» ಮಕ್ಕಳ ಎತ್ತರವನ್ನು ಹೆಚ್ಚಿಸಲು ಈ ಯೋಗಾಸನಗಳು!

ಇನ್ನು ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಯೋಗ ತುಂಬಾ ಸಹಕಾರಿ. ಮಕ್ಕಳು ಎತ್ತರವಾಗಿ ಬೆಳೆಯಲು ಈ ಪುಡಿಯನ್ನು ಹಾಲಿನಲ್ಲಿ ಹಾಕು ಕುಡಿಸಿ, ಈ ಮಾತ್ರೆ ನೀಡಿ ಮುಂತಾದ ಜಾಹೀರಾತುಗಳನ್ನು ನೋಡಿರಬಹುದು. ಆದರೆ ಇಂಥ ಜಾಹೀರಾತಿಗೆ ಮಾರುಹೋಗಿ ಮಕ್ಕಳಿಗೆ ಅಗ್ಯವಿಲ್ಲದ ಪುಡಿ, ಮಾತ್ರೆಗಳನ್ನು ನೀಡುವ ಬದಲು ಅವರಿಗೆ ಆರೋಗ್ಯಕರವಾದ ಮನೆ ಆಹಾರ ನೀಡಿ ಜತೆಗೆ ಯೋಗಾಸನದ ಈ ಭಂಗಿಗಳನ್ನು ಅಭ್ಯಾಸ ಮಾಡಿದರೆ ಬೆಳೆಯುತ್ತಾ ಎತ್ತರದ ಮೈಕಟ್ಟನ್ನು ಪಡೆಯಬಹುದಾಗಿದೆ.
ಭುಜಂಗಾಸನ: (ನಾಗರಹಾವಿನ ಭಂಗಿ)ಹೆಸರೇ ಸೂಚಿಸಿದಂತೆ ಹೆಡೆ ಎತ್ತಿದ ಸರ್ಪದ ರೀತಿಯ ಭಂಗಿ ಇದಾಗಿದೆ. ಭುಜಂಗಾಸನವು ಭುಜ, ಎದೆ ಮತ್ತು ಕಿಬ್ಬೊಟ್ಟೆಯ ಭಾಗದ ಮಾಂಸಖಂಡಗಳನ್ನು ವಿಸ್ತರಿಸುವುದು. ಇದು ಉತ್ತಮವಾದ ನಿಲುವನ್ನು ಸಾಧಿಸುವುದರ ಮೂಲಕ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವುದು.
ತಾಡಾಸನ: ಈ ಆಸನವನ್ನು ಮಾಡುವುದರಿಂದ ಮಕ್ಕಳ ತಮ್ಮ ಎತ್ತರವು ವೇಗವಾಗಿ ಹೆಚ್ಚಿಕೊಳ್ಳಬಹುದು. ಈ ಆಸನವನ್ನು 5 ರಿಂದ 10 ನಿಮಿಷಗಳ ಕಾಲ ಮಾಡಬೇಕು.
ಸರ್ವಾಂಗಾಸನ: ಮಕ್ಕಳು ಈ ಆಸನ ಮಾಡುವುದರಿಂದ ದೇಹವು ಸಂಪೂರ್ಣ ಆರೋಗ್ಯಕರವಾಗಿರುತ್ತದೆ.
ಹಲಾಸನ: ಈ ಆಸನವನ್ನು ಮಾಡುವುದರಿಂದ ಮಕ್ಕಳು ಸ್ಥೂಲಕಾಯದಿಂದ ಪಾರಾಗಲು ಸಹಾಯ ಮಾಡುತ್ತದೆ. ಮತ್ತು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಟರಾಜಾಸನ:ಈ ಭಂಗಿಯು ನಾಟ್ಯದ ಒಂದು ಭಂಗಿಯಾಗಿದ್ದು ಈ ಆಸನ ಶ್ವಾಸಕೋಶ ಮತ್ತು ಎದೆಯನ್ನು ಹಿಗ್ಗಿಸಿ, ಪೃಷ್ಠ , ಕಾಲುಗಳು, ಮೀನುಖಂಡ, ಮಣಿಕಟ್ಟು, ತೋಳುಗಳು ಮತ್ತು ಬೆನ್ನು ಮೂಳೆಗಳ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ.
ಮಾಡುವ ವಿಧಾನ: ಈ ಆಸನ ಮಾಡಲು ಮ್ಯಾಟ್ ಮೇಲೆ ಮೊದಲು ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ನಂತರ ಸ್ವಲ್ಪ ಮುಂದೆ ಬಾಗಿ ಬಲಗಾಲನ್ನು ಹಿಂದೆಕ್ಕೆ ತಂದು ಮೇಲೆ ಎತ್ತಿ ಬಲಗೈಯಲ್ಲಿ ಹಿಡಿದುಕೊಳ್ಳಿ. ಈಗ ಎಡಗೈಯನ್ನು ಮುಂದೆ ಚಾಚಿ. ಎಡಗಾಲಿನ ಮಂಡಿ ಮಡಚಿರಬಾರದು, ದೃಷ್ಟಿ ಮುಂದಕ್ಕೆ ನೆಟ್ಟಿರಲಿ. ಈ ರೀತಿ 30 ಸೆಕೆಂಡ್ ಇದ್ದು ಮತ್ತೊಂದು ಕಡೆ ಆಸನ ಮುಂದುವರೆಸಿ.
ಸೂರ್ಯ ನಮಸ್ಕಾರಸೂರ್ಯನಮಸ್ಕಾರದ 12 ಬಗೆಯ ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ಕೀಲುಗಳು ಮತ್ತು ಮಾಂಸಖಂಡಗಳು ಸಡಿಲವಾಗುತ್ತವೆ ಇದರಿಂದ ಎತ್ತರ ಬೆಳೆಯಲು ಸಹಕಾರಿ. ಸುರ್ಯನಮಸ್ಕಾರದಲ್ಲಿ ಕಿಬ್ಬೊಟ್ಟೆಯ ಅಂಗಗಳನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಈ ಆಸನ ಸಹಕಾರಿಯಾಗಿದೆ.ಶರೀರದ ಬೆಳವಣಿಗೆಯು ಮಕ್ಕಳಿಂದ ಮಕ್ಕಳಿಗೆ ಬೇರೆ-ಬೇರೆ ರೀತಿಯಲ್ಲಿ ಇರುತ್ತದೆ.
ಯೋಗಾಭ್ಯಾಸವು ಮಕ್ಕಳ ಶರೀರವನ್ನು ನಯಗೊಳಿಸಿ ಎತ್ತರ ಹೆಚ್ಚಿಸುವಲ್ಲಿ ಖಂಡಿತವಾಗಿಯೂ ಸಹಾಯಕವಾಗುತ್ತದೆ ಆದರೆ ದೇಹಕ್ಕೆ ಬೇಕಾದ ಪೌಷ್ಠಿಕಾಂಶದ ಕಡೆಗೂ ನಾವು ಗಮನಹರಿಸಬೇಕು.