ಅಲೋವೆರಾದ ಪ್ರಯೋಜನಗಳು..!

ಈ ಅಲೋವೆರಾವನ್ನು ಯಾವ ರೀತಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಅಲೋವೆರಾವನ್ನು ಹೇಗೆಂದರೆ ಹಾಗೆ ಬಳಸುವಂತಿಲ್ಲ ಅದು ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅಲೋವೆರಾ ಬಳಸಬೇಕೆಂದರೆ ಈ ಹಳದಿ ರಸವನ್ನು ತೆಗೆದು ಬಳಸಬೇಕು.
ಒಂದು ವೇಳೆ ಹಾಗೆ ಬಳಸಿದರೆ ಚರ್ಮ ತುರಿಕೆ ಮತ್ತು ಸ್ಕಿನ್ ಬ್ಲೀಚಿಂಗ್ ಗೆ ಮತ್ತು ಸ್ಕಿನ್ ಗೆ ರಿಡ್ ನೆಸ್ ಗೆ ಆಗಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಇದು ಎದೆ ಉರಿಗೆ ಹೊಟ್ಟೆ ಉರಿಗೆ ಹಾಗೆ ಗಂಟಲು ನೋವಿಗೆ ಕಾರಣವಾಗುತ್ತದೆ. ಅಲೋವೆರಾವನ್ನು ಸುಮಾರು 9 ಭಾರಿ ನೀರಿನಿಂದ ತೊಳೆಯಬೇಕು ಅದರ ಮೇಲಿನ ಹಳದಿ ಬಣ್ಣ ಹೋದ ನಂತರ ಅದನ್ನು ಸೇವಿಸಬಹುದು.
ಕಣ್ಣಿನ ಕೆಳಗಿನ ಕಪ್ಪುಕಲೆ ನಿವಾರಣೆ : ಕಣ್ಣಿನ ಕೆಳಗೆ ಉಂಟಾಗುವ ಕಪ್ಪು ವರ್ತುಲಗಳು,ಕಲೆಗಳನ್ನು ಅಲೋವೆರಾ ಹೋಗಲಾಡಿಸುತ್ತೆ. ಡಾರ್ಕ್ ಸರ್ಕಲ್ಸ್ ಅಷ್ಟೇ ಅಲ್ಲದೇ ಟಿವಿ ಅಥವಾ ಕಂಪ್ಯೂಟರ್‌ನ ದೀರ್ಘಸಮಯ ನೋಡುವುದರಿಂದ ಉಂಟಾಗುವ ಕಣ್ಣಿನ ನೋವನ್ನು ಸಹ ಶಮನಗೊಳಿಸುತ್ತದೆ. ಇದು ಪ್ರಕೃತಿಯ ಸಹಜ ಬೆಳಕು ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವುದರಿಂದ ಇದು ಕಣ್ಣುಗಳ ಸುತ್ತಲೂ ಇರುವ ತೆಳುವಾದ ಮತ್ತು ಹೆಚ್ಚು ಸೂಕ್ಷ್ಮ ಚರ್ಮಕ್ಕೆ ಹೆಚ್ಚಿನ ಅಪಾಯಗಳನ್ನುಂಟು ಮಾಡದೆ ಕಣ್ಣುಗಳ ಕೆಳಗಿನ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
ಚರ್ಮದ ಹೊಳಪು:ಚರ್ಮದ ಸೌಂದರ್ಯವನ್ನು ಸುಧಾರಿಸಲು ಬಯಸಿದರೆ, ಅಲೋವೆರಾ ಜೆಲ್ ಅನ್ನು ಬಳಸುವುದು ಉತ್ತಮ. ನಿಮ್ಮ ಮುಖದಿಂದ ಧೂಳು, ಕೊಳಕು, ಡೆಡ್ ಸ್ಕಿನ್ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ಇದು ತುಂಬಾ ಸಹಾಯಕವಾಗಿದೆ. ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೆ ಆಕರ್ಷಣೀಯವಾಗಿಸುತ್ತದೆ.
ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ:ಅಲೋವೆರಾವನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಕ್ಕೆಸಹಾಯಕರವಾಗಿರುತ್ತದೆ. ಏಕೆಂದರೆ ಈ ಸಸ್ಯವು ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶದ ವಿರುದ್ಧ ಪ್ರಬಲವಾಗಿ ಹೋರಾಡುತ್ತದೆ ಎಂದು ನಂಬಲಾಗಿದೆ. ಅಲೋವೆರಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ. ಅಂದರೆ ನೀವು ಆಗಾಗ ಹೆಚ್ಚಾಗಿ ತಿನ್ನುವ ಅಗತ್ಯವನ್ನು ನಿವಾರಿಸುತ್ತದೆ.
ಅಜೀರ್ಣ ಸಮಸ್ಯೆ – ಅಜೀರ್ಣ ಸಂಬಂಧೀ ಸಮಸ್ಯೆಗಳಾದ ಮಲಬದ್ಧತೆ, ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅಲೋವೆರಾ ಜ್ಯೂಸ್ ಪ್ರತಿನಿತ್ಯ ಕುಡಿಯುವುದರಿಂದ ಪರಿಹಾರ ಸಿಗುವುದು.
ರಾತ್ರಿ ವೇಳೆ ಕ್ರೀಮ್ ಆಗಿ ಬಳಸಿಬೇಸಗೆ ಕಾಲದಲ್ಲಿ ನೀವು ಮುಖಕ್ಕೆ ತುಂಬಾ ಜಿಡ್ಡಿನ ಕ್ರೀಮ್ ಬಳಸಿಕೊಂಡರೆ ಅದರಿಂದ ತುಂಬಾ ಸಮಸ್ಯೆ ಆಗಬಹುದು. ಯಾಕೆಂದರೆ ಉಷ್ಣತೆ ಹೆಚ್ಚಿರುವುದು ಮತ್ತು ಬೆವರುವುದು. ಹೀಗಾಗಿ ಮುಖಕ್ಕೆ ಈ ಸಮಯದಲ್ಲಿ ನೀವು ಜಿಡ್ಡಿನ ಕ್ರೀಮ್ ಬಳಸಬೇಡಿ. ರಾತ್ರಿ ಮಲಗಲು ಹೋಗುವ ಮೊದಲು ನೀವು ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಇದು ಚರ್ಮದಲ್ಲಿ ನಿಧಾನವಾಗಿ ಹೀರಿಕೊಳ್ಳುವುದು ಮತ್ತು ಚರ್ಮಕ್ಕೆ ಬೇಕಾಗುವಂತಹ ಮೊಶ್ಚಿರೈಸ್ ನ್ನು ಇದು ಒದಗಿಸುವುದು. ಈ ಲೋಳೆಯು ಚರ್ಮವನ್ನು ತುಂಬಾ ತಂಪಾಗಿಡಲು ನೆರವಾಗುವುದು.
ದುರ್ಗಂಧ ದೂರ ಮಾಡುವುದರಲ್ಲಿ ಇದರ ಪ್ರಯೋಜನ ಬಹಳ. ರಾಸಾಯನಿಕಯುಕ್ತ ಮೌತ್‌ವಾಶ್‌ಗಳನ್ನು ನಿತ್ಯ ಬಳಸುವುದಕ್ಕಿಂತಲೂ, ನ್ಯಾಚುರಲ್ ಆಗಿ ಸಿಗುವಂಥ ಅಲೋವೆರಾ ಜೆಲ್ ಅನ್ನು ಬಳಸಿದರೆ, ಒಳ್ಳೆಯ ಫಲಿತಾಂಶ ಸಿಗುತ್ತದೆ.