ಮೊಣಕಾಲು ನೋವನ್ನು ಕಮ್ಮಿ ಮಾಡುವ ಮನೆಮದ್ದುಗಳು

ಮೂಳೆಯ ರಚನೆಯ ಸ್ಥಿರ ದೌರ್ಬಲ್ಯದಿಂದಾಗಿ ಮತ್ತು ದಿನ ಕಳೆದಂತೆ ನಮಗೆ ವಯಸ್ಸಾದಂತೆ ಎದುರಾಗುವ ಮೊಣಕಾಲಿನಲ್ಲಿನ ಕೀಲುಗಳ ಸವೆತ ಮತ್ತು ಹರಿತದಿಂದಾಗಿ ನೀವು ಅನುಭವಿಸುವ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಇದೂ ಸಹ ಒಂದಾಗಿದೆ. ಇತರ ಕೆಲವು ಸಾಮಾನ್ಯ ಕಾರಣಗಳಲ್ಲಿ ಮುರಿತಗಳು, ಅಸ್ಥಿರಜ್ಜು ಉಳುಕು, ಚಂದ್ರಾಕೃತಿ ಗಾಯಗಳು, ಮೊಣಕಾಲಿನ ಒಳಾಂಗಣದ ಪ್ರದೇಶದ ಸ್ಥಳಾಂತರ ಮತ್ತು ಸಂಧಿವಾತ, ಲೂಪಸ್ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದಾಗಿ ಕೀಲುಗಳಲ್ಲಿ ನೋವು ಕಾಣಿಸುತ್ತದೆ. ಇದಕ್ಕೆ ಇಂತಹದೇ ವಯಸ್ಸಿನ ವರ್ಗದ ಜನರು ಎಂದೇನಿಲ್ಲ. ವಯಸ್ಸಾದ ಜನರು, ಯುವ ವಯಸ್ಕರು ಮತ್ತು ಮಕ್ಕಳು ಎಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಮೊಣಕಾಲು ನೋವಿಗೆ ಗುರಿಯಾಗುತ್ತಾರೆ. ಇನ್ನು ಈ ಮೊಣಕಾಲಿನ ನೋವನ್ನು ಉಪಶಮನ ಮಾಡಲು ಕೆಲವು ಮನೆ ಮದ್ದು ಗಳನ್ನು ನೋಡೋಣ ಬನ್ನಿ

#ನೀಲಗಿರಿ ಎಣ್ಣೆ;ಇದೊಂದು ಸುಲಭವಾಗಿ ಸಿಗುವ ಪರಿಣಾಮಕಾರಿ ನೊವು ನಿವಾರಕ ಎಣ್ಣೆಯಾಗಿರುತ್ತದೆ. ಇದು ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿಯನ್ನು ಒದಗಿಸಲು ನೆರವಾಗುತ್ತದೆ. ಇದು ಮೊಣಕಾಲುಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಹೀಗೆ ಇದು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ನೋವು ಇರುವ ಭಾಗಕ್ಕೆ ಇದನ್ನು ನೇರವಾಗಿ ಲೇಪಿಸಿ, ಮಸಾಜ್ ಮಾಡಿ. ಮೊಣಕಾಲು ನೋವಿಗೆ ಇದು ಒಂದು ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

#ವ್ಯಾಯಾಮ ಮತ್ತು ತೂಕ ನಿರ್ವಹಣೆ:ತೀವ್ರವಾದ ಮೊಣಕಾಲು ನೋವಿಗೆ ಪ್ರಮುಖ ಕಾರಣವೆಂದರೆ ಸ್ಥೂಲಕಾಯ. ದೇಹದ ತೂಕ ಹೆಚ್ಚಾದಂತೆ ನೋವಿನ ತೀವ್ರತೆಯು ಹೆಚ್ಚುತ್ತದೆ. ಹಾಗಾಗಿ ದೇಹದ ತೂಕವನ್ನು ನಿರ್ವಹಿಸುವುದು ಬಹಳ ಮುಖ್ಯ. ನಿತ್ಯವೂ ನಿಯಮಿತವಾಗಿ ವ್ಯಾಯಾಮ ಮಾಡುವುದರ ಮೂಲಕ ಮೊಣಕಾಲು ನೋವನ್ನು ನಿಯಂತ್ರಿಸಬಹುದು. ಸಂಧಿವಾತ ಇರುವವರಿಗೆ ನಿಂತಾಗ ಅಥವಾ ಚಲನೆಯನ್ನು ಮಾಡಿದಾಗ ನೋವು ಉಲ್ಬಣಗೊಳ್ಳುತ್ತದೆ. ಹಾಗಾಗಿ ನಿಯಮಿತವಾದ ವ್ಯಾಯಾಮ ಹಾಗೂ ತೂಕ ನಿರ್ವಹಣೆ ನೋವು ನಿವಾರಣೆಗೆ ಪ್ರಮುಖವಾದದ್ದು

