ಉಗುರು ಬೆಚ್ಚಗಿನ ನೀರನ್ನು ಕುಡಿಯುವುರಿಂದಾಗುವ ಪ್ರಯೋಜನ!

ನಿತ್ಯ ಕನಿಷ್ಠ ಒಂದು ಲೋಟ ಬೆಚ್ಚಗಿನ ಉಪ್ಪು ನೀರು, ಅದರಲ್ಲೂ ರಾತ್ರಿ ಮಲಗುವ ಮುನ್ನ ಈ ನೀರನ್ನು ಸೇವಿಸುವುದು ಅತ್ಯುತ್ತಮ ಅಭ್ಯಾಸ. ಇದರಿಂದ ರಾತ್ರಿಯಿಡೀ ಅತ್ಯುತ್ತಮವಾಗಿ ದೇಹದ ಚಯಾಪಚಯ ಕ್ರಿಯೆ ನಡೆಸಲು ಇದು ಸಹಕಾರಿ.ಹಾಗಿದ್ದರೆ ಯಾವೆಲ್ಲಾ ಸಮಸ್ಯೆಗಳಿಗೆ ಬೆಚ್ಚಗಿನ ಉಪ್ಪುನೀರು ಆರೋಗ್ಯ ಸಂಜೀವಿನಿ ಮುಂದೆ ತಿಳಿಯೋಣ:

ಜೀವಸತ್ವಗಳು ಮತ್ತು ಖನಿಜಬೆಚ್ಚಗಿನ ಉಪ್ಪುನೀರು ದೇಹಕ್ಕೆ ಅಗತ್ಯವಿರುವ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಸರಬರಾಜು ಮಾಡುತ್ತದೆ. ಆದ್ದರಿಂದ, ಇದು ದೇಹಕ್ಕೆ ಪೋಷಕಾಂಶಗಳನ್ನು ಪೂರೈಸುವ ಇನ್ನೊಂದು ಮಾರ್ಗವಾಗಿದೆ. ಇನ್ನು ಮುಖ್ಯವಾಗಿ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ ಮತ್ತು ಕಾಯಿಲೆ ಬರುವ ಯಾವುದೇ ಸಾಧ್ಯತೆಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ವಯಸ್ಸಾಗುವಿಕೆ ಪ್ರಕ್ರಿಯೆ ದೂರವಾಗುತ್ತದೆ:

ಪ್ರತಿಯೊಬ್ಬರಿಗೂ ಕೂಡ ಅಷ್ಟೇ, ನಾವು ನೋಡಲು ಚೆನ್ನಾಗಿ ಕಾಣಬೇಕು ಎನ್ನುವ ಬಯಕೆ ಇರುತ್ತದೆ, ಆದರೆ ಅಂದವನ್ನು ಹೆಚ್ಚಿಸುವ ಭರದಲ್ಲಿ, ಹಲವು ರೀತಿ ನೈಸರ್ಗಿಕ ಸೌಂದರ್ಯ ವರ್ಧಕಗಳನ್ನು ಬಳಸಿ, ಇದ್ದ ಸೌಂದರ್ಯವನ್ನು ಕೂಡ ಹಾಳು ಮಾಡಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ.ಇದರಿಂದಾಗಿ ಮುಖದಲ್ಲಿ ನೆರೆಗೆ, ಕಲೆಗಳು, ಗೆರೆಗಳು ಮೂಡಿ, ಮುಖದ ಸೌಂದರ್ಯ ಹಾಳಾಗುತ್ತಿರುವುದರ ಜೊತೆಗೆ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಇನ್ನು ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆಂದರೆ, ಆದಷ್ಟು ಎಣ್ಣೆಯುಕ್ತ ಆಹಾರಗಳಿಂದ ದೂರವಿದ್ದು, ಪ್ರತಿದಿನ ಒಂದೆರಡು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಮುಖದ ಸೌಂದರ್ಯ ಹೆಚ್ಚಾಗುವುದರ ಜೊತೆಗೆ ಯೌವನ ಭರಿತರಾಗಿ ಕೂಡ ಕಾಣುವಿರಿ.

