ಕುಂಬಳಕಾಯಿ ಬೀಜದ ಆರೋಗ್ಯ ಪ್ರಯೋಜನ!

ಕುಂಬಳಕಾಯಿ ಬೀಜದಲ್ಲಿ ಆರೋಗ್ಯಕಾರಿ ಕೊಬ್ಬು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ಅಪಧಮನಿ ಆರೋಗ್ಯಕ್ಕೆ ಒಳ್ಳೇಯದು.ಇದರಲ್ಲಿ ಏಕಪರ್ಯಾಪ್ತ ಕೊಬ್ಬಿನಾಮ್ಲಗಳು ಇದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ನ್ನು ವೃದ್ಧಿಸುವುದು. ಇದರಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಸಹಕಾರಿ.
ಕುಂಬಳ ಕಾಯಿ: ಕುಂಬಳಕಾಯಿ ಬೀಜಗಳಲ್ಲಿ ಉತ್ತಮ ಪ್ರಮಾಣದ ಸೆರೊಟೊನಿನ್ ಅಂಶವಿದ್ದು, ಇದು ಒಂದು ರೀತಿಯ ನ್ಯೂರೋಕೆಮಿಕಲ್ ಆಗಿದ್ದು, ನೈಸರ್ಗಿಕವಾಗಿ ನಿದ್ರಾಜನಕ ಔಷಧಿಯಾಗಿ ಕೆಲಸ ಮಾಡುವುದು.ಇದರಲ್ಲಿ ಇರುವಂತಹ ಅಮಿನೋ ಆಮ್ಲ ಟ್ರೈಪ್ಟೊಫಾನ್ ಅಂಶವು ಸೆರೊಟೊನಿನ್ ಆಗಿ ಪರಿವರ್ತನೆ ಆಗಿ, ಉತ್ತಮ ನಿದ್ರೆಗೆ ಸಹಕರಿಸುವುದು. ಮಲಗುವ ಮೊದಲು ಸ್ವಲ್ಪ ಕುಂಬಳಕಾಯಿ ಸೇವನೆ ಮಾಡಿದರೆ ಅದು ತುಂಬಾ ಸಹಕಾರಿ ಆಗುವುದು.
ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಕುಂಬಳಕಾಯಿ ಬೀಜ : ಸಂಶೋಧನೆಯ ಪ್ರಕಾರ, ಕುಂಬಳಕಾಯಿಯಲ್ಲಿ ಇನ್ಸುಲಿನ್ ಪ್ರಮಾಣವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಬೀಜಗಳು ಮಧುಮೇಹ(Diabetes) ರೋಗಿಗಳಿಗೆ ಬಹಳ ಪ್ರಯೋಜನಕಾರಿ. ಮಲಗುವ ಮುನ್ನ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ಬೇಗ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಅವುಗಳನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ.
ಬೀಜಗಳನ್ನು ಯಾವಾಗ ತಿನ್ನಬೇಕು:ಒಣಗಿದ ಹುರಿದ ಕುಂಬಳಕಾಯಿ ಬೀಜಗಳನ್ನು ನೀವು ಲಘು ಆಹಾರವಾಗಿ ತೆಗೆದುಕೊಳ್ಳಬಹುದು. ಇದಲ್ಲದೆ, ನೀವು ಮಲಗುವ ಮೊದಲು ಕುಂಬಳಕಾಯಿ ಬೀಜಗಳನ್ನು ಸಹ ಸೇವಿಸಬಹುದು.
ಕುಂಬಳಕಾಯಿ ಬೀಜಗಳ ಇತರ ಪ್ರಯೋಜನಗಳು : ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಸತು, ನಾರು ಮತ್ತು ಸೆಲೆನಿಯಮ್ ಇದ್ದು, ಇದು ದೇಹವನ್ನು ಉಚಿತ ಜೀವಕೋಶದ ಹಾನಿಯಿಂದ ರಕ್ಷಿಸುತ್ತದೆ. ಸೆಲೆನಿಯಮ್ ಪುರುಷರ(Men)ನ್ನು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
ಹೃದಯದ ಸಮಸ್ಯೆ ಇದ್ದವರಿಗೂ ಇದು ಒಳ್ಳೆಯದು. ನೀವು ನಿಮ್ಮ ತೂಕ ಇಳಿಸಲು ಇಚ್ಛಿಸಿದರೆ ಪ್ರತಿದಿನ ಕುಂಬಳಕಾಯಿ ಬೀಜವನ್ನು 6 ಗ್ರಾಮ್‌ನಷ್ಟು ಸೇವಿಸಿದರೆ ಸಾಕು. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್‌ನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ರಾತ್ರಿ 10 ಕುಂಬಳಕಾಯಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆದ ಬೀಜವನ್ನು ಸೇವಿಸುವುದರಿಂದ ತೂಕ ಕಕಡಿಮೆಯಾಗುತ್ತದೆ.