ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಲು ಸಹಾಯಧನ ನೀಡಲು ಅರ್ಜಿ ಆಹ್ವಾನ

ಹೌದು, ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದಕ್ಕಾಗಿ 2 3.50 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ:
ಈ ಯೋಜನೆಯಡಿಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ವೆಚ್ಚದಲ್ಲಿ ತೆರೆದ ಬಾವಿಗಳ ಮೂಲಕ ನೀರಾವರಿ ಸೌಲಭ್ಯ ನೀಡಲಾಗುವುದು. ಭೂ ಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಸಾಮೂಹಿಕ ಯೋಜನಾ ಘಟಕ ವೆಚ್ಚದ ಮಿತಿಯಲ್ಲಿ ಪೈಪ್ ಲೈನ್ ಮೂಲಕ ಏತ ನೀರಾವರಿ ಸೌಲಭ್ಯ ಒದಿಗಸಲಾಗುವುದು.
ಅರ್ಜಿ ಯಾರು ಸಲ್ಲಿಸಬೇಕು?ಹಿಂದುಳಿದ ವರ್ಗಗಳ ಪ್ರವರ್ಗ -3ಎನಲ್ಲಿ ಬರುವ ಒಕ್ಕಲಿಗ, ಸರ್ಪ ಒಕ್ಕಲಿಗ, ವಕ್ಕಲಿಗ, ಗಂಗಡ್ ಕಾರ್ ಒಕ್ಕಲಿಗ, ನಾಮದಾರಿ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ದಾಸ್ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾ, ಗೌಡರ್, ರೆಡ್ಡಿ, ನಾಮಧಾರಿ ಗೌಡ, ಉತ್ತಮ ಕೊಳಗ, ಉಪ್ಪಿನ ಕೊಳಗ ಒಕ್ಕಲಿಗ ಸಮುದಾಯದ ರೈತರು ಅರ್ಜಿ ಸಲ್ಲಿಸಬಹುದು.
ದಾಖಲಾತಿಗಳು:
ಅರ್ಜಿದಾರರು 2 ಪಾಸ್ ಪೋರ್ಟ್ ಅಳತೆಯ ಫೋಟೊ ನೀಡಬೇಕು. ಜಾತಿ ಮತ್ತು ಆಧಾಯ ಪ್ರಮಾಣ ಪತ್ರಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿದ ಪ್ರತಿ ಲಗತ್ತಿಸಬೇಕು. ಕಂದಾಯ ಇಲಾಖೆಯ ತಹಶೀಲ್ದಾರ / ಉಪ ತಹಶೀಲ್ದಾರ ಇವರು ನೀಡಿದ ಅರ್ಜಿದಾರರ ಭೂ ಹಿಡುವಳಿ, ಸಣ್ಣ ಹಾಗೂ ಅತೀ ಸಣ್ಣ ರೈತರ ದೃಢೀಕಕರಣ ಪತ್ರ ಲಗತ್ತಿಸಬೇಕು. ಹಾಲಿ ಜಮೀನಿನಲ್ಲಿ ನೀರಾವರಿ ಸೌಲಭ್ಯಯಿಲ್ಲದೆ ಇರುವ ಬಗ್ಗೆ ಕಂದಾಯ ಇಲಾಖಾ ಅಧಿಕಾರಿಗಳಿಂದ ದೃಢೀಕರಣ ಪತ್ರ ಲಗತ್ತಿಸಬೇಕು.ರೇಷನ್ ಕಾರ್ಡ್ ಝರಾಕ್ಸ್ ಪ್ರತಿ ಲಗತ್ತಿಸಬೇಕು. ವಾಸಸ್ಥಳ ಪ್ರಮಾಣ ಪತ್ರ, ಜಮೀನಿನ ಪಹಣಿ ಪ್ರಮಾಣ ಪತ್ರ ಲಗತ್ತಿಸಬೇಕು. ಅರ್ಜಿದಾರರ ಹೆಸರಿನಲ್ಲಿ ಜಮೀನಿನ ಖಾತಾ ಆಗಿರುವ ಬಗ್ಗೆ ಖಾತಾ ಉದ್ದರಣಾ ಎಕ್ಸ್ ಟ್ರಾಕ್ಟ್ ಲಗತ್ತಿಸಬೇಕು. ಕುಟುಂಬದ ವಂಶವೃಕ್ಷ ಲಗತ್ತಿಸಬೇಕು