಬಗ್ಗೆ ಯುವ ಸಮುದಾಯಕ್ಕೆ ಅಷ್ಟಾಗಿ ಅರಿವಿಲ್ಲ. ಔಷಧ ಗುಣವುಳ್ಳ ಈ ಸಸ್ಯ ಪ್ರಬೇಧವನ್ನು ಯಾರೂ ನೆಟ್ಟು ಬೆಳೆಸುವುದಿಲ್ಲ. ಬದಲಿಗೆ, ಪ್ರಕೃತಿದತ್ತವಾಗಿ ಬೆಳೆಯುವ ಎಕ್ಕದ ಗಿಡವನ್ನು ‘ರಸ್ತೆ ಬದಿಯ ಸಂಜೀವಿನಿ’ ಎಂದರೂ ತಪ್ಪಾಗಲಾರದು. ಇಂತಹ ಎಕ್ಕದ ಗಿಡದಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.
ಸಕ್ಕರೆ ಕಾಯಿಲೆ, ಬಿಪಿ ಕಂಟ್ರೋಲ್‌ಗೆ?ಸಕ್ಕರೆ ಕಾಯಿಲೆ ಅಥವಾ ಬಿಪಿ ಕಾಯಿಲೆ ಇದ್ದವರು ಎಕ್ಕದ ಎಲೆಯನ್ನು ಕಾಲಿನ ಅಡಿಭಾಗದಲ್ಲಿ ಇಟ್ಟರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದರೂ ವೈದ್ಯಕೀಯವಾಗಿ ಅದು ದೃಢಪಟ್ಟಿಲ್ಲ. ಕಾಲಿನ ಅಡಿಯಲ್ಲಿ ಇಟ್ಟರೆ ದೇಹಕ್ಕೆ ತಂಪು ಕೊಡುತ್ತದೆ ಎನ್ನುತ್ತಾರೆ ವೈದ್ಯರು.ಎಕ್ಕ ಗಿಡದ ಎಲೆಯಲ್ಲಿ ಔಷಧೀಯ ಗುಣವಿರುವುದು ವೈದ್ಯಕೀಯವಾಗಿ ದೃಡಪಟ್ಟಿದೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಶೋಲೋವಾರ್ಟ್ ಎಂದು ಕರೆಯುತ್ತಾರೆ. ಇದರ ಎಲೆ, ಹಾಲು, ಬೇರು, ಕಾಂಡ ಎಲ್ಲವೂ ಹೇರಳವಾದ ಔಷಧೀಯ ಗುಣವನ್ನು ಹೊಂದಿರುವುದು ದೃಢಪಟ್ಟಿದೆ. ಹಿಂದಿನ ಕಾಲದಲ್ಲಿ ಇದರ ಉಪಯೋಗ ಬಹಳವಾಗಿತ್ತು ಆದರೆ ಈಗ ಅದನ್ನು ಬಳಕೆ ಮಾಡುವುದು ಕಡಿಮೆಯಾಗಿದೆ. ಎಕ್ಕ ಗಿಡವನ್ನು ಯಾರೂ ನೆಟ್ಟು ಬೆಳೆಸದ ಕಾರಣ ಅಪರೂಪಕ್ಕೊಮ್ಮೆ ಇದರ ಉಪಯೋಗವಾಗಲೂ ಬಹುದು. ವಿಷದ ರಸವನ್ನು ದೇಹದಿಂದ ಹೀರುವ ಶಕ್ತಿ ಈ ಗಿಡದಲ್ಲಿ ಹೇರಳವಾಗಿದೆ. ಇದರ ಪ್ರತೀಯೊಂದು ಭಾಗವು ಅತ್ಯಂತ ಸೂಕ್ಷ ್ಮ ಮತ್ತು ಅಪಾಯಕಾರಿಯಾಗಿರುವ ಕಾರಣ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಹಾಲು ಕಣ್ಣಿಗೆ ತಾಗಿದರೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
* ಮೂಲವ್ಯಾದಿ ಹೊಂದಿರುವವರು ಎಕ್ಕೆ ಎಲೆಯಲ್ಲಿನ ಹಾಲನ್ನು ಮೂಲಕ್ಕೆ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
* ಮಂಡಿ ನೋವು ಇರುವವರು ಎಕ್ಕೆ ಎಲೆಯನ್ನು ಸುಟ್ಟು, ಅದನ್ನು ನೋವಿರುವ ಜಾಗದಲ್ಲಿ ಇರಿಸಿ ಬಟ್ಟೆಯಲ್ಲಿ ಕಟ್ಟಿಕೊಂಡರೆ ನೋವು ಕಡಿಮೆಯಾಗುತ್ತದೆ.
* ಎಕ್ಕೆ ಗಿಡದ ಎಲೆಗಳು ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿಡುತ್ತವೆ ಎಂಬ ಅಂಶ ವೈಜ್ಞಾನಿಕವಾಗಿ ಸಾಬೀತಾಗಿದೆ. ಮಧುಮೇಹ ಇರುವವರು ಎಕ್ಕೆ ಎಲೆಗಳನ್ನು ಹಿಮ್ಮುಖವಾಗಿ ತಿರುಗಿಸಿ ಪಾದಗಳ ಕೆಳಗೆ ಇರಿಸಿಕೊಂಡು ಕಾಲುಚೀಲ ಧರಿಸಿ, ದಿನಪೂರ್ತಿ ಹಾಗೇ ಬಿಟ್ಟು ರಾತ್ರಿ ತೆಗೆದು ಮಲಗಬೇಕು. ಪ್ರತಿ ದಿನ ಹೀಗೆ ಮಾಡಿದರೆ, 15 ದಿನಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ.