ಸ್ವಾತಂತ್ರ್ಯ ಪಡೆಯಲು ಮಹಾ ನಾಯಕರುಗಳು ಕೂಗಿದ ಮುಖ್ಯ ಘೋಷಣೆಗಳ ಬಗ್ಗೆ!

ನಾವೆಲ್ಲಾ ಈ ವರ್ಷ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಜಾತಿ-ಮತ, ರಾಜ್ಯ ಎಂಬ ಬೇಧ ಮರೆತು ಭಾರತೀಯರೆಲ್ಲರೂ ಒಂದಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತೇವೆ. ಅನೇಕರು ಮಾಡಿರುವ ತ್ಯಾಗ, ಬಲಿದಾನ, ಹೋರಾಟದ ಫಲ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ಬ್ರಿಟಿಷರನ್ನು ಓಡಿಸಲು ಅವರು ಮಾಡಿರುವ ಹೋರಾಟ, ಕೂಗಿದ ಘೋಷಣೆಗಳು ಅವುಗಳ ಬಗ್ಗೆ ಕೇಳಿದಾಗ ಇಂದಿಗೂ ನಮ್ಮ ಮೈ ನವಿರೇಳುವುದು. ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜನರಲ್ಲಿ ದೇಶಾಭಿಮಾನದ ಕಿಚ್ಚು ಹೆಚ್ಚಿಸಲು ಮಹಾ ನಾಯಕರುಗಳು ಕೂಗಿರುವ ಘೋಷಣೆ ಕೇಳುವಾಗ ನಮ್ಮ ಮನದಲ್ಲಿ ದೇಶಾಭಿಮಾನ ಉಕ್ಕಿ ಹರಿಯುವುದು.
ನಾವಿಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿ ಸ್ವಾತಂತ್ರ್ಯ ಪಡೆಯಲು ಮಹಾ ನಾಯಕರುಗಳು ಕೂಗಿದ ಘೋಷಣೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
01.’ಜೈ ಜವಾನ್, ಜೈ ಕಿಸಾನ್’-ಲಾಲ್ ಬಹೂದ್ದೂರ್ ಶಾಸ್ತ್ರಿ ಈ ಘೋಷಣೆಯನ್ನು ನಾವೆಲ್ಲರೂ ಇಂದಿಗೂ ಕೂಗುತ್ತೇವೆ. ದೇಶವನ್ನು ಕಾಯುವ ಸೈನಿಕರು ಹಾಗೂ ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಕೃತಜ್ಞತೆ ಸಲ್ಲಿಸುತ್ತಾ ಈ ಘೋಷಣೆ ಕೂಗಲಾಗುವುದು.
02.ಸತ್ಯಮೇವ ಜಯತೇ: ಪಂಡಿತ್ ಮದನ್ ಮೋಹನ್ ಮಾಳವೀಯಸತ್ಯಕ್ಕೆ ಸಾವಿಲ್ಲ ಎಂಬುವುದು ಈ ಘೋಷಣೆಯ ಅರ್ಥವಾಗಿದೆ. ಈ ಘೋಷಣೆ ಕೂಗಿದವರು ಪಂಡಿತ್ ಮದನ್ ಮೋಹನ್ ಮಾಳವೀಯ. ಇದನ್ನು ದೇಶದ ಧ್ಯೇಯ ವಾಕ್ಯವಾಗಿ ಸ್ವೀಕರಿಸಲಾಗಿದೆ.
03.’ಇಂಕ್ವಿಲಾಬ್ ಜಿಂದಾಬಾದ್’-ಹಸ್ರತ್ ಮೋಹನಿ:ಭಗತ್ ಸಿಂಗ್‌ರಂತೆಯೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮುಸ್ಲಿಂ ನಾಯಕ ಹಸ್ರತ್ ಮೋಹನಿ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಘೋಷ ವಾಕ್ಯವಾಗಿ ಇದನ್ನು ಬಳಸಲಾಯಿತು. ಈ ಘೋಷ ವಾಕ್ಯ ಸ್ವಾತಂತ್ರ್ಯದ ಮಹತ್ವವನ್ನು ಸಾರುತ್ತದೆ.
04.’ನೀವು ನನಗೆ ರಕ್ತ ನೀಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ’-ಸುಭಾಷ್ ಚಂದ್ರಬೋಸ್ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆಂದರೆ ಅಹಿಂಸೆ ಮಾರ್ಗಕ್ಕಿಂತ ಕ್ರಾಂತಿಕಾರಿ ಮಾರ್ಗ ಅನುಸರಿಸಬೇಕು ಎಂದು ಕರೆ ನೀಡಿದ್ದ ಸುಭಾಷ್ ಚಂದ್ರ ಬೋಸ್, ‘ನೀವು ನನಗೆ ರಕ್ತ ನೀಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ’ ಎಂದು ಘೋಷಣೆ ಕೂಗುತ್ತಾ ಭಾರತೀಯರಲ್ಲಿ ಹೋರಾಟದ ಕಿಚ್ಚು ಹೆಚ್ಚಿಸುತ್ತಾ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ ಮಹಾನ್ ನಾಯಕ.
05.’ಮಾಡು ಅಥವಾ ಮಡಿ’- ಮಹಾತ್ಮ ಗಾಂಧಿಅಹಿಂಸೆ ಮೂಲಕ ಸ್ವಾತಂತ್ರ್ಯ ಹೋರಾಟ ಮಾಡಿದ ಮಹಾತ್ಮ ಗಾಂಧಿಯವರು ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಕೂಗಿದರು.
06.’ವಂದೇ ಮಾತರಂ’- ಬಂಕಿಮ ಚಂದ್ರ ಚಟ್ಟೋಪಾಧ್ಯಾಯ; ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇವರು ಕೂಡ ಪ್ರಮುಖರು. ಇವರು ವಂದೇ ಮಾತರಂ ಎಂಬ ಘೋಷಣೆ ಕೂಗಿದರು. ವಂದೇ ಮಾತರಂ ಎಂಬ ಹಾಡು ಮೊಳಗುವಾಗ ನಾವೆಲ್ಲರೂ ಒಂದು ಕ್ಷಣ ಸ್ತಬ್ಧರಾಗುತ್ತೇವೆ, ಅಷ್ಟು ಶಕ್ತಿಯಿದೆ ಆ ಘೋಷಣೆಗೆ.