ಈರುಳ್ಳಿ ಶೇಖರಣಾ ವ್ಯವಸ್ಥೆ :ಡಾ|ಆರ್ ಬಿ ಬೆಳ್ಳಿ ಅವರ ಸಲಹೆ

ನಮ್ಮಲ್ಲಿ ಹಲವಾರು ರೈತರಿಗೆ ಈರುಳ್ಳಿಯನ್ನು ಹೇಗೆ ಸರಿಯಾದ ರೀತಿಯಲ್ಲಿ ಹೆಚ್ಚಿನ ದಿನಗಳ ಕಾಲ ಶೇಖರಣೆ ಮಾಡಿ ಇಡಬೇಕು ಎಂಬುದೇ ಗೊತ್ತಿಲ್ಲ. ಕೆಲವು ಈರುಳ್ಳಿಗಳು ನಮ್ಮ ಕಣ್ಣ ಮುಂದೆಯೇ ಒಣಗಿ ಹೋಗುತ್ತವೆ ಮತ್ತು ಅವುಗಳನ್ನು ಬಳಕೆ ಮಾಡಲು ಮತ್ತೊಮ್ಮೆ ನಮಗೆ ಸಾಧ್ಯವೇ ಆಗುವುದಿಲ್ಲ. ಅಂತವುಗಳ ಶೇಖರಣೆ ಬಗ್ಗೆಗೆ ಮಾಹಿತಿ ನೀಡಲಾಗಿದೆ
ಈರುಳ್ಳಿ ಗಡ್ಡೆ ಕಟಾವು ಮಾಡುವ 10 – 15 ದಿನಗಳ ಮುಂಚೆ ನೀರು ಕೊಡುವುದನ್ನು ನಿಲ್ಲಿಸಬೇಕು.ಗಡ್ಡೆ ಕಿತ್ತು ಹೊಲದಲ್ಲಿ ಪರಿಷ್ಕರಿಸಿದ ನಂತರ, ಗಡ್ಡೆಯ ಮೇಲೆ ಮೂರರಿಂದ ಐದು ಸೆಂಟಿಮೀಟರ್ ನಷ್ಟು ಬಿಟ್ಟು ಕಟಾವು ಮಾಡಬೇಕು.
- ಸಮಯಕ್ಕೆ ಸರಿಯಾಗಿ ಪೊಟ್ಯಾಶ್ ಪೋಷಕಾಂಶವನ್ನು ಪೂರೈಸುವುದರಿಂದ ಗಡ್ಡೆಗಳ ಗಾತ್ರ ಮತ್ತು ಗುಣಮಟ್ಟವನ್ನು ಕಾಪಾಡಬಹುದು.
- ತಾಮ್ರದ ಕೊರತೆಯಿದ್ದ ಬೆಳೆಯ ಗಡ್ಡೆಗಳ ಪದರಗಳು ಸರಿಯಾಗಿ ಹೊಂದಿಕೊಂಡಿರುವುದಿಲ್ಲ ಹಾಗೂ ಗಟ್ಟಿಯಾಗಿರುವುದಿಲ್ಲ. ಮಣ್ಣಿನಲ್ಲಿ ತಾಮ್ರದ ಕೊರತೆಯಿದ್ದಲ್ಲಿ ಎಕರೆಗೆ ನಾಲ್ಕರಿಂದ ಆರು ಕೆಜಿ ತಾಮ್ರದ ಸಲ್ಫೇಟನ್ನು ಪೂರೈಸಬೇಕು.
- ಕಟಾವು ಮಾಡುವ ಕೆಲವು ದಿನಗಳ ಮುಂಚೆ ಅಂದರೆ ನಾಟಿ ಮಾಡಿದ 90 ದಿನಗಳ ನಂತರ ಶೇಕಡ 1 ರ ಕಾರ್ಬನ್ ಡೈಜಿಮ್ ಸಿಂಪರಣೆ ಮಾಡುವುದರಿಂದ ಶೇಖರಣೆ ಸಮಯದಲ್ಲಿ ಗಡ್ಡೆ ಕೊಳೆಯುವುದನ್ನು ತಡೆಗಟ್ಟಬಹುದು.
- ಈರುಳ್ಳಿಯನ್ನು ಈ ಭಾಗದ ಅನೇಕ ರೈತರು ಬೆಳೆದಿರುತ್ತಾರೆ. ಅವಶ್ಯಕತೆಗಳ ಆಧಾರದ ಮೇಲೆ ಈರುಳ್ಳಿಯನ್ನು ಕಟಾವು ಮಾಡಲಾಗುತ್ತದೆ. ಗೆಡ್ಡೆಗಳ ಬಣ್ಣಕ್ಕೆ ಆಕರ್ಷಣೆ ಬರುವಂತೆ ಮಾಡಲು ಮತ್ತು ಮಣ್ಣಿನಿಂದ ಬಂದಂತಹ ಉಷ್ಣಾಂಶವನ್ನು ಕಡಿಮೆ ಮಾಡಿ ದಾಸ್ತಾನಿನಲ್ಲಿ ಗೆಡ್ಡೆಗಳು ಕೆಡದಂತೆ ಶೇಖರಿಸಲು ಪರಿಷ್ಕರಣೆ ಅಗತ್ಯವಾಗಿದೆ.