ಕಪ್ಪು ಜೀರಿಗೆಯ ಉಪಯೋಗ..!

ಕಪ್ಪು ಜೀರಿಗೆ ಇದನ್ನು ಭಾರತದಲ್ಲಿ ಹೆಚ್ಚಿನ ಜನರು ಅಡುಗೆಯ ರುಚಿ ಹೆಚ್ಚಿಸಲು ಹಾಗೂ ಪರಿಮಳಕ್ಕಾಗಿ ಬಳಸುತ್ತಾರೆ ಇಂದು ಮಾತ್ರ ತಿಳಿದುಕೊಂಡಿದ್ದಾರೆ ಆದರೆ ಇದರಲ್ಲಿರುವ ಕ್ಯಾಲ್ಸಿಯಂ, zink, ಪೊಟಾಸಿಯಂನಂತ ಹಲವು ಅಂಶಗಳು ಮಾನವನ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ಕೆಲವರು ಅರಿತಿಲ್ಲ ಇದು ನಮಗೆ ಎಷ್ಟು ಆರೋಗ್ಯ ಉಪಯೋಗಕಾರಿ ಎಂಬುದನ್ನು ತಿಳಿಯೋಣ ಬನ್ನಿ.

ಚರ್ಮದ ಆರೋಗ್ಯಕ್ಕೆ : ಚರ್ಮ ಮತ್ತು ಮೊಡವೆಗಳ (Pimple) ಸಮಸ್ಯೆ ಇದ್ದರೆ, ಇದರ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಿ ಹಚ್ಚಿದರೆ, ಚರ್ಮವು ಮೃದುವಾಗುತ್ತದೆ. ಮತ್ತು ಮೊಡವೆಯನ್ನು ಹೋಗಲಾಡಿಸಬಹುದು.

ಹೃದಯಕ್ಕೆ ಪ್ರಯೋಜನಕಾರಿ:ಕಪ್ಪು ಜೀರಿಗೆ ಹೃದಯದ ಆರೋಗ್ಯ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಪ್ರತಿದಿನ ಸುಮಾರು 10 ರಿಂದ 12 ಕಪ್ಪು ಜೀರಿಗೆಯನ್ನು ಹಸು ಅಥವಾ ಮೇಕೆ ಹಾಲಿನೊಂದಿಗೆ ತೆಗೆದುಕೊಂಡರೆ ಹೃದಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತದೆ ಮತ್ತು ಬಿಪಿ ನಿಯಂತ್ರಣದಲ್ಲಿರುತ್ತದೆ.

ಚರ್ಮದ ಆರೋಗ್ಯಕ್ಕೆ : ಚರ್ಮ ಮತ್ತು ಮೊಡವೆಗಳ (Pimple) ಸಮಸ್ಯೆ ಇದ್ದರೆ, ಇದರ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಿ ಹಚ್ಚಿದರೆ, ಚರ್ಮವು ಮೃದುವಾಗುತ್ತದೆ. ಮತ್ತು ಮೊಡವೆಯನ್ನು ಹೋಗಲಾಡಿಸಬಹುದು.

ಜ್ವರ ಮತ್ತು ಫ್ಲೂ ಗುಣಪಡಿಸುತ್ತದೆಇದರ ಉರಿಯೂತ ನಿವಾರಕ, ವೈರಸ್ ನಿವಾರಕ ಹಾಗೂ ಬ್ಯಾಕ್ಟೀರಿಕಾ ನಿವಾರಕ ಗುಣಗಳು ಪ್ರತಿ ಮನೆಯಲ್ಲಿಯೂ ಇರಲೇಬೇಕಾದ ಔಷಧಿಯನ್ನಾಗಿಸಿವೆ. ಒಂದು ವೇಳೆ ಸಾಮಾನ್ಯ ಜ್ವರ, ಫ್ಲೂ ಜ್ವರ ಅಥವಾ ಗಂಟಲಬೇನೆ ಮೊದಲಾದವು ಕಾಣಿಸಿಕೊಂಡರೆ ಈ ಜೀರಿಗೆಯ ಕಷಾಯ ಮಾಡಿ ಕುಡಿದು ದೇಹವನ್ನು ಬೆಚ್ಚಗಿರಿಸಬೇಕು. ಕೆಲವೇ ಹೊತ್ತಿನಲ್ಲಿ ಮೈ ಬೆವರಲು ತೊಡಗುತ್ತದೆ ಹಾಗೂ ದೇಹದ ತಾಪಮಾನ ಕಡಿಮೆಗೊಳಿಸಲು ಹಾಗೂ ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು ನೆರವಾಗುತ್ತದೆ.

ಉರಿಯೂತವನ್ನು ನಿವಾರಿಸಲು: ಜೀರಿಗೆಯು ಹೆಚ್ಚಿನ ಸಂದರ್ಭಗಳಲ್ಲಿಉರಿಯೂತದಿಂದ ರಕ್ಷಿಸಲು, ಗಾಯ ಮತ್ತು ಸೋಂಕಿನಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.ಮತ್ತೊಂದೆಡೆ, ದೀರ್ಘಕಾಲದ ಉರಿಯೂತವು ಮಧುಮೇಹ ಮತ್ತು ಹೃದ್ರೋಗದಂತಹ ವಿವಿಧ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ ಎಂದು ನಂಬಲಾಗಿದೆ .

ಕೀಲು ನೋವನ್ನು ನಿವಾರಿಸುತ್ತದೆ: ಹಳೆಯ ಚಿಕಿತ್ಸೆಯಾಗಿದೆ. ಒಂದು ಹಿಡಿ ಕಪ್ಪು ಜೀರಿಗೆಯನ್ನು ತೆಗೆದುಕೊಂಡು ಅದನ್ನು ಸಾಸಿವೆ ಎಣ್ಣೆಯಿಂದ ಚೆನ್ನಾಗಿ ಬಿಸಿ ಮಾಡಿ. ಎಣ್ಣೆ ಹೊಗೆಯಾಡುತ್ತಿರುವಾಗ, ಅದನ್ನು ಹೊರ ತೆಗೆದು ಸ್ವಲ್ಪ ತಣ್ಣಗಾಗಿಸಿ. ಈ ಎಣ್ಣೆಯನ್ನು ನಿಮ್ಮ ಕೈಯಲ್ಲಿ ಸ್ವಲ್ಪ ತೆಗೆದುಕೊಂಡು ನೋವು ಇರುವ ಜಾಗಕ್ಕೆ ನಿಧಾನವಾಗಿ ಲೇಪಿಸಿ. ನಿರಂತರ ಮಸಾಜ್ ಮಾಡುವುದರಿಂದ ನಿಮಗಿರುವ ಕೀಲು ನೋವು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ:ನಿಮಗೆ ಸ್ವಲ್ಪ ಕೊಲೆಸ್ಟ್ರಾಲ್ ಅಗತ್ಯವಿದ್ದರೂ, ಹೆಚ್ಚಿನ ಹೃದ್ರೋಗ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಲೋಂಜಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ವಿಶೇಷವಾಗಿ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಕಲೋಂಜಿಯನ್ನು ಬಳಕೆ ಮಾಡುವುದು ಕೆಟ್ಟ ಅಥವಾ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ರಕ್ತ ಟ್ರೈಗ್ಲಿಸರೈಡ್‌ಗಳಲ್ಲಿ ಗಮನಾರ್ಹ ಇಳಿಕೆಗೆ ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group