ಹುಣಸೆ ಹಣ್ಣಿನ ಹಲವು ಪ್ರಯೋಜನಗಳು..!

ಒತ್ತಡದ ಜೀವನಶೈಲಿಯಲ್ಲಿ ಅಸ್ತವ್ಯಸ್ಥವಾಗಿರುವ ಆಹಾರ ಪದ್ಧತಿ, ಪರಿಸರ ಮಾಲಿನ್ಯ ಮತ್ತು ತೀವ್ರ ಒತ್ತಡದಿಂದಾಗಿ ಕ್ರೋಢೀಕರಣಗೊಂಡ ಕಲ್ಮಶದಿಂದಾಗಿ ನಮ್ಮ ದೇಹದಲ್ಲಿರುವ ಜೀವಾಣು ವಿಷಗಳಿಗೆ ಕಾರಣವಾಗಿದೆ. ನೀರಿನಲ್ಲಿ ಕರಗುವ ಜೀವಾಣು ವಿಷಗಳು ಮೂತ್ರ, ಮಲ ಮತ್ತು ಬೆವರಿನ ಮೂಲಕ ಸುಲಭವಾಗಿ ಹೊರಹೋಗುತ್ತವೆ. ಆದರೆ ಕೆಲವು ಹಾಗೆ ಮಾಡಲು ವಿಫಲವಾಗುತ್ತವೆ. ಸರಿಯಾದ ಪಥ್ಯಕ್ರಮ ಮತ್ತು ವ್ಯಾಯಾಮದಿಂದ ಇಂತ ಜೀವಾಣು ವಿಷವನ್ನು ಹೊರಹಾಕಬಹುದು. ಆದಾಗ್ಯೂ ಕೊಬ್ಬಿನಲ್ಲಿ ಕರಗುವ ಜೀವಾಣು ವಿಷವನ್ನು ಸುಲಭವಾಗಿ ತೆಗೆಯಲು ಸಾಧ್ಯವಾಗದೆ ಇದ್ದಾಗ ಸಮಸ್ಯೆ ಉದ್ಭವ ಆಗುವುದು. ಆಗ ಅನಗತ್ಯ ಕೊಬ್ಬುಗಳು ಹೊಟ್ಟೆ, ಸೊಂಟ ಮತ್ತು ತೊಡೆಯಲ್ಲಿ ಶೇಖರಣೆಯಾಗುತ್ತದೆ. ಅಂತಹ ಸಮಸ್ಯೆಗಳಿಗೆ ಈ ಹುಣಸೆ ಹಣ್ಣು

ಹುಣಸೆ ಹಣ್ಣಿನಲ್ಲಿರುವ ನಾರಿನಾಂಶ ಕೊಲೆಸ್ಟ್ರಾಲನ್ನು ಮರು ಹೀರಿಕೊಳ್ಳಲು ಸಹಾಯಮಾಡುತ್ತದೆ ಜೊತೆಗೆ ದೇಹದಲ್ಲಿರುವ ಕೆಟ್ಟ ಅಥವಾ ಕೊಲೆಸ್ಟ್ರಾಲ್ ಮಟ್ಟವನ್ನು ವಿಸರ್ಜಿಸಲು ಸಹಾಯಮಾಡುತ್ತವೆ.

ಇಮ್ಯುನಿಟಿ ಬೂಸ್ಟರ್: ಹುಣಸೆ ಹಣ್ಣು ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ವೈರಲ್ ಸೋಂಕನ್ನು ದೇಹದಿಂದ ದೂರವಿರಿಸುತ್ತದೆ. ಇದನ್ನು ತಿನ್ನುವುದರಿಂದ ಮುಖದ ಮತ್ತು ಕೂದಲು ಕಾಂತಿಯುತವಾಗುತ್ತದೆ.

ಶೀತಕ್ಕೆ ಹುಣಸೆ ಹಣ್ಣು ರಾಮಬಾಣ. ಹುಣಸೆಹಣ್ಣಿನ ರಸಕ್ಕೆ ಬೆಲ್ಲ, ಸ್ವಲ್ಪ ಉಪ್ಪು, ಕಾಳು ಮೆಣಸು ಸೇರಿಸಿ ಸೂಪು ತಯಾರಿಸಿ ಕುಡಿಯಬೇಕು. ಚರ್ಮದಲ್ಲಿ ತುರಿಕೆ, ನಂಜು, ನವೆಯುಂಟಾಗಿದ್ದರೆ ಹುಣಸೆ ರಸವನ್ನು ಆ ಜಾಗದಲ್ಲಿ ಉಜ್ಜಿದರೆ ತುರಿಕೆ ವಾಸಿಯಾಗುತ್ತದೆ. ಹೆಂಗಸರಲ್ಲಿ ಬಿಳಿದ್ರವದ ಸಮಸ್ಯೆಗೆ ಹುಣಸೆ ಬೀಜವನ್ನು ಎರಡು ದಿನಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಹಾಲಿನ ಜೊತೆ ಅರೆದು ಕುಡಿಯಬೇಕು.

ಹುಣಸೆಹಣ್ಣು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ (Blood Sugar) ಕಡಿಮೆಯಾಗುತ್ತದೆ. ಆದ್ದರಿಂದ ಯಾವುದೇ ಶಸ್ತ್ರಚಿಕಿತ್ಸೆಗೆ ಸುಮಾರು ಎರಡು ವಾರಗಳ ಮೊದಲು ಹುಣಸೆ ಹಣ್ಣಿನ ಬಳಕೆಯನ್ನು ನಿಲ್ಲಿಸಬೇಕು. ಇದರ ಬಳಕೆಯಿಂದ ಶಸ್ತ್ರಚಿಕಿತ್ಸೆ ನಂತರ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಕಷ್ಟವಾಗಬಹುದು.

  • ಇತರ ಪ್ರಯೋಜನಗಳು:

* ಹುಣಸೆ ಹಣ್ಣು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತಗೆ ದೇಹಕ್ಕೆ ಅಗತ್ಯವಾದ ಜೀವಸತ್ವ , ಖನಿಜಗಳು, ಫೈಬರ್ಗಳನ್ನು ಒದಗಿಸುತ್ತದೆ.

* ಹುಣಸೆ ಹಣ್ಣು ಗಂಟಲು ನೋವು ಅಥವಾ ಗಂಟಲು ಹುಣ್ಣನ್ನು ನಿವಾರಿಸುವುದು.

* ಹುಣಸೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಇರುವುದರಿಂದ ಕ್ಯಾನ್ಸರ್ ಅನ್ನು ತಡೆಯುವುದು.

* ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಅದ್ಭುತ ಚಿಕಿತ್ಸೆಯ ರೂಪದಲ್ಲಿ ನಿವಾರಿಸುತ್ತದೆ.

* ಹುಣಸೆ ಹಣ್ಣಿನ ರಸವು ಸಂಧುನೋವು, ಮೊಣಕಾಲು ನೋವು ಸೇರಿದಂತೆ ಇನ್ನಿತರ ಜಂಟಿ ನೋವುಗಳನ್ನು ನಿಯಂತ್ರಿಸುವುದು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group