ರಕ್ತದ ಒತ್ತಡವನ್ನು ನಿಯಂತ್ರಿಸಲು ಕೆಲವು ಮನೆಮದ್ದು..!

ಜೀವನಶೈಲಿ ಬದಲಾವಣೆ ಮಾಡಿಕೊಂಡು ಕೆಲವೊಂದು ಮನೆಮದ್ದನ್ನು ಬಳಸಿಕೊಂಡರೆ ಅದರಿಂದ ಖಂಡಿತವಾಗಿಯೂ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಬಹುದು. ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವಂತಹ ಮನೆಮದ್ದುಗಳು ಯಾವುದು ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ತಿಳಿಸಿಕೊಡಲಿದೆ. ಅದನ್ನು ತಿಳಿದು ರಕ್ತದೊತ್ತಡದ ಸಮಸ್ಯೆಯಿಂದ ಪಾರಾಗಿರಿ.

ಲೋ ಬಿಪಿಗೆ ಕಾರಣ ಮತ್ತು ಲಕ್ಷಣಗಳು:ಕಡಿಮೆ ರಕ್ತದೊತ್ತಡ ಬೇರೆ ಕಾರಣಗಳ ಜೊತೆಗೆ ಬರುವಂಥದು. ಮಾನಸಿಕ ಒತ್ತಡ, ಆತಂಕ ಆದಾಗ ಬರುತ್ತದೆ. ಆದ್ದರಿಂದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಕೆಲವೊಮ್ಮೆ ಅಧಿಕ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಮಾತ್ರೆ ಪ್ರಮಾಣ ಜಾಸ್ತಿ ಆದರೆ ರಕ್ತದೊತ್ತಡ ಕಡಿಮೆ ಆಗುತ್ತದೆ. ರಕ್ತಹೀನತೆ (ಅನೀಮಿಯಾ) ಇರುವವರಿಗೂ ಮಾತ್ರೆಗಳನ್ನು ತೆಗೆದುಕೊಂಡಾಗ ರಕ್ತದ ಒತ್ತಡ ಕಡಿಮೆ ಆಗಬಹುದು. ಆಗ ಔಷಧಿ ಮತ್ತು ಆಹಾರ ಸೇವನೆ ಸರಿ ಮಾಡಿಕೊಂಡರೆ ವಾಸಿಯಾಗುತ್ತದೆ. ದೈಹಿಕ ತೂಕ ಕಡಿಮೆ ಇರುವವರಲ್ಲಿ ಕಡಿಮೆ ರಕ್ತದೊತ್ತಡ ಕಾಣಿಸಿಕೊಳ್ಳಬಹುದು. ಮಾನಸಿಕ ಸಮಸ್ಯೆಗಳಿಗೆ ಮಾತ್ರೆ ತೆಗೆದುಕೊಂಡಾಗ ರಕ್ತದ ಒತ್ತಡ ಕಡಿಮೆ ಆಗಬಹುದು. ತಲೆಸುತ್ತು, ಮೂರ್ಛೆ, ಅಸ್ಪಷ್ಟ ದೃಷ್ಟಿ, ಆಳವಿಲ್ಲದ, ತ್ವರಿತ ಉಸಿರಾಟ, ಬಾಯಾರಿಕೆ ಮತ್ತು ನಿರ್ಜಲೀಕರಣ, ಆಯಾಸ ಮತ್ತು ವಾಕರಿಕೆಗಳು ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.

1. ಬಿಸಿಲು ಕಾಯಿಸುವುದುದೇಹದ ಚರ್ಮದಲ್ಲಿರುವ ನೈಟ್ರಿಕ್ ಆಕ್ಸೈಡ್ ರಕ್ತದೊತ್ತಡವನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಚರ್ಮವನ್ನು ಸೂರ್ಯನತ್ತ ಒಡ್ಡಿದ್ದಾಗ, ನೈಟ್ರಿಕ್ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಒಸರುವ ಮೂಲಕ ರಕ್ತದ ಕಣಗಳು ಹಿಗ್ಗುತ್ತವೆ. ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಾಯಕಾರಿಯಾಗಿದೆ.

2. ಸಂಸ್ಕರಿಸದ ಧಾನ್ಯಗಳು:ಸಂಸ್ಕರಿಸದ ಧಾನ್ಯಗಳನ್ನು ಪ್ರತಿದಿನ ಮೂರು ಬಾರಿ ಸೇವಿಸಿದರೆ, ಅದು ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗಬಹುದು. ಇವುಗಳಲ್ಲಿರುವ ಪೌಷ್ಟಿಕಾಂಶಗಳಿಂದಾಗಿ ಇಂತಹ ಆರೋಗ್ಯಕರ ಲಾಭಗಳಿವೆ. ಆದರೆ ಸಂಸ್ಕರಿಸಿದ ಧಾನ್ಯಗಳಿಂದ ಇಂತಹ ಲಾಭಗಳು ಸಿಗುವುದಿಲ್ಲ. ಇವುಗಳಲ್ಲಿರುವ ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ಸಂಸ್ಕರಿಸದ ಧಾನ್ಯಗಳಾದ ಗೋಧಿ, ಗೋಧಿ ರವೆ, ಬಾರ್ಲಿ ಮತ್ತು ಹೋಲ್ ವೀಟ್ ಬ್ರೆಡ್ ಜೊತೆಗೆ ಓಟ್ಸ್ ಮತ್ತು ಅಕ್ಕಿಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶವಿರುತ್ತದೆ. ಅದಲ್ಲದೇ, ಈ ಆಹಾರ ಪದಾರ್ಥಗಳಲ್ಲಿ ನಾರಿನಂಶ ಹೆಚ್ಚಾಗಿದ್ದು ಕೊಲೆಸ್ಟರಾಲ್‌ ಅನ್ನು ನಿರ್ವಹಿಸಲು ನೆರವಾಗುತ್ತದೆ.

3.ಬೀನ್ಸ್ ಮತ್ತು ಬೆಳೆದ್ವಿದಳ ಧಾನ್ಯಗಳು ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನ ಉಗ್ರಾಣವಾಗಿದೆ. ಹಲವಾರು ಸಂಶೋಧನಾ ಅಧ್ಯಯನಗಳು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬೀನ್ಸ್ ಮತ್ತು ಬೆಳೆಯನ್ನು ಸೇವಿಸುವುದರಿಂದ ಧನಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ನೀವು ದ್ವಿದಳ ಧಾನ್ಯಗಳನ್ನು ಸೇವಿಸಿ.

4.ಜೇನುತುಪ್ಪಜೇನುತುಪ್ಪು ಹಲವಾರು ಶಮನಕಾರಿ ಗುಣಗಳು ಇವೆ ಮತ್ತು ಇದು ರಕ್ತದೊತ್ತಡ ಕಡಿಮೆ ಮಾಡುವಲ್ಲೂ ಸಹಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ತುಂಬಾ ರುಚಿಕರ, ಸರಳ ಹಾಗೂ ಸಿಹಿ ವಿಧಾನ ಇದಾಗಿದೆ. ಜೇನುತುಪ್ಪವು ರಕ್ತನಾಳಗಳಿಗೆ ಆರಾಮವನ್ನು ನೀಡುವುದು. ಹಸಿ ಜೇನುತುಪ್ಪ ಸೇವಿಸಿದರೆ ರಕ್ತದೊತ್ತಡ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

5.ಕರಿಬೇವು:ದಕ್ಷಿಣ ಭಾರತದ ಅನೇಕ ಕಡೆ ಕರಿಬೇವು ಎಲೆಯನ್ನು ಔಷಧಿಗಾಗಿಯೇ ಬಳಸಲಾಗುತ್ತದೆ. ರಕ್ತದ ಒತ್ತಡ ಮಾತ್ರ ಅಲ್ಲ, ಅನೇಕ ಬೇರೆ ಆರೋಗ್ಯ ಸಮಸ್ಯೆಗೆ ಕರಿಬೇವು ರಾಮಬಾಣ ಎಂದೇ ನಂಬಿಕೆ ಇದೆ. ಒಂದು ಲೋಟ ನೀರಿಗೆ ನಾಲ್ಕೈದು ಕರಿಬೇವಿನ ಎಲೆ ಹಾಕಿ, ದಿನ ನಿತ್ಯ ಕುಡಿಯುವುದು ಬ್ಲಡ್‌ ಪ್ರಶರ್‌ ನಿಯಂತ್ರಣಕ್ಕೆ ಉತ್ತಮ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group