ಹಿಮೋಗ್ಲೋಬಿನ್ ಹೆಚ್ಚಲು ಇವುಗಳನ್ನು ಸೇವಿಸಿ..!

ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾದಾಗ ದೈನಂದಿನ ಕೆಲಸ ಮಾಡುವಾಗ ಸುಸ್ತು, ಖಿನ್ನತೆ, ನಿರಾಸಕ್ತಿ ಮುಂತಾದ ಸಮಸ್ಯೆ ಕಂಡು ಬರುವುದು. ದೇಹದಲ್ಲಿ ರಕ್ತ ಕಣಗಳು ಕಡಿಮೆಯಾಗುವುದು ಜೀವಕ್ಕೆ ಅಪಾಯಕಾರಿಯಾದ ವಿಷಯವಾದರೂ, ಸರಿಯಾದ ಆಹಾರಕ್ರಮದಿಂದ ದೇಹದಲ್ಲಿ ಹಿಮೋಗ್ಲೋಬಿನ್ ಕಣಗಳನ್ನು ಹೆಚ್ಚಿಸಬಹುದು.

ದಾಳಿಂಬೆ ರಸವನ್ನು ಪ್ರತಿದಿನ ಕುಡಿಯಿರಿ:ದಾಳಿಂಬೆಯು ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಜೊತೆಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ. ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಇದು ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ವ್ಯವಸ್ಥಿತವಾಗಿ ಕಾಪಾಡಿಕೊಳ್ಳಲು ದಾಳಿಂಬೆ ರಸವನ್ನು ಪ್ರತಿದಿನ ಕುಡಿಯಿರಿ.

ಗೋಡಂಬಿ : ಗೋಡಂಬಿಯನ್ನು (Cashew) ಬಹುತೇಕ ಎಲ್ಲಾ ರೀತಿಯ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಇದು ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಲಘು ಆಹಾರವಾಗಿಯೂ ಸೇವಿಸಬಹುದು. ಒಂದು ಮುಷ್ಠಿ ಗೋಡಂಬಿಯಲ್ಲಿ 1.89 ಮಿಗ್ರಾಂ ಕಬ್ಬಿಣದ ಅಂಶವಿರುತ್ತದೆ. ಇದು ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ.

ಧಾನ್ಯಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ. ರಕ್ತದ ಹಿಮೋಗ್ಲೋಬಿನ್ ಮತ್ತು ಸೀರಮ್ ಫೆರಿಟಿನ್ ಮಟ್ಟವು ಸುಧಾರಿಸುತ್ತದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.(Pixabay)

ಸೊಪ್ಪನ್ನು ಸೇವಿಸಿ:ಕಬ್ಬಿಣದಲ್ಲಿ ಸಮೃದ್ಧವಾಗಿರುವ ಸೊಪ್ಪುಗಳು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.ಖರ್ಜೂರದಲ್ಲಿರುವ ಕಬ್ಬಿಣದ ಅಂಶವು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಖರ್ಜೂರದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಫೋಲಿಕ್ ಆಸಿಡ್ ಇರುವುದರಿಂದ ಕಬ್ಬಿಣದ ಜೊತೆಗೆ ದೇಹದ ಅಗತ್ಯಗಳಿಗೆ ಸಾಕಾಗುತ್ತದೆ.ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಆಹಾರದಲ್ಲಿ ಖರ್ಜೂರವನ್ನು ಸೇವಿಸುವುದರಿಂದ ಕೆಂಪು ರಕ್ತ ಕಣಗಳ ರಚನೆಯು ಸುಧಾರಿಸುತ್ತದೆ. ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಕಬ್ಬಿಣದ ಪೂರಕಗಳು;ಅತ್ಯಂತ ಕಡಿಮೆ ಮಟ್ಟದ ಹಿಮೋಗ್ಲೋಬಿನ್ ಹೊಂದಿರುವ ವ್ಯಕ್ತಿಗೆ ಕಬ್ಬಿಣದ ಪೂರಕಗಳನ್ನು ತೆಗೆದುಕೊಳ್ಳಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ವಾಸ್ತವವಾಗಿ, ಅತಿಯಾದರೆ ಅಮೃತವು ವಿಷ ಎಂಬಂತೆ, ಅತಿ ಹೆಚ್ಚು ಕಬ್ಬಿಣವು ದೇಹಕ್ಕೆ ಅಪಾಯಕಾರಿ. ಇದು ಕೆಲವೊಮ್ಮೆ ಹಿಮೋಕ್ರೊಮಾಟೋಸಿಸ್ಗೆ ಕಾರಣವಾಗಬಹುದು. ಇದರ ಪರಿಣಾಮ ನಿಮ್ಮ ಯಕೃತ್ತಿಗೆ ಸಮಸ್ಯೆ, ಮಲಬದ್ಧತೆ, ವಾಕರಿಕೆ ಮತ್ತು ವಾಂತಿಯಂತಹ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.

ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸಲು ವೈದ್ಯರು ಕೆಲವು ಪೂರಕಗಳನ್ನು ಒಂದೆರಡು ತಿಂಗಳುಗಳ ಕಾಲ ಶಿಫಾರಸ್ಸು ಮಾಡುತ್ತಾರೆ.

ತರಕಾರಿಗಳುಬೀಟ್ ರೂಟ್, ಪಾಲಾಕ್, ಇತರ ಸೊಪ್ಪು, ರಾಜ್ಮಾ, ಕ್ಯಾಬೇಜ್, ಸಿಹಿ ಗೆಣಸು, ಹೂಕೋಸು, ಬ್ರೊಕೋಲಿ, ಬೀನ್ಸ್, ಬ್ಲ್ಯಾಕ್ ಬೀನ್ಸ್ ಇವೆಲ್ಲಾ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಕಬ್ಬಿಣದಂಶ ಹೆಚ್ಚಾದರೆ ನಮ್ಮ ದೇಹವು ಆಮ್ಲಜನಕವನ್ನು ಹೀರಿಕೊಳ್ಳುತ್ತದೆ, ಇದರಿಂದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುವುದು.

ಬೆಳಗಿನ ಉಪಾಹಾರ ಧಾನ್ಯ:ಅನೇಕ ಉಪಾಹಾರ ಧಾನ್ಯಗಳು ನಮ್ಮ ಆಹಾರಕ್ರಮದಲ್ಲಿ ಸಾಮಾನ್ಯವಾಗಿ ಕೊರತೆಯಿರುವ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಬಲಗೊಳ್ಳುತ್ತವೆ. ಆದ್ದರಿಂದ ಹೆಚ್ಚಿನ ಸಿರಿಧಾನ್ಯಗಳು ಕಬ್ಬಿಣ ಮತ್ತು ಫೋಲಿಕ್ ಆಮ್ಲವನ್ನು ಒಳಗೊಂಡಿರುತ್ತವೆ, ಆದರೆ ವಿಷಯವು ವಿಭಿನ್ನ ಬ್ರಾಂಡ್‌ಗಳಲ್ಲಿ ಬಹಳ ವ್ಯತ್ಯಾಸಗೊಳ್ಳುತ್ತದೆ. ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದುವುದು ಇದು ಮುಖ್ಯವಾಗಿಸುತ್ತದೆ, ಏಕೆಂದರೆ ಅನೇಕ ಧಾನ್ಯಗಳು ಸಾಕಷ್ಟು ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಫೋಲೇಟ್ ಅನ್ನು ಹೊಂದಿರುತ್ತವೆ ಮತ್ತು ಅವು ಹೆಚ್ಚಿನ ಜೈವಿಕ ಲಭ್ಯತೆಯನ್ನು ಹೊಂದಿರುತ್ತವೆ. ಅದೇ ಸಮಯದಲ್ಲಿ, ಬಲವರ್ಧಿತ ಪೋಷಕಾಂಶಗಳನ್ನು ಸಮರ್ಥವಾಗಿ ಚಯಾಪಚಯಗೊಳಿಸಲಾಗುವುದಿಲ್ಲ, ಆದ್ದರಿಂದ ಅಂತಹ ಆಹಾರಗಳನ್ನು ಬ್ಯಾಕಪ್‌ನಂತೆ ಬಳಸುವುದು ಉತ್ತಮ ಆದರೆ ಪೌಷ್ಠಿಕಾಂಶದ ಮುಖ್ಯ ಮೂಲವಾಗಿರಬಾರದು.

ಹಣ್ಣುಗಳುಒಣದ್ರಾಕ್ಷಿ. ಅಂಜೂರ, ಆಪ್ರಿಕಾಟ್, ಸೇಬು, ಕಲ್ಲಂಗಡಿ ಹಣ್ಣು ಇದು ಹಿಮೋಗ್ಲೋಬಿನ್ ಅಂದರೆ ಬಿಳಿ ರಕ್ತಕಣಗಳನ್ನು ಮಾತ್ರವಲ್ಲ, ಬಿಳಿ ರಕ್ತ ಕಣಗಳನ್ನೂ ಹೆಚ್ಚಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group