ದೈಹಿಕ, ಮಾನಸಿಕ ಚಟುವಟಿಕೆಗಳು ಸರಗವಾಗಿರಲು ಈ ಆಸನಗಳು!

ಸೂಕ್ತ ಯೋಗಾಭ್ಯಾಸಗಳುಕೋವಿಡ್‌-19 ಸೋಂಕಿನಲ್ಲಿ ಗುಣಮುಖವಾದ ಅನೇಕ ಜನರಲ್ಲಿ ಆರೋಗ್ಯದ ಬದಲಾವಣೆಯನ್ನು ಕಾಣಬಹುದು. ಮಾನಸಿಕ ಒತ್ತಡ ನಿವಾರಣೆ ಹಾಗೂ ವಿವಿಧ ಮಾನವ ಕ್ರಿಯಾತ್ಮಕ ವ್ಯವಸ್ಥೆಯನ್ನು (ಹ್ಯೂಮನ್‌ ಫ‌ಂಕ್ಷನಲ್‌ ಸಿಸ್ಟಮ್‌) ವೃದ್ಧಿಸಿಕೊಳ್ಳಲು ಈ ಕೆಳಗಿನ ಯೋಗಾಭ್ಯಾಸವನ್ನು ಮಾಡುವುದು ಸೂಕ್ತ.

1. ತಾಡಾಸನ: ನಿಂತು ಮಾಡುವ ಆಸನಗಳಲ್ಲಿ ಒಂದಾದ ತಾಡಾಸನ ಸುಲಭವಾಗಿ ಅಭ್ಯಾಸ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯ ಬಹುದು. ಈ ಆಸನ ಅಭ್ಯಾಸ ಮಾಡುವು ದರಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

2. ವೀರಭದ್ರಾಸನ: ನಿಂತು ಮಾಡುವ ಆಸನಗಳಲ್ಲಿ ಒಂದಾದ ವೀರಭದ್ರಾಸನವು ಎದೆಯ ಭಾಗವನ್ನು ವಿಸ್ತರಣೆ ಮಾಡುವ ಮೂಲಕ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

3. ಸರಳ ಭುಜಂಗಾಸನ: ಭುಜಂಗ ಎಂದರೆ ಹೆಡೆ ಎತ್ತಿದ ಸರ್ಪ; ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಬೆನ್ನು, ಎದೆ, ಹೊಟ್ಟೆ ಭಾಗದ ನರಗಳನ್ನು ಬಲಪಡಿಸಬಹುದು ಹಾಗೂ ಹೃದಯ ಮತ್ತು ಶ್ವಾಸಕೋಶಗಳು ಚೈತನ್ಯಗೊಳ್ಳುವುದು. ಉಸಿರಾಟದ ಕ್ರಿಯೆ ಸರಾಗವಾಗಿ ನಡೆಯುವುದು.

4. ಅರ್ಧ ಉಷ್ಟ್ರಾಸನ: ಈ ಆಸನ ಅಭ್ಯಾಸದಿಂದ ಜೀರ್ಣಕ್ರಿಯೆಯು ಹಾಗೂ ಉಸಿರಾಟ ಕ್ರಿಯೆಯು ಸುಧಾರಣೆಗೊಳ್ಳುತ್ತದೆ.

5.ಶಿಶು ಆಸನ (ಮಕ್ಕಳ ಭಂಗಿ): ಬಾಲಾಸನ/ಶಿಶುವಾಸನ ಎಂದೂ ಕರೆಯಲ್ಪಡುವ ಮಗುವಿನ ಭಂಗಿಯು ಮನಸ್ಸು ಮತ್ತು ದೇಹದ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಬಾಲಾಸನವು ಸಂಸ್ಕೃತ ಪದಗಳಾದ ಬಾಲ ಮತ್ತು ಆಸನಗಳಿಂದ ಬಂದಿದೆ. ಬಾಲ ಎಂದರೆ ಚಿಕ್ಕ ಹುಡುಗ ಅಥವಾ ಮಗು.

ಇದು ದೇಹಕ್ಕೆ ವಿಶ್ರಾಂತಿ ನೀಡುವ ಪ್ರಮುಖವಾದ ಭಂಗಿಯಾಗಿದೆ. ಇದು ಇಂದ್ರಿಯಗಳಿಗೆ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದು ಮೂಲ ಯೋಗ ಭಂಗಿಗಳಲ್ಲೊಂದಾಗಿದೆ. ನಿಷ್ಕ್ರಿಯವಾಗಿರುವುದು ಕೂಡ ಕ್ರಿಯೆ ಮಾಡುವಂತೆಯೇ ನಮ್ಮ ಆರೋಗ್ಯಕ್ಕೆ ಸಹಾಯಕವಾಗಬಹುದು ಎಂಬುದನ್ನು ಈ ಆಸನ ನಮಗೆ ಕಲಿಸುತ್ತದೆ.

6.ಉತ್ಕಟಾಸನ (ಕುರ್ಚಿ ಭಂಗಿ): ಈ ಆಸನವನ್ನು ನಿಂತಿರುವ ರೀತಿಯಲ್ಲಿ ಪ್ರಾರಂಭಿಸಬೇಕಾಗುತ್ತದೆ. ನೀವು ಕುರ್ಚಿಯಲ್ಲಿ ಕುಳಿತಿರುವಂತೆ ಕಲ್ಪನೆ ಮಾಡಿಕೊಂಡು ನಿಮ್ಮ ಮೊಣಕಾಲುಗಳನ್ನು ಬಾಗಿಸಿ ದೇಹವನ್ನು ಕೆಳಗಿಳಿಸಿ. ಹೀಗೆ ನಿಂತು ಮುಂದಕ್ಕೆ ಬಾಗಿರುವ ವಿನ್ಯಾಸವು ಅಷ್ಟಾಂಗ ಯೋಗ ಸೂರ್ಯ ನಮಸ್ಕಾರ ದಿನಚರಿಯ ಭಾಗವಾಗಿದೆ. ಈ ಭಂಗಿಯು ನಿಮ್ಮ ಕಾಲುಗಳು, ಬೆನ್ನಿನ ಮೇಲ್ಭಾಗ ಮತ್ತು ಭುಜಗಳನ್ನು ಬಲಪಡಿಸುತ್ತದೆ ಮತ್ತು ಸಮತೋಲನವನ್ನು ಸುಧಾರಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group