ಹುಳುಕಡ್ಡಿಗೆ ಮನೆಮದ್ದು.!

ಕೆಲವೊಂದು ಸಲ ತುರಿಕಚ್ಚಿಯಿಂದಾಗಿ ಜ್ವರ ಕಾಣಿಸಿಕೊಳ್ಳಬಹುದು ಮತ್ತು ಕೆಲವು ಸಲ ಅಂಗಾಂಗಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಇದು ದೊಡ್ಡ ಮಟ್ಟದ ಸಾಂಕ್ರಾಮಿಕ ರೋಗವಾಗಿರುವ ಕಾರಣದಿಂದಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ರಿಂಗ್ ವರ್ಮ್ (ತರ್ದು ಅಥವಾ ದದ್ದು, ದರ್ದು, ಹುಳುಕಡ್ಡಿ ಎಂದು ಕರೆಯುತ್ತಾರೆ) ನಿವಾರಣೆ ಮಾಡುವಂತಹ ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕ್ರೀಮ್‌ಗಳು ಕೆಲವೊಂದು ಸಲ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಆದರೆ ಸ್ವಲ್ಪ ದಿನ ಬಿಟ್ಟು ಇದು ಮತ್ತೆ ಕಾಣಿಸಿಕೊಳ್ಳಬಹುದು.
ಬೆಳ್ಳುಳ್ಳಿ :ಬೆಳ್ಳುಳ್ಳಿಯನ್ನು ಸಹ ರಿಂಗ್ ವರ್ಮ್ ಚಿಕಿತ್ಸೆಗೆ ಬಳಸಬಹುದು. ಇದರಲ್ಲಿರುವ ಸಂಯುಕ್ತಗಳು ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೋಂಕನ್ನು ಶಮನಗೊಳಿಸಲು ಮತ್ತು ಅದನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಬೆಳ್ಳುಳ್ಳಿಯ 3-4 ಎಸಳುಗಳನ್ನು ತೆಗೆದುಕೊಂಡು ಪೇಸ್ಟ್ ರೀತಿ ಮಾಡಿಟ್ಟುಕೊಳ್ಳಿ. ಇದನ್ನು ಸೋಂಕಾದ ಜಾಗದ ಮೇಲೆ ಉಜ್ಜಿ, 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
ಶುಂಠಿ:ಶಿಲೀಂಧ್ರ ವಿರೋಧಿ ಗುಣವು ಹೆಚ್ಚಾಗಿರುವಂತಹ ಶುಂಠಿಯು ರಿಂಗ್ ವರ್ಮ್‌ನ ಸೋಂಕು ನಿವಾರಣೆ ಮಾಡುವಲ್ಲಿ ತುಂಬಾ ಸುರಕ್ಷಿತವಾಗಿರುವ ಮನೆಮದ್ದಾಗಿದೆ. ಶುಂಠಿಯ ಪೇಸ್ಟ್ ಅನ್ನು ಬಳಸಿಕೊಳ್ಳುತ್ತಾ ಇದ್ದರೆ ಶಿಲೀಂಧ್ರದ ಸೋಂಕು ಕಡಿಮೆಯಾಗುವುದು. ಶುಂಠಿಯನ್ನು ಹಾಗೆ ಜಗಿದು ತಿನ್ನಬಹುದು ಅಥವಾ ಚಹಾದೊಂದಿಗೆ ಮಿಶ್ರಣ ಮಾಡಿಕೊಂಡು ತಿನ್ನಬಹುದು ಅಥವಾ ದಿನದಲ್ಲಿ 2-3 ಸಲ ಶುಂಠಿ ಪೇಸ್ಟ್ ನ್ನು ಭಾದಿತ ಜಾಗಕ್ಕೆ ಬಳಸಿ ಸೋಂಕು ನಿವಾರಣೆ ಮಾಡಬಹುದು.
ಅರಿಶಿನ: ಪ್ರತಿಯೊಬ್ಬರ ಮನೆಯಲ್ಲೂ ಅರಿಶಿನ ಪುಡಿ ಅಥವಾ ಅರಿಶಿನ ಕೊಂಬು ಇದ್ದೇ ಇರುತ್ತದೆ. ಗಾಯವನ್ನು ವಾಸಿ ಮಾಡುವ ಗುಣ ಲಕ್ಷಣ ಅರಿಶಿನದಲ್ಲಿ ಕಂಡು ಬರುತ್ತದೆ ಇದಕ್ಕೆ ಕಾರಣ ಅರಿಶಿನದಲ್ಲಿ ಇರುವ ಕ್ಯೂರ್ಕ್ಯುಮಿನ್ ಎಂಬ ಔಷಧೀಯ ಸ್ವರೂಪ.ಬೇರೆ ಬಗೆಯ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಅರಿಶಿನ ದಲ್ಲಿರುವ ಕ್ಯೂರ್ಕ್ಯುಮಿನ್ ತುಂಬಾ ಶಕ್ತಿಯುತವಾದ ಆಂಟಿ – ಸೆಪ್ಟಿಕ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳನ್ನು ಒಳಗೊಂಡಿದೆ. ಹಾಗಾಗಿ ಚರ್ಮದ ಮೇಲೆ ಸೋಂಕು ಹರಡುವಿಕೆಯನ್ನು ಇದು ತಡೆಗಟ್ಟುತ್ತದೆ.
ಚೆಂಡು ಹೂವು: ಹಲವಾರು ಮಂದಿ ಹುಳಕಡ್ಡಿ, ತುರಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿರುತ್ತಾರೆ. ಇದಕ್ಕೆಲ್ಲ ಇದೀಗ ಒಂದೇ ಪರಿಹಾರವೆಂದರೆ ಮಾರಿಗೋಲ್ಡ್ ಹೂವುಗಳು ಮತ್ತು ಎಲೆಗಳು. ಮಾರಿಗೋಲ್ಡ್ ಹೂವು ಅಂದರೆ ಚೆಂಡು ಹೂ. ಹೂವುಗಳು ಭಾರತೀಯ ಸಂಸ್ಕೃತಿಯಲ್ಲಿ ಅಗ್ರಸ್ಥಾನ ಹೊಂದಿವೆ. ಇವುಗಳಿಲ್ಲದೆ ಯಾವುದೇ ಸಭೆ ಸಮಾರಂಭಗಳು ಪೂರ್ಣವಾಗುವುದಿಲ್ಲ. ಈ ಹೂವುಗಳಲ್ಲಿ ಪ್ರಮುಖವಾದದ್ದು ಎಂದರೆ ಚೆಂಡು ಹೂ. ಭಾರತದಲ್ಲಿ ಈ ಹೂವನ್ನು ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಮುಂತಾದ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ . ಇದು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಹಲವಾರು ಉಪಯೋಗಗಳನ್ನು ಹೊಂದಿದೆ.
ತುಳಸಿ:ತುಳಸಿಯಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ಈಗಾಗಲೇ ಹಲವಾರು ಸಂಶೋಧನೆಗಳಿಂದ ತಿಳಿದುಬಂದಿದೆ. ತುಳಸಿಯಲ್ಲಿ ಇರುವಂತಹ ಹಲವಾರು ರೀತಿಯ ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತುರಿಕಚ್ಚಿಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ ಭಾದಿತ ಪ್ರದೇಶಕ್ಕೆ 2-3 ಸಲ ಹಚ್ಚಿದರೆ ಸೋಂಕು ನಿವಾರಣೆಯಾಗುವುದು
ಅಲೋವೆರಾ:ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುಂಬಾ ಲಾಭಕಾರಿ ಮತ್ತು ಬಹುಮುಖ ಗುಣ ಹೊಂದಿರುವಂತಹ ಅಲೋವೆರಾವು ರಿಂಗ್ ವರ್ಮ್ ನಿವಾರಣೆ ಮಾಡಲು ತುಂಬಾ ಸಹಕಾರಿಯಾಗಲಿದೆ. ಹಲವಾರು ಚಿಕಿತ್ಸಕ ಗುಣ ಹೊಂದಿರುವ ಅಲೋವೆರಾವು ಚರ್ಮಕ್ಕೆ ತುಂಬಾ ಒಳ್ಳೆಯದು ಮತ್ತು ಇದು ತುರಿಕಚ್ಚಿಗೆ ತುಂಬಾ ಪರಿಣಾಮಕಾರಿಯಾಗುವುದು. ಅಲೋವೆರಾ ಎಲೆಯನ್ನು ತುಂಡು ಮಾಡಿ ಅದರಲ್ಲಿರುವ ಲೋಳೆಯನ್ನು ತೆಗೆದು ಭಾದಿತ ಪ್ರದೇಶಕ್ಕೆ ರಾತ್ರಿ ವೇಳೆ ಹಚ್ಚಿಕೊಳ್ಳಿ. ನಿಯಮಿತವಾಗಿ ಬಳಸಿದರೆ ರಿಂಗ್ ವರ್ಮ್‌ನ ಸಮಸ್ಯೆ ಬೇಗನೇ ನಿವಾರಣೆಯಾಗುವುದು.