ಸಾವಯವ ಕೃಷಿಕರಿಗೆ ಸರ್ಕಾರದಿಂದ ದೊರೆಯಲಿದೆ ₹50,000 ಸಬ್ಸಿಡಿ

ನೀವು ಸಾವಯವ ಕೃಷಿಯನ್ನು ಕೈಗೊಳ್ಳುತ್ತಿದ್ದೀರಾ? ಹಾಗಿದ್ದರೆ ನಿಮಗೆ ಕೇಂದ್ರ ಸರ್ಕಾರ ನೀಡುತ್ತಿದೆ ರೂ 50,000 ಸಬ್ಸಿಡಿ. ಇಲ್ಲಿದೆ ಸಂಪೂರ್ಣ ವಿವರ.

ಸಾವಯವ ಕೃಷಿಯನ್ನು ಮಾಡುವ ರೈತರಿಗಾಗಿ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು “ಪರಂಪರಾಗತ ಕೃಷಿ ವಿಕಾಸ ಯೋಜನೆ”(Paramparagat Krishi Vikas Yojana) ಯನ್ನು ಜಾರಿಗೆ ತಂದಿದ್ದು, ಇಲ್ಲಿ ಸಾವಯವ ಕೃಷಿಯನ್ನು ಕೈಗೊಳ್ಳುವ ರೈತರಿಗೆ ಸರ್ಕಾರದ ವತಿಯಿಂದ ರೂ.50,000 ಸಬ್ಸಿಡಿ ದೊರೆಯಲಿದೆ.ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲೆಂದು ಕೇಂದ್ರ ಸರ್ಕಾರ ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ (Paramparagat Krishi Vikas Yojana)ಯನ್ನು ಜಾರಿಗೆ ತಂದಿದೆ.

ಯೋಜನೆ ಅಡಿಯಲ್ಲಿ ಪ್ರತಿ ಹೆಕ್ಟೇರ್‌ ಭೂಮಿಯಲ್ಲಿ ಸಾವಯವ ಕೃಷಿ ಮಾಡಲು ಪ್ರೋತ್ಸಾಹ ಧನ ನೀಡಲಾಗುತ್ತದೆ.2015 ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ಪ್ರತಿ ರೈತರಿಗೆ 50,000 ರೂಪಾಯಿ ನೆರವು ನೀಡಲಾಗುವುದು.

ಪ್ರತಿ ರೈತನಿಗೆ 50 ಸಾವಿರ ರೂಪಾಯಿ ಸಹಾಯಧನ!

ಈ ಯೋಜನೆಯಡಿ ಪ್ರತಿ ರೈತರಿಗೆ ಮೂರು ವರ್ಷಗಳ ಕಾಲ 50 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ.ಪರಂಪರಾಗತ ಕೃಷಿ ವಿಕಾಸ ಯೋಜನೆ (Paramparagat Krishi Vikas Yojana)ಕೇಂದ್ರ ಸರ್ಕಾರವು ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಕ್ಕಾಗಿ 2015ರಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ರಾಷ್ಟ್ರೀಯ ಮಣ್ಣು ಫಲವತ್ತತೆ ಮಿಷನ್ ನ್ಯಾಷನಲ್ ಸುಸ್ಥಿರ ಕೃಷಿ ಮಿಷನ್ನಡಿ ಜಾರಿ ಮಾಡುತ್ತಿರುವ ಯೋಜನೆಯಾಗಿದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆ ಅನುದಾನ:

ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮವಾಗಿ 60/40 ಅನುಪಾತದಲ್ಲಿ ಅನುದಾನ ನೀಡುತ್ತಿದೆ. ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಿಗೆ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ 90:10 ಅನುಪಾತದಲ್ಲಿ ಅನುದಾನ ನೀಡುತ್ತವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.100ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಸಾವಯವ ಕೃಷಿಗೆ ಪ್ರಮಾಣ ಪತ್ರ ಪಡೆಯವುದು ಹೇಗೆ?

ಸಾವಯವ ಕೃಷಿಗೆ ಪ್ರಮಾಣ ಪತ್ರ ಪಡೆಯಲು, ಏಜೆಂಟ್ ಮೂಲಕ ಅರ್ಜಿ ಸಲ್ಲಿಸಬೇಕು. PKVY ಅಡಿಯಲ್ಲಿ, ಸಾವಯವ ಗ್ರಾಮವನ್ನು ಕ್ಲಸ್ಟರ್ ವಿಧಾನ ಮತ್ತು ಪಿಜಿಎಸ್ ಪ್ರಮಾಣೀಕರಣದ ಮೂಲಕ ಸಾವಯವ ಕೃಷಿಯನ್ನು ಉತ್ತೇಜಿಸಲಾಗುತ್ತದೆ. PGS ಎಂಬುದು ಸಾವಯವ ಉತ್ಪನ್ನಗಳನ್ನು ಪ್ರಮಾಣೀಕರಣ ಮಾಡುವ ಪ್ರಕ್ರಿಯೆಯಾಗಿದ್ದು, ಗುಣಮಟ್ಟ ದರ್ಜೆಗೆ ಅನುಗುಣವಾಗಿ ಅವುಗಳ ಉತ್ಪಾದನೆಯು ನಡೆಯುತ್ತದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲೆಗಳು

ಆಧಾರ್ ಕಾರ್ಡ್

ನಿವಾಸ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ವಯಸ್ಸಿನ ಪ್ರಮಾಣಪತ್ರ

ಪಡಿತರ ಚೀಟಿ

ಮೊಬೈಲ್ ನಂಬರ್

ರ್ಪಾಸ್ಪೋರ್ಟ್ ಅಳತೆಯ ಫೋಟೋ.

ಅರ್ಜಿ ಸಲ್ಲಿಕೆ ವಿಧಾನ:

ಮೊದಲು ನೀವು ಪರಂಪರಾಗತ್ ಕೃಷಿ ವಿಕಾಸ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.ಮುಖಪುಟದಲ್ಲಿ, ಅಪ್ಲೈ ಬಟನ್‌ ಕ್ಲಿಕ್ ಮಾಡಬೇಕು.ಈಗ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮುಂತಾದ ಅಗತ್ಯ ಮಾಹಿತಿಯನ್ನು ನಮೂದಿಸಬೇಕು.ಅದರ ನಂತರ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.ನಂತರ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group