ಮೊಡವೆಗಳಿಗೆ ಕೆಲವು ಮನೆಮದ್ದು!

ಮೊಡವೆಗಳು ಬಂದರೂ ಅವುಗಳ ಕಲೆ ಉಳಿಯದಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹೆಚ್ಚು ಕರಿದ ಪದಾರ್ಥಗಳ ಸೇವನೆ ಬೇಡ. ಮಲಬದ್ಧತೆಯ ತೊಂದರೆಯಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳಬೇಕು. ದಿನಕ್ಕೆ ನಾಲ್ಕೈದು ಬಾರಿ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಮುಖದಲ್ಲಿ ಜಿಡ್ಡಿನಂಶವಿಲ್ಲದಂತೆ ನೋಡಿಕೊಳ್ಳಬೇಕು. ಮುಖ ಒರೆಸಿಕೊಳ್ಳಲು ಮೃದುವಾದ ಹತ್ತಿ ಬಟ್ಟೆಯನ್ನು ಇಟ್ಟುಕೊಳ್ಳಬೇಕು.
ಸಾಮಾನ್ಯ ಚರ್ಮದವರಿಗೆ ಲೇಪಗಳು
• ಅಮೃತಬಳ್ಳಿಯ ಎಲೆ ಮತ್ತು ಹಣ್ಣುಗಳನ್ನು ಅಥವಾ ಕೇವಲ ಎಲೆಗಳನ್ನು ನುಣ್ಣಗೆ ಅರೆದು ರಾತ್ರಿ ಹೊತ್ತು ಹಚ್ಚಿಕೊಳ್ಳಬೇಕು. ಒಂದು ಗಂಟೆ ನಂತರ ಮುಖ ತೊಳೆಯಬೇಕು. ಕೆಲವೇಳೆ ಮುಖ ತೊಳೆಯದೇ ರಾತ್ರಿಯೆಲ್ಲ ಹಾಗೇ ಬಿಟ್ಟರೂ ಯಾವುದೇ ತೊಂದರೆಯಾಗುವುದಿಲ್ಲ.
• ಸಾಸುವೆ ಎಣ್ಣೆಯಿಂದ ಮುಖಕ್ಕೆ ರಾತ್ರಿ ಹೊತ್ತು ಮಸಾಜ್ ಮಾಡಿಕೊಳ್ಳಬೇಕು.
• ಅರಿಶಿನ, ಮರದರಿಶಿನ, ಮಂಜಿಷ್ಟವನ್ನು ಹಾಲು, ತುಪ್ಪ ಬೆರೆಸಿ ಅರೆದು ಹಚ್ಚಿಕೊಳ್ಳಬೇಕು.
• ಬೇವು, ಲೋಧ್ರ, ಅರಿಶಿನ, ಕೆಂಪು ಶ್ರೀಗಂಧ, ಸುಗಂಧಿ ಬೇರು, ಅತಿಮಧುರ, ಬಜೆ, ಮಂಜಿಷ್ಟ ಪ್ರತಿಯೊಂದನ್ನು 10 ಗ್ರಾಂ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಇದನ್ನು ಮೊಸರಿನಲ್ಲಿ ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಅರ್ಧಗಂಟೆ ಬಿಟ್ಟು ಮುಖ ತೊಳೆಯಬೇಕು.
- ಅಲೋವೇರಾ:ಔಷಧೀಯ ಗುಣಗಳಿಂದ ಸಮೃದ್ಧವಾಗಿರು ಗಿಡ ಅಲೋವೇರಾ (Aloevera). ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಅತೀಮುಖ್ಯ ಅಲೋವೇರಾ. ಅಲೋವೇರಾ ಜ್ಯೂಸ್ (Alovera juice) ಕುಡಿದರೆ ದೇಹದಲ್ಲಿ ರುವ ವಿಷಯುಕ್ತ ವಸ್ತುಗಳು ದೇಹದಿಂದ ಹೊರಕ್ಕೆ ಹೋಗುತ್ತವೆ. ಅಲೋವೇರಾ ಕುಡಿದರೆ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಸಲಹೆಯ ರೂಪದಲ್ಲಿ ಮೇಲಿನ ಮಾಹಿತಿಯನ್ನು ನೀಡಲಾಗಿದೆ. ಇದು ಯಾವುದೇ ಯೋಗ್ಯ ಚಿಕಿತ್ಸಾ ಕ್ರಮಕ್ಕೆ ಇದು ಪರ್ಯಾಯ ಅಲ್ಲ. ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಬಹುದು.
- ಮೊಡವೆಗಳಿಗೆ ಮುಕ್ತಿ ನೀಡಲು ನಿಂಬೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ರಸದ ಕೆಲವು ಹನಿಗಳನ್ನು ನೇರವಾಗಿ ಹಣೆಯ ಮೇಲೆ ಲೇಪಿಸಿದರೆ, ನೀವು ಖಂಡಿತ ಪ್ರಯೋಜನ ಪಡೆಯುತ್ತೀರಿ. ಕೇವಲ 5 ನಿಮಿಷಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
- ಕಲ್ಲಂಗಡಿ ಹಣ್ಣನ್ನು ರಾತ್ರಿ ಮಲಗುವ ಮುನ್ನ ಹಣೆಯ ಮೇಲೆ ಹಚ್ಚಿ(Clean Face) ಮತ್ತು ಬೆಳಿಗ್ಗೆ ಎದ್ದ ನಂತರ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮೊಡವೆಗಳೂ ಮಾಯವಾಗುತ್ತವೆ ಮತ್ತು ತ್ವಚೆಯೂ ಮೃದುವಾಗುತ್ತದೆ.
- ಬೇಳೆ ಹಿಟ್ಟು ಮತ್ತು ಬಾದಾಮಿ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಹಣೆಯ ಮೇಲೆ 15 ನಿಮಿಷಗಳ ಕಾಲ ಹಚ್ಚಿದ ನಂತರ ತೊಳೆಯಿರಿ. ಇದು ನಿಮ್ಮ ಹಣೆಯ ಮೇಲೆ ಬೀಳುವ ಮೊಡವೆಗಳನ್ನು ಕಡಿಮೆ ಮಾಡುತ್ತದೆ.