ಇದಕ್ಕೆ ಪ್ರಮುಖ ಕಾರಣವೆಂದರೆ, ದಿನಾ ಬೆಚ್ಚಗಿನ ನೀರು ಕುಡಿಯುವುದರಿಂದ, ದೇಹದಲ್ಲಿ ವಿಷಕಾರಿ ಫ್ರೀ ರಾಡಿಕಲ್ ಅಂಶಗಳು ಕಡಿಮೆ ಆಗುತ್ತಾ ಹೋಗುತ್ತದೆ ಇದರಿಂದಾಗಿ ವಯಸ್ಸಾ ಗುವಿಕೆ ಪ್ರಕ್ರಿಯೆ ಕೂಡ ದೂರವಾಗುತ್ತದೆ.

ತೂಕ ಇಳಿಕೆಗೆ ಸಹಾಯಕ :ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿ ಡಯಟ್ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ತಣ್ಣೀರಿನ ಬದಲಿಗೆ ಬಿಸಿ ನೀರು ಸೇವಿಸಿದರೆ ವೇಗವಾಗಿ ತೂಕ ಕಳೆದುಕೊಳ್ಳಬಹುದು. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಒಂದರಿಂದ ಎರಡು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಮತ್ತು ಆ ನಂತರವೇ ದಿನವನ್ನು ಪ್ರಾರಂಭಿಸಿ.

ಒತ್ತಡ ಕಡಿಮೆ ಮಾಡುತ್ತದೆ:ಉಪ್ಪುನೀರು ಯಾವುದೇ ಒತ್ತಡಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಂಬಾ ಕೆಲಸದ ಒತ್ತಡ ಅಥವಾ ಕಠಿಣ ಕೆಲಸಗಳನ್ನು ನಿರ್ವಹಿಸಿದಾಗ ಒಂದು ಲೋಟ ಉಪ್ಪುನೀರು ಸೇವಿಸಿ ಸ್ವಲ್ಪ ವಿಶ್ರಾಂತಿ ಮಾಡಿ. ಇದರಿಂದ ಮನಸ್ಸಿಗೆ ನೆಮ್ಮದಿ ಮತ್ತು ದೈಹಿಕವಾಗಿ ತಾಜಾತನ ಅನುಭವಿಸಲು ಸಹಕಾರಿ.

ಹಲ್ಲುನೋವಿಗೂ ಮದ್ದುಹಲ್ಲುನೋವು ಮತ್ತು ಒಸಡಿನ ನೋವಿನಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಬಿಸಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಹಲ್ಲುಗಳು ದೀರ್ಘ ಕಾಲದವರೆಗೆ ಆರೋಗ್ಯವಾಗಿರಲಿದ್ದು ಊತವನ್ನು ಸಡಿಲಗೊಳಿಸುತ್ತದೆ. ಬಿಸಿ ನೀರು ಕುಡಿಯುವಾಗ ಯಾವಾಗಲೂ ನೀರು ಹೆಚ್ಚು ಬಿಸಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇದು ಸಂಭವಿಸಿದರೆ, ಇದು ಹಲ್ಲುಗಳ ದಂತ ಕವಚವನ್ನು ಹಾನಿಗೊಳಿಸಬಹುದು.

ಉತ್ತಮ ನಿದ್ರೆಗೆ:ರಾತ್ರಿ ಮಲಗುವ ಮುನ್ನ ಈ ನೀರನ್ನು ಸೇವಿಸುವುದರಿಂದ ನಿಮ್ಮ ನಿದ್ರಾಭಂಗ, ತಡವಾಗಿ ನಿದ್ರೆ ಬರುವುದು ಇಂಥಾ ಸಮಸ್ಯೆಗಳು ಇಲ್ಲವಾಗುತ್ತದೆ. ಸುಖವಾಗಿ ನಿದ್ರೆ ಮಾಡಲು ಸಹಕಾರಿಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group