ಇರುವೆಗಳ ಕಾಟಕ್ಕೆ ಮನೆಮದ್ದು..!

ಇರುವೆಗಳನ್ನು ನಿವಾರಿಸಿಕೊಳ್ಳಲು ಕೀಟನಾಶಕಗಳ ಮೊರೆ ಹೋಗಬೇಡಿ. ಇವುಗಳ ಪ್ರಭಾವ ಕಡಿಮೆಯಾದ ಕೂಡಲೆ ಇರುವೆಗಳು ಪುನಃ ಬರುತ್ತವೆ. ಇದರ ಜೊತೆಗೆ ನೀವು ಕೀಟನಾಶಕಗಳ ಬಳಕೆಯಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವಿರಿ. ಇರುವೆಗಳನ್ನು ಸ್ವಾಭಾವಿಕವಾಗಿ ಕೊಲ್ಲಲು ಹಲವಾರು ಮಾರ್ಗಗಳಿವೆ. ಹಾಗಾದರೆ ಹೇಗೆ ಕೊಲ್ಲುವುದು? ಎಂಬ ನಿಮ್ಮ ಪ್ರಶ್ನೆಗೆ ಬೋಲ್ಡ್‌ಸ್ಕೈ ಇಂದು ಇರುವೆಗಳನ್ನು ಕೊಲ್ಲಲು ಇರುವ ಕೆಲವು ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡಲಿದೆ.
ನಿಂಬೆರಸ:ಅಡುಗೆಕೋಣೆಯಲ್ಲಿರುವ ಕೀಟಗಳನ್ನು ಓಡಿಸಲು ಅತ್ಯಂತ ಶಕ್ತಿಶಾಲಿ ಮದ್ದೆಂದರೆ ಅದು ನಿಂಬೆರಸ. ನಿಂಬೆರಸವನ್ನು ತೆಗೆದು ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ. ಕೆಲವೇ ಸಮಯದಲ್ಲಿ ಇರುವೆಗಳು ಅಲ್ಲಿಂದ ಜಾಗ ಖಾಲಿ ಮಾಡಿರುವುದನ್ನು ನೀವು ನೋಡಬಹುದು. ಈ ಮದ್ದು ಖಂಡಿತವಾಗಿಯೂ ನಿಮಗೆ ನೆರವಾಗುವುದು.
- ಇನ್ನೊಂದು ವಿಧಾನ;
ಮೊದಲಿಗೆ ನೀವು ಒಂದು ಕುಟ್ಟಾಣಿಯಲ್ಲಿ ಎರಡು ಚಮಚದಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ ನಿಂಬೆ ಹಣ್ಣಿನ ಸಿಪ್ಪೆಯನ್ನು ತುರಿದು ಇದರಲ್ಲಿ ಹಾಕಿ ನಂತರ ಇದಕ್ಕೆ 10 ಲವಂಗಗಳನ್ನು ಹಾಕಿಕೊಳ್ಳಿ ನಂತರ ಈ 3ಪದಾರ್ಥಗಳನ್ನು ಕುಟ್ಟಾಣಿಯಲ್ಲಿ ಚೆನ್ನಾಗಿ ಪುಡಿಮಾಡಿಕೊಳ್ಳಿ ನಂತರ.
ಒಂದು ಟಬ್ ಅಲ್ಲಿ ಎರಡು ಲೀಟರ್ ನೀರನ್ನು ಹಾಕಿಕೊಳ್ಳಿ ಈ ನೀರಿನ ಒಳಗಡೆ ಈಗ ನಾವು ಸಿದ್ಧಪಡಿಸಿದ ಪೌಡರನ್ನು ಹಾಕಿಕೊಳ್ಳಿ ನಂತರ ಈ ನೀರಿನಲ್ಲಿ ಈ ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ನೀರಿನಿಂದ ನಿಮ್ಮ ಮನೆಯಲ್ಲಿ ಎಲ್ಲಿ ಜಾಸ್ತಿ ಇರುತ್ತವೆ ಆ ಜಾಗವನ್ನು ಚೆನ್ನಾಗಿ ವರಸಿ ಆಗ ನೋಡಿ ನಿಮ್ಮ ಮನೆಯಿಂದ ಈ ಇರುವೆಗಳು ಹೇಗೆ ಜಾಗ ಖಾಲಿ ಮಾಡುತ್ತವೆ ಎಂದು ಕಾರಣ ಈ ಇರುವೆಗಳಿಗೆ ನಾವು ಬಳಸಿರುವ ಈ ಪದಾರ್ಥದ ವಾಸನೆ ಕಂಡರೆ ಆಗುವುದಿಲ್ಲ ಹಾಗಾಗಿ ಅವುಗಳು ತಕ್ಷಣಕ್ಕೆ ನಮ್ಮ ಮನೆಯಿಂದ ಹೊರಟು ಹೋಗುತ್ತವೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಅನುಸರಿಸಿ ನಿಮ್ಮ ಮನೆಯಿಂದ ಈ ಇರುವೆಗಳನ್ನು ಓಡಿಸಿ.
ಸೋಪ್ ನೀರು :ಇದು ಇರುವೆಗಳನ್ನು ಹೊರ ಓಡಿಸಲು ಇರುವ ಒಂದು ಒಳ್ಳೆಯ ಉಪಾಯವಾಗಿದೆ. ಇದು ಅತ್ಯಂತ ಸುಲಭವಾದ ಮತ್ತು ಜನಪ್ರಿಯವಾದ ಮನೆ ಮದ್ದಾಗಿ ಬಳಕೆಯಲ್ಲಿದೆ. ಒಂದು ಸ್ಪ್ರೇ ಬಾಟಲಿನಲ್ಲಿ ಸೋಪ್ ಹಾಗು ಬಿಸಿ ನೀರನ್ನು ತುಂಬಿ. ಇದು ಇರುವೆಗಳನ್ನು ಕೊಂದು ಹಾಕುತ್ತವೆ. ಇದು ತೇವವಾಗಿದ್ದಾಗ ಮಾತ್ರ ಕೆಲಸ ಮಾಡುತ್ತದೆ. ಹಾಗಾಗಿ ಕೆಲ ದಿನಗಳ ಕಾಲ ಮತ್ತೆ ಮತ್ತೆ ಪುನರಾವರ್ತಿಸಿ.
ಕರಿಮೆಣಸಿನ ಹುಡಿದಾಲ್ಚಿನಿ ಚಕ್ಕೆ ಹುಡಿಯಂತೆ ಕರಿಮೆಣಸಿನ ಹುಡಿ ಕೂಡ ತುಂಬಾ ಒಳ್ಳೆಯದು. ಒಂದು ಚಮಚ ಕರಿಮೆಣಸಿನ ಹುಡಿಯನ್ನು ಒಂದು ಲೋಟ ಬಿಸಿನೀರಿಗೆ ಹಾಕಿಕೊಳ್ಳಿ. ಇರುವೆಗಳನ್ನು ಕಂಡಾಗ ಇದನ್ನು ನೇರವಾಗಿ ಅದರ ಮೇಲೆ ಸಿಂಪಡಿಸಿ. ಈ ಮದ್ದು ಇರುವೆಗಳಿಂದ ಮುಕ್ತಿ ನೀಡುವುದು.