ಸೊಳ್ಳೆ ಕಾಟ ತಡೆಯೋಕೆ ಗೂಗಲ್ ಪ್ಲೇ ಸ್ಟೋರ್ ಗೆ ಬಂದಿವೆ ಹೊಸ ಆ್ಯಪ್..!

ಹೌದು.. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸೊಳ್ಳೆಗಳನ್ನು ಓಡಿಸಲು ಹಲವು ಆ್ಯಪ್ ಗಳು ಬಂದಿದ್ದು, ಮಸ್ಕಿಟೋ ಕಿಲ್ಲರ್, ಮಸ್ಕಿಟೋ ಸೌಂಡ್, ಫ್ರೀಕ್ವೆನ್ಸಿ ಜನರೇಟರ್ ಹೀಗೆ ಹತ್ತು ಹಲವಾರು ಆ್ಯಪ್‌ಗಳನ್ನು ಕಾಣಬಹುದಾಗಿದೆ. ಈ ಮಸ್ಕಿಟೋ ಕಿಲ್ಲರ್ ಅಪ್ಲಿಕೇಶನ್‌ಗಳು ಆವರ್ತನದ ಧ್ವನಿಯನ್ನು ಉತ್ಪಾದಿಸಲಿದ್ದು, ಈ ಧ್ವನಿಗೆ ಸೊಳ್ಳೆಗಳು ದೂರ ಹೋಗುತ್ತವೆ ಎಂಬುದು ತಿಳಿದು ಬಂದಿದೆ. ಅಲ್ಲದೇ ಈ ಅಪ್ಲಿಕೇಶನ್ ಧ್ವನಿ ಶಬ್ಧವು ತುಂಬಾ ಕಡಿಮೆ ಇದ್ದು, ಮನುಷ್ಯರ ಕಿವಿಗೆ ಕೇಳುವುದಿಲ್ಲ ಎಂದು ಆ್ಯಪ್ ಡೌನ್ ಲೋಡ್ ಮಾಡಿಕೊಂಡ ಹಲವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಸೊಳ್ಳೆಗಳನ್ನು ಕೊಲ್ಲಲು ಅಥವಾ ಅವುಗಳ ಗೃಹ ಪ್ರವೇಶಿಸದಂತೆ ಈ ಆ್ಯಪ್ ಗಳು ಸಹಕಾರಿಯಾಗಿವೆ ಎಂದು ಡೆವಲಪರ್ಗಳು ಹೇಳಿಕೊಳ್ಳುತ್ತಿದ್ದರೂ ಗೂಗಲ್ ಮಾತ್ರ ಅತೀ ಕಡಿಮೆ ರೇಟಿಂಗ್ ಇರುವ ಅಪ್ಲಿಕೇಶನ್‌ಗಳು ಎಂದು ತೋರಿಸುತ್ತಿದೆ.
ಈ ಅಪ್ಲಿಕೇಶನ್‌ಗಳು ಡೌನ್‌ಲೋಡ್ ಮಾಡಿಕೊಂಡ ಸ್ಮಾರ್ಟ್ ಜನರು ಕಡಿಮೆ ರೇಟಿಂಗ್ ನೀಡುವ ಮೂಲಕ ಈ ಆ್ಯಪ್ ಗಳಿಂದ ಯಾವುದೇ ಉಪಯೋಗವಿಲ್ಲ ಎಂಬ ಮಾಹಿತಿಯನ್ನು ರವಾನಿಸಿದ್ದು, ಬಹುತೇಕರು 5 ರಲ್ಲಿ 2 ಮತ್ತು ಕೆಲವರು 3 ರೇಟಿಂಗ್ ಮಾತ್ರ ನೀಡಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಈ ಅಪ್ಲಿಕೇಶನ್‌ಗಳಿಂದ ಕೆಲವರಿಗೆ ಸಹಾಯವಾಗಿದ್ದರೆ ಮತ್ತೂ ಕೆಲವರಿಗೆ ಅವರು ನಿರೀಕ್ಷೆ ಮಟ್ಟದ ಫಲಿತಾಂಶ ಸಿಕ್ಕಿಲ್ಲ. ಹಾಗಾಗಿ ಯಾರ ಅಭಿಪ್ರಾಯಕ್ಕೂ ಒತ್ತು ನೀಡದೇ, ಸ್ವತ: ನೀವೇ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಆ್ಯಪ್ ನ ಕಾರ್ಯ ದಕ್ಷತೆಯನ್ನು ಪರೀಕ್ಷಿಸಬಹುದ್ದಾಗಿದ್ದು, ಆದರಿಂದ ಉಪಯೋಗವಾದರೆ ಉತ್ತಮ ರೇಟಿಂಗ್ ನೀಡುವ ಮೂಲಕ ಆ್ಯಪ್ ಡೌನ್ ಲೋಡಿ ಮಾಡಿಕೊಳ್ಳುವಂತೆ ಇತರರಿಗೂ ರೆಫರ್ ಮಾಡಬಹುದಾಗಿದೆ.