#ಶುಂಠಿ:ಶುಂಠಿಯಲ್ಲಿ ಜಿಂಜರಾಲ್ ನಂತಹ ಸಂಯುಕ್ತಗಳ ಉಪಸ್ಥಿತಿಯು ಉರಿಯೂತದ ಮತ್ತು ನೋವು ನಿವಾರಕ ಚಿಕಿತ್ಸೆಯನ್ನು ಕೊಡುವ ಒಂದು ಅದ್ಬುತ ಆಹಾರ ಪದಾರ್ಥವಾಗಿ ಶುಂಠಿಯನ್ನು ಮಾರ್ಪಡಿಸಿದೆ. ಸಂಧಿವಾತ, ಸ್ನಾಯು ಒತ್ತಡ ಅಥವಾ ಗಾಯದಂತಹ ಆರೋಗ್ಯ ಸಮಸ್ಯೆಗಳಿಗೆ, ಶುಂಠಿಯು ಪ್ರಬಲ ಪರಿಹಾರ ಒದಗಿಸುತ್ತದೆ. ಏಕೆಂದರೆ ಇದು ಎಂತಹದೇ ನೋವು ನಿವಾರಣೆಗೆ ಬೇಕಾದರೂ ಸಹಾಯ ಮಾಡುತ್ತದೆ. ಒಂದು ಕಪ್ ಶುದ್ಧ ನೀರಿಗೆ ಸಣ್ಣ ತುಂಡು ತಾಜಾ ಶುಂಠಿಯನ್ನು ಸೇರಿಸಿ ಅದನ್ನು ಒಲೆಯ ಮೇಲೆ ಚೆನ್ನಾಗಿ ಕುದಿಸಿ. ನಿಮಗೆ ಉತ್ತಮ ರುಚಿಯ ಅವಶ್ಯಕತೆ ಇದ್ದಲ್ಲಿ, ನೀವು ಅದಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆ ರಸವನ್ನು ಕೂಡ ಸೇರಿಸಬಹುದು. ನೋವು ಹೋಗುವವರೆಗೆ ನೀವು ಪ್ರತಿ ದಿನ ಎರಡರಿಂದ ಮೂರು ಕಪ್ ಈ ಶುಂಠಿ ಚಹಾವನ್ನು ಸೇವಿಸಬಹುದು. ಇನ್ನೂ ಉತ್ತಮ ಫಲಿತಾಂಶಕ್ಕಾಗಿ ಶುಂಠಿ ರಸದ ಸೇವನೆಯೊಂದಿಗೆ, ನೋವು ಪೀಡಿತ ಮೊಣಕಾಲು ಪ್ರದೇಶವನ್ನು ದಿನಕ್ಕೆ ಎರಡು ಬಾರಿ ಶುಂಠಿ ಎಣ್ಣೆಯಿಂದ ಮಸಾಜ್ ಕೂಡ ಮಾಡಬಹುದು

ಹಣ್ಣುಗಳು :ಕೆಲವು ಹಣ್ಣುಗಳನ್ನು ತಿನ್ನುವುದರಿಂದ ಮಂಡಿ ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇವುಗಳಲ್ಲಿ ಕಿತ್ತಳೆ, ಸ್ಟ್ರಾಬೆರಿ ಮತ್ತು ಚೆರಿ ಹಣ್ಣುಗಳು ಸೇರಿವೆ. ಈ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ನಂತಹ ಪೋಷಕಾಂಶಗಳಿವೆ. ಇದು ಮೂಳೆಗಳ ಊತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

#ಪುದಿನಾ ಎಣ್ಣೆ:ಪುದಿನಾ ಎಣ್ಣೆಯನ್ನು ನಿಮಗೆ ನೋವು ಇರುವ ಮಂಡಿಯ ಮೇಲೆ ಹಾಕಿ ಮಸಾಜ್ ಮಾಡಿ. ಇದರಲ್ಲಿರುವ ತಂಪುಕಾರಕ ಗುಣಗಳು ನೋವನ್ನು ನಿವಾರಿಸುತ್ತದೆ. ಹೀಗಾಗಿ ಪುದಿನಾ ಎಣ್ಣೆಯು ಸಹ ಒಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group