ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೆಲ ಮನೆಮದ್ದು

ಆಂತರಿಕ ಆರೋಗ್ಯ ಮತ್ತು ಬಾಹ್ಯ ಸೌಂದರ್ಯ ಒಂದೇ ನಾಣ್ಯದ ಎರಡು ಮುಖಗಳು, ಅನಾರೋಗ್ಯಕರ ಜೀವನಶೈಲಿ, ನಿದ್ರೆ ಮತ್ತು ವ್ಯಾಯಾಮದ ಕೊರತೆ, ಒತ್ತಡ ಮತ್ತು ಪೌಷ್ಟಿಕಾಂಶದ ಕೊರತೆಗಳು ಚರ್ಮದ ಮೇಲೆ ಪ್ರತಿಫಲಿಸುತ್ತದೆ, ಇದು ಮಂದ ಮತ್ತು ನಿರ್ಜೀವಗೊಳಿಸುತ್ತದೆ. ಆರೋಗ್ಯಕರ, ತಾರುಣ್ಯದ ಚರ್ಮಕ್ಕಾಗಿ ವಿಟಮಿನ್ ಗಳು ಮತ್ತು ಖನಿಜಗಳು ಅತ್ಯಗತ್ಯ. ಸಕ್ಕರೆ, ಪಿಷ್ಟ ಮತ್ತು ಕರಿದ ಆಹಾರಗಳನ್ನು ಕಡಿಮೆ ಮಾಡಿ ಮತ್ತು ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳು, ಕಚ್ಚಾ ಸಲಾಡ್‌ಗಳು, ಮೊಳಕೆ ಮತ್ತು ಧಾನ್ಯಗಳನ್ನು ಸೇರಿಸಿ. ಮೊಸರು ಒಂದು ಅದ್ಭುತ ಆಹಾರ.
#ಸೌತೆಕಾಯಿಯನ್ನು ತೆಳುವಾಗಿ ಕತ್ತರಿಸಿ 10 ನಿಮಿಷಗಳ ಕಾಲ ಕಣ್ಣಿನ ರೆಪ್ಪೆಗಳ ಮೇಲಿಟ್ಟುಕೊಂಡರೆ, ಕಣ್ಣಿನ ಸುತ್ತಲೂ ಇರುವ ಕಪ್ಪುವರ್ತುಲ ಮಾಯವಾಗುತ್ತದೆ. ಗಟ್ಟಿ ಮೊಸರಿನಲ್ಲಿರುವ ನೀರನ್ನು ತೆಗೆದು ಅದನ್ನು ಮುಖಕ್ಕೆ 10-15 ನಿಮಿಷ ಮಸಾಜ್ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
#ಹಾಲು ಮತ್ತು ಅರಿಶಿನಇದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಈ ವಿಧಾನ ಒಣಚರ್ಮಕ್ಕೆ ಹೆಚ್ಚು ಸೂಕ್ತವಾಗಿದೆ.
#ಮುಖವನ್ನು ತಣ್ಣಗಿನ ನೀರಿನಿಂದ ತೊಳೆದು, ಸೌತೆಕಾಯಿ ಬಿಲ್ಲೆಗಳಿಂದ ಮುಖವನ್ನು ನಯವಾಗಿ ಉಜ್ಜಿ 10-15 ನಿಮಿಷ ಮಸಾಜ್ ಮಾಡಿದರೆ, ಬಿಸಿಲಿನಿಂದ ಮುಖ ಕಪ್ಪಗಾಗುವುದು ನಿವಾರಣೆಯಾಗುತ್ತದೆ. ನಿಂಬೆ, ಕಿತ್ತಳೆ ಹಾಗೂ ಮೂಸಂಬಿ ಹಣ್ಣುಗಳ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹೆಚ್ಚಿ 15-20 ನಿಮಿಷ ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಅರಿಶಿನ ಹಾಗೂ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ, ಕಲೆಗಳೂ ಮಾಯವಾಗುತ್ತವೆ.
#ಹಸಿರು ಟೀ ಮತ್ತು ಜೇನುಸದಾ ಮೊಡವೆಗಳ ಕಾಟದಿಂದ ಬೇಸತ್ತು ಹೋಗಿರುವವರಿಗೆ ಈ ವಿಧಾನ ಉತ್ತಮ ಆಯ್ಕೆಯಾಗಿದೆ. ಸೂಕ್ಷ್ಮಸಂವೇದಿ ಚರ್ಮದವರಿಗೂ ಇದು ಸೂಕ್ತವಾಗಿದೆ. ಹಸಿರು ಟೀಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೂಕ್ಷ್ಮರಂಧ್ರಗಳ ಒಳಗೆ ಆಗಿರುವ ಸೋಂಕನ್ನು ನಿವಾರಿಸಿ ಚರ್ಮ ಆರೋಗ್ಯದಿಂದ ಕಳಕಳಿಸಲು ನೆರವಾಗುತ್ತದೆ.
#ಹೊಳೆಯುವ ತ್ವಚೆಗೆ:ಮೆಂತ್ಯ ಬೀಜದ ಆರೈಕೆಯನ್ನು ಎಲ್ಲಾ ವಯಸ್ಸಿನ ಮಹಿಳೆಯರು ಮತ್ತು ಪುರುಷರು ಪಡೆಯಬಹುದು. ಮೆಂತ್ಯ ಬೀಜದಲ್ಲಿ ಚರ್ಮವನ್ನು ಮೃದುಗೊಳಿಸಿ, ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಇದು ಸೂರ್ಯನ ಕಿರಣದಿಂದ ಉಂಟಾದ ಕಪ್ಪು ಕಲೆಯನ್ನು ನಿವಾರಿಸಿ, ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮೆಂತ್ಯ ಪುಡಿಯಿಂದ ಚರ್ಮದ ಆರೈಕೆಗೆ ಅಧಿಕ ಸಮಯವನ್ನು ವಿನಿಯೋಗಿಸುವ ಅಗತ್ಯವಿಲ್ಲ. ಕಡಿಮೆ ಸಮಯದಲ್ಲಿಯೇ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